‘ಸತ್ಯವು ಮೇಲುಗೈ ಸಾಧಿಸುತ್ತೆ’ – ಕೈ ಮುಗಿದು ವಿಡಿಯೋ ರಿಲೀಸ್ ಮಾಡಿದ ರಿಯಾ

Public TV
2 Min Read

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬ ಮಾಡುತ್ತಿರುವ ಆರೋಪದ ಬಗ್ಗೆ ಕೊನೆಗೂ ನಟಿ ರಿಯಾ ಚಕ್ರವರ್ತಿ ಮೌನ ಮುರಿದಿದ್ದಾರೆ.

ರಿಯಾ ತಮ್ಮ ವಕೀಲರ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ರಿಲೀಸ್ ಮಾಡಿದ್ದಾರೆ. ಈ ಮೂಲಕ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ‘ಸತ್ಯವು ಮೇಲುಗೈ ಸಾಧಿಸುತ್ತದೆ’ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಜೂ.8ರ ವರೆಗೂ ಸುಶಾಂತ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದೆ: ರಿಯಾ ಸ್ಪಷ್ಟನೆ

ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಒಂದು ತಿಂಗಳ ನಂತರ ರಿಯಾ ಚಕ್ರವರ್ತಿ ವಿರುದ್ಧ ಬಿಹಾರದಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ರಿಯಾ ತನ್ನ ಮಗನ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಅಲ್ಲದೇ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಬಿಹಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ‘ಹೃದಯಕ್ಕಾದ ಗಾಯ ಇನ್ನು ವಾಸಿಯಾಗಿಲ್ಲ’- ಸುಶಾಂತ್ ಸಿಂಗ್ ಪ್ರೇಯಸಿಯ ಎಮೋಷನಲ್ ಪೋಸ್ಟ್

ಈ ಮಧ್ಯೆ ವಿಡಿಯೋ ರಿಲೀಸ್ ಮಾಡಿರುವ ರಿಯಾ, “ನನಗೆ ದೇವರು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆ ಇದೆ. ಹೀಗಾಗಿ ನನಗೆ ನ್ಯಾಯ ಸಿಗುತ್ತದೆ ಎಂದು ನಾನು ನಂಬುತ್ತೇನೆ. ಏನೆಲ್ಲಾ ನಡೆಯುತ್ತಿದೆ ಎಂದು ನಾನು ಗಮನಿಸುತ್ತಿದ್ದೇನೆ. ಈ ಸಂಬಂಧ ನನ್ನ ವಕೀಲರ ಜೊತೆ ಸಂಪರ್ಕದಲ್ಲಿದ್ದೇನೆ” ಎಂದು ರಿಯಾ ಚಕ್ರವರ್ತಿ ಕೈ ಮುಗಿದು  ಹೇಳಿದ್ದಾರೆ.

ಅಷ್ಟೇ ಅಲ್ಲದೇ ಕೊನೆಯಲ್ಲಿ “ಸತ್ಯ ಮೇವ ಜಯತೆ, ಸತ್ಯವು ಮೇಲುಗೈ ಸಾಧಿಸುತ್ತದೆ” ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ತಂದೆ, ನಟಿ ರಿಯಾ ಚಕ್ರವರ್ತಿ ಸೇರಿದಂತೆ ಆರು ಮಂದಿ ವಿರುದ್ಧ ಪಾಟ್ನಾದಲ್ಲಿ ಎಫ್‍ಐಆರ್ ದಾಖಲಿಸಿದ್ದರು. ಇದೀಗ ಈ ತನಿಖೆಯನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ನಟಿ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಸ್ತುತ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಕಿಶೋರ್ ಸಿಂಗ್ ಸಲ್ಲಿಸಿರುವ ಎಫ್ಐಆರ್‌ನಲ್ಲಿ ತಪ್ಪಾಗಿ ಹೇಳಿಕೆ ನೀಡಿದ್ದು, ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಅಲ್ಲದೇ ಪಟ್ನಾದಲ್ಲಿ ಅವರಿಗೆ ಬಹಳ ಪ್ರಭಾವ ಇದೆ. ಇದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ನ್ಯಾಯ ಸಮ್ಮತ ತನಿಖೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಬಿಹಾರದಲ್ಲಿ ದಾಖಲಿಸಿರುವ ಎಫ್ಐಆರ್‌ನಲ್ಲಿ ತನಿಖೆಯನ್ನು ಮುಂಬೈಗೆ ವರ್ಗಾಯಿಹಿಸಬೇಕು ಎಂದು ರಿಯಾ ತಮ್ಮ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ರಿಯಾ ಸಲ್ಲಿಸಿರುವ ಅರ್ಜಿಯಲ್ಲಿ, ನಾನು ಜೂನ್ 8, 2020 ರವರೆಗೆ ಸುಶಾಂತ್ ಸಿಂಗ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದೆ ಎಂಬ ಮಾಹಿತಿಯನ್ನ ಕೋರ್ಟಿಗೆ ನೀಡಿದ್ದಾರೆ. ಅದಾದ ಬಳಿಕ ನಾನು ತಾತ್ಕಾಲಿಕವಾಗಿ ಮುಂಬೈನಲ್ಲಿರುವ ನನ್ನ ಸ್ವಂತ ನಿವಾಸಕ್ಕೆ ಸ್ಥಳಾಂತರಗೊಂಡೆ. ನಟನ ಸಾವಿನಿಂದಾಗಿ ತೀವ್ರ ಆಘಾತಕ್ಕೊಳಗಾಗಿದ್ದೇನೆ. ಜೊತೆಗೆ ನಟನ ಸಾವಿನ ನಂತರ ಅನೇಕ ಅತ್ಯಾಚಾರ ಮತ್ತು ಸಾವಿನ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *