ಸರಣಿ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ದೊಡ್ಡ ಮೊತ್ತದ ಬಹುಮಾನ: ಸೌರವ್ ಗಂಗೂಲಿ

Public TV
1 Min Read

– ಗೆಲುವಿನ ಮುಂದೆ ಬಹುಮಾನ ಶೂನ್ಯ ಎಂದ ದಾದಾ

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯಾಟದಲ್ಲಿ ಗೆಲ್ಲುವ ಮೂಲಕ ಭಾರತ ಸರಣಿ ವಶಪಡಿಸಿಕೊಂಡು ಸಂಭ್ರಮಿಸಿತ್ತು. ಈ ಖುಷಿಯ ನಡುವೆ ಸರಣಿ ಗೆದ್ದ ಭಾರತೀಯ ಆಟಗಾರರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಂಪರ್ ಗಿಫ್ಟ್ ನೀಡಿದ್ದಾರೆ. 2-1 ಅಂತರದಲ್ಲಿ ಸರಣಿಗೆದ್ದ ಭಾರತ ತಂಡಕ್ಕೆ 5 ಕೋಟಿ ರೂಪಾಯಿ ಬೋನಸ್ ಆಗಿ ನೀಡಿರುವುದಾಗಿ ಗಂಗೂಲಿ ಟ್ವಿಟ್ಟರ್ ನ ಮೂಲಕ ತಿಳಿಸಿದ್ದಾರೆ.

ಇದು ಭಾರತದ ಐತಿಹಾಸಿಕ ಗೆಲುವು ಆಸ್ಟ್ರೇಲಿಯಾ ನೆಲದಲ್ಲಿ ಅವರನ್ನೆ ಸೋಲಿಸಿ ಸರಣಿ ಗೆದ್ದಿರುವುದು ಭಾರತದ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಎಂದಿಗೂ ಅಚ್ಚಳಿಯದೆ ಉಳಿಯಲಿದೆ. ಗೆಲುವಿನ ಕಾಣಿಕೆಯಾಗಿ 5 ಕೋಟಿ ಬೋನಸ್ ನೀಡುತ್ತಿದ್ದು, ಇದು ಈ ಗೆಲುವಿನ ಮುಂದೆ ಶೂನ್ಯವಾಗಿದೆ. ಆಸ್ಟ್ರೇಲಿಯಾ ಸರಣಿಗೆ ಪ್ರವಾಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಉತ್ತಮವಾಗಿ ಆಡಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಸಂಭವಿಸಿದ್ದ ಲಘು ಹೃದಯಾಘಾತದಿಂದ ಚೇತರಿಸಿಕೊಂಡು ಮನೆಯಲ್ಲೇ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾರೆ. ಡಾಕ್ಟರ್‍ಗಳ ಸೂಚನೆಯಂತೆ ಅಂಜಿಯೋಪ್ಲ್ಯಾಸ್ಟಿ ಟೆಸ್ಟ್ ಮಾಡಿದ ಬಳಿಕ ಆಸ್ಪತ್ರೆಯಿಂದ ಮನೆಗೆ ಬಂದಿರುವ ಗಂಗೂಲಿ ಟ್ವೀಟ್ ಮೂಲಕ ಭಾರತೀಯ ಆಟಗಾರರಿಗೆ ಶುಭ ಕೋರಿದ್ದಾರೆ.

ಭಾರತದ ವಿಜಯದ ಬಳಿಕ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಬಿಸಿಸಿಐ 5 ಕೋಟಿ ಬೋನಸ್ ಬಹುಮಾನವನ್ನು ಘೋಷಿಸುತ್ತಿದೆ. ಇದು ಭಾರತ ಕ್ರಿಕೆಟ್‍ಗೆ ಸಿಕ್ಕ ವಿಶೇಷ ಗೌರವ. ಇದು ನಿಮ್ಮ ಪಾತ್ರ ಮತ್ತು ಆಟದ ಬದ್ಧತೆಗೆ ಸಿಕ್ಕ ಜಯ ಎಂದಿದ್ದಾರೆ.

ಭಾರತ ತಂಡ ಐತಿಹಾಸಿಕ ಗೆಲುವು ದಾಖಲಿಸುತ್ತಿದ್ದಂತೆ ಪ್ರಧಾನಿ ಮೋದಿ, ಸಹಿತ ಹಲವು ಹಿರಿಯ ಕ್ರಿಕೆಟ್ ಆಟಗಾರರು ತಂಡದ ಗೆಲುವನ್ನು ಟ್ವಿಟ್ಟರ್ ನಲ್ಲಿ ಶ್ಲಾಘಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *