ಸನ್ನಿಲಿಯೋನ್ ಮನೆಯಲ್ಲಿ ಜಿರಳೆ ಕಾಟ- ದಂಪತಿಯನ್ನು ಕಂಡು ನಕ್ಕ ನೆಟ್ಟಿಗರು

Public TV
1 Min Read

ಮುಂಬೈ: ಬಾಲಿವುಡ್ ನಟಿ ಸನ್ನಿಲಿಯೋನ್ ಅವರಿಗೆ ಮನೆಯಲ್ಲಿ ಜಿರಳೆ ಕಾಟವಂತೆ. ಈ ವಿಚಾರವಾನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮನೆಯಲ್ಲಿ ಸೇರಿಕೊಂಡಿದ್ದ ಜಿರಳೆಯನ್ನು ಹೊರಗೆ ಹಾಕಲು ದಂಪತಿಗಳಿಬ್ಬರು ಪ್ರಯತ್ನಿಸುತ್ತಿರುವ ವೀಡಿಯೋವನ್ನು ಶೇರ್ ಮಾಡಿಕೊಂಡು ವುಮೆನ್ vs ವೈಲ್ಡ್ ಎಂದು ಶೀರ್ಷಿಕೆ ನೀಡಿದ್ದಾರೆ. ವೀಡಿಯೊ ಕೊನೆಯಲ್ಲಿ ವೆಬರ್ ಅವಾಂತರವನ್ನು ನೋಡಿ ಎಂದು ಸನ್ನಿಲಿಯೋನ್ ತಮ್ಮ ಪತಿ ಡೇನಿಯಲ್ ಅವರ ಕಾಲೆಳೆದಿದ್ದಾರೆ. ಈ ವಿಡಿಯೊ ಚಿತ್ರೀಕರಣದಲ್ಲಿ ಯಾವ ಕೀಟಕ್ಕೂ (ಜಿರಳೆಗೂ) ಹಾನಿಯನ್ನುಂಟು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜಿರಳೆಯ ಚುರುಕುತನವನ್ನೂ ಕೊಂಡಾಡಿರುವ ಸನ್ನಿ, ಅದು ನಮಗಿಂತ ಬಹಳ ಚುರುಕಾಗಿತ್ತು. ಬಹುಶಃ ಅದಕ್ಕೇ ಜಿರಳೆ ನಮಗೆ ಸಿಗಲಿಲ್ಲ ಎಂದಿದ್ದಾರೆ. ಈ ವೀಡಿಯೊ ಈಗ ವೈರಲ್ ಆಗಿದ್ದು, ಸನ್ನಿ ಲಿಯೋನ್ ಅವರ ಹಾಸ್ಯ ಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Sunny Leone (@sunnyleone)

ಸನ್ನಿ ಲಿಯೋನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಹಾರುವ ಜಿರಳೆಯೊಂದನ್ನು ಅಟ್ಟಿಸಿಕೊಂಡು ಹೋಗಿದ್ದು, ಅದನ್ನು ಮನೆಯಿಂದ ಹೊರಹಾಕಲು ಬಹಳ ಪ್ರಯತ್ನಪಟ್ಟಿದ್ದಾರೆ. ಸನ್ನಿಯವರಿಂದ ಸಾಧ್ಯವಾಗದ ಈ ಕೆಲಸಕ್ಕೆ ಅವರ ಪತಿ ಡೇನಿಯಲ್ ವೆಬರ್ ಕೂಡಾ ಸಹಾಯಕ್ಕೆ ಬಂದಿದ್ದಾರೆ. ಇನ್ನೇನು ಸಿಕ್ಕಿತು ಅನ್ನುವಷ್ಟರಲ್ಲಿ ತಪ್ಪಿಸಿಕೊಂಡ ಆ ಕೀಟವನ್ನು ಬಡಿಯಲು ತಮ್ಮ ಅಂಗಿಯನ್ನೂ ತೆಗೆದು ಅದರ ಮೂಲಕ ಹಿಡಿಯಲು ವೆಬರ್ ಪ್ರಯತ್ನಿಸುತ್ತಾರೆ. ಆದರೆ ಜಿರಳೆ ತಪ್ಪಸಿಕೊಂಡು ಹೋಗಿದೆ.

 

View this post on Instagram

 

A post shared by Sunny Leone (@sunnyleone)

ಇತ್ತೀಚೆಗಷ್ಟೇ ಹೊಸ ಮನೆಗೆ ಪ್ರವೇಶ ಮಾಡಿದ ಸುದ್ದಿಯನ್ನು ಸನ್ನಿ ಹಂಚಿಕೊಂಡಿದ್ದರು. ಛೇ, ಸನ್ನಿಯವರ ಹೊಸ ಮನೆಯಲ್ಲೂ ಜಿರಳೆ ಕಾಟವೇ! ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *