ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಶ್ರೀರಾಮುಲು ಆಪ್ತನ ಮಗಳ ಅದ್ದೂರಿ ಮದುವೆ

Public TV
1 Min Read

ರಾಯಚೂರು: ಕೋವಿಡ್ ನಿಯಮಗಳನ್ನು ಮೀರಿ ಜಿಲ್ಲೆಯ ಸಿಂಧನೂರು ನಗರದ ಹೊರವಲಯದಲ್ಲಿ ಸಚಿವ ಶ್ರೀರಾಮುಲು ಆಪ್ತ ತನ್ನ ಮಗಳ ಮದುವೆಯನ್ನ ಅದ್ದೂರಿಯಾಗಿ ನೆರವೇರಿಸಿದ್ದಾರೆ. ಶ್ರೀರಾಮುಲು ಸ್ವತಃ ಮದುವೆಗೆ ಆಗಮಿಸಿ ವಧುವರರಿಗೆ ಶುಭ ಹಾರೈಸಿ ಹೋಗಿದ್ದಾರೆ. ಆದ್ರೆ ಕೊರೊನಾ ವೇಳೆಯಲ್ಲಿ ಅದ್ದೂರಿ ಮದುವೆ ಮಾಡಿರುವುದು ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ.

ಹೊಸಳ್ಳಿ ಜೆ.ಇ ಗ್ರಾಮ ವ್ಯಾಪ್ತಿಯಲ್ಲಿನ ಕಮ್ಮವಾರಿ ಸಂಘದ ಯಲಮಂಚಿಲಿ ವಾಸುದೇವರಾವ್ ಕಲ್ಯಾಣ ಮಂಟಪದಲ್ಲಿ ಸುಮಾರು 80 ಲಕ್ಷ ರೂ. ಮೌಲ್ಯದ ಸೆಟ್ ಹಾಕಿಸಿ ಮದುವೆ ಮಾಡಲಾಗಿದೆ. ಸಚಿವ ಶ್ರೀರಾಮುಲು ಆಪ್ತ ನಾಗರಾಜ್ ನೆಕ್ಕಂಟಿ ತಮ್ಮ ಮಗಳ ಮದುವೆಯನ್ನ ಕೋವಿಡ್ ನಿಯಮ ಉಲ್ಲಂಘಿಸಿ ಸಾವಿರಾರು ಜನರನ್ನ ಸೇರಿಸಿ ಅದ್ದೂರಿಯಾಗಿ ಮಾಡಿದ್ದಾರೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೆ ಮದುವೆಯ ಮೆರವಣಿಗೆ ನಡೆದಿದೆ. ಯಾರೋಬ್ಬರು ಮಾಸ್ಕ್ ಹಾಕದೇ ಗುಂಪು ಗುಂಪಾಗಿ ಸೇರಿಕೊಂಡು ಮದುವೆ ಕಾರ್ಯ ಮಾಡಿದ್ದಾರೆ.

ಇಡೀ ಕಲ್ಯಾಣ ಮಂಟಪಕ್ಕೆ ಅದ್ದೂರಿ ಅಲಂಕಾರ ಮಾಡಲಾಗಿತ್ತು. ಮದುವೆ ಮೆರವಣಿಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿದ್ದವು. ನೂರಾರು ಬಂಧು ಬಳಗ, ಸಾವಿರಾರು ಜನ ಮದುವೆಯಲ್ಲಿ ಭಾಗವಹಿಸಿದ್ದರು. ಕಲ್ಯಾಣ ಮಂಟಪದ ವ್ಯವಸ್ಥಾಪಕರಿಗೆ ಹೊಸಳ್ಳಿ ಇ.ಜೆ. ಗ್ರಾ.ಪಂ ಕೊವಿಡ್ ನಿಯಮ ಪಾಲಿಸುವಂತೆ ಈ ಮೊದಲೆ ಸೂಚಿಸಿತ್ತು. ಆದರೆ ಗ್ರಾಮ ಪಂಚಾಯತಿಯ ಮುನ್ನೆಚ್ಚರಿಕೆ ಪತ್ರ ಉಲ್ಲಂಘಿಸಿ ಅದ್ದೂರಿ ಮದುವೆ ಮಾಡಲಾಗಿದ್ದು, ಕಲ್ಯಾಣ ಮಂಟಪದ ವ್ಯವಸ್ಥಾಪಕರು ಸಹ ಕೋವಿಡ್ ನಿಯಮಗಳನ್ನ ಸಂಪೂರ್ಣ ಉಲ್ಲಂಘಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *