ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಶಿವನಗರ ವಾರ್ಡ್-107ರಲ್ಲಿ ಕೊರೊನಾ ಸಾಂಕ್ರಮಿಕ ರೋಗದಿಂದ ಆರ್ಥಿಕವಾಗಿ ಸಂಕಷ್ಟ ಎದುರಿಸುವ ಸಂದರ್ಭದಲ್ಲಿ ಜನರು ಹಸಿವಿನಿಂದ ಬಳಲಬಾರದು ಎಂದು ಶಿವನಗರ ವಾರ್ಡಿನ ದೊಡ್ಡಮ್ಮ ದೇವಿ ದೇವಸ್ಥಾನ, ಕರುಮಾರಿಯಮ್ಮ ದೇವಸ್ಥಾನ ಮತ್ತು ಗಣೇಶ ದೇವಸ್ಥಾನ, ಮಹಾಗಣಪತಿನಗರ ಮತ್ತು ಸಾಯಿಬಾಬಾ ದೇವಸ್ಥಾನ ಬಳಿ ಹಾಗೂ ಹಿರಿಯ ನಾಗರಿಕರಿಗೆ ಅನುಕೂಲಕ್ಕೆ ಮೊಬೈಲ್ ಕ್ಯಾಂಟೀನ್ ಮೂಲಕ ಪ್ರತಿದಿನ ಅನ್ನ ಸಂತರ್ಪಣೆ ಸೇವೆಯನ್ನು ಮಾಜಿ ಮಹಾನಗರ ಪಾಲಿಕೆ ವಿಜಯಕುಮಾರ್ ಅವರು ನೆರವೇರಿಸುತ್ತಾ ಬಂದಿದ್ದಾರೆ.
ವಿಜಯಕುಮಾರ್ ಅವರು ಮಾತನಾಡಿ, ಕೊರೊನಾ ಎರಡನೇಯ ಅಲೆ ಲಾಕ್ ಡೌನ್ ಕಾರಣದಿಂದ ಅಂದು ಆರಂಭವಾದ ಅನ್ನ ಸಂತರ್ಪಣೆ ಸೇವೆ ನಿರಂತರವಾಗಿ ಜರುಗುತ್ತಿದೆ. ನಮ್ಮ ವಾರ್ಡಿನಲ್ಲಿ ಬಡವರು, ಮಧ್ಯಮ ವರ್ಗದ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಇನ್ನು ಸಹ ಸಮರ್ಪಕ ಉದ್ಯೋಗವಿಲ್ಲ ಹಸಿವಿನಿಂದ ಬಳಲಬಾರದು ಪ್ರತಿ ದಿನ ಊಟ ವಿತರಿಸಲಾಗುತ್ತಿದೆ. ಪ್ರತಿ ದಿನ ಊಟದಲ್ಲಿ ಪಲಾವ್, ತರಕಾರಿ ಬಾತ್, ಬಿಸಿಬೇಳೆಬಾತ್, ಪೊಂಗಲ್ ಪಾಯಸ, ಟೊಮೆಟೋಬಾತ್ ದಿನದಿಂದ ದಿನಕ್ಕೆ ವಿವಿಧ ಬಗೆಯ ಆಹಾರ ವಿತರಿಸಲಾಗುತ್ತದೆ.
ಶುಚಿತ್ವ ಮತ್ತು ಪೌಷ್ಠಿಕಾಂಶದ ಬಗ್ಗೆ ಗಮನಹರಿಸಲಾಗಿದೆ. ಕೊರೊನಾ ಮೂರನೇಯ ಅಲೆ ಬರುತ್ತಿದೆ ಎಂಬ ವರದಿ ಇದೆ. ಇನ್ನೂ ಸಂಕಷ್ಟದ ಕಾಲ ಮುಗಿದಿಲ್ಲ ಅದಕಾರಣದಿಂದ ಅನ್ನ ಸಂತರ್ಪಣೆ ಸೇವೆ ಒಂದು ತಿಂಗಳು ಕಾಲ ಮುಂದುವರಿಯಲಿದೆ. ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮತ್ತು ಮಾಜಿ ಮಹಾಪೌರ ಪದ್ಮಾವತಿ ಶಿವನಗರ ವಾರ್ಡ್ ನಾಗರಿಕರ ಸಹಕಾರ, ಬೆಂಬಲದಿಂದ ಅನ್ನ ಸಂತರ್ಪಣೆ ಸೇವೆ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.