ಸರಳವಾಗಿ ಸಿದ್ದಗಂಗಾ ಶ್ರೀಗಳ 114ನೇ ಜನ್ಮೋತ್ಸವ ಆಚರಣೆ

Public TV
1 Min Read

ನೆಲಮಂಗಲ: ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಸಿದ್ದಗಂಗೆಯ ಸಿದ್ದಪುರುಷ ಶ್ರೀ ಶಿವಕುಮಾರ ಮಹಾಸ್ವಾಮಿಗಳ 114 ನೇ ಜನ್ಮೋತ್ಸವವನ್ನು ಬೆಂಗಳೂರು ಹೊರವಲಯ ನೆಲಮಂಗಲ ನಗರದ ಪವಾಡ ಬಸವಣ್ಣ ದೇವರ ಮಠದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.

ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಶ್ರೀಗಳ ಬೃಹತ್ ಚಿತ್ರಕ್ಕೆ ಪುಷ್ಪಾ ನಮನ ಮಾಡುವ ಮೂಲಕ 114 ನೇ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು. ರಾಜ್ಯದಲ್ಲಿ ಮಹಾಮಾರಿ ಕೊರೊನ ಎರಡನೇ ಅಲೆಯ ನಡುವೆ ಸ್ವಾಮೀಜಿಗಳು ಹಾಗೂ ಶಾಲೆಯ ಮಕ್ಕಳು ಮಾಸ್ಕ್ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಆರೋಗ್ಯದ ದೃಷ್ಟಿಯಿಂದ ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ಶ್ರೀಗಳ ಜನ್ಮದಿನವನ್ನು ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು, ಕಲಿಯುಗದ ಬಸವಣ್ಣ ನಮ್ಮ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಯವರು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲಾ ಧರ್ಮವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಮಠದಲ್ಲಿ ಶಿಕ್ಷಣ, ಪ್ರಸಾದ, ವಸತಿ ನೀಡುವ ಮೂಲಕ ಕೋಟ್ಯಂತರ ಮಕ್ಕಳಿಗೆ ದಾರಿಯಾಗಿದ್ದು, ಮುಂದಿನ ಪೀಳಿಗೆಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಪಾವನವಾಗುವುದು ಎಂದರು. ಈ ವೇಳೆ ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ, ಮಠದ ಶಾಲೆಯ ಶಿಕ್ಷಕರು ಹಾಗೂ ಶರಣ ಬಂಧುಗಳ ಮಕ್ಕಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *