ಸಖತ್ ಸ್ಟೆಪ್ ಹಾಕಿದ ಜೂನಿಯರ್ ರಾಖಿ-ಖುಷಿಯಲ್ಲಿ ತೇಲಾಡಿದ ಗಜಕೇಸರಿ

Public TV
3 Min Read

ಬೆಂಗಳೂರು: ಇಷ್ಟು ದಿನ ಐರಾ ತುಂಟತನವನ್ನು ಕಣ್ತುಂಬಿಕಂಡಿದ್ದೀರಿ. ಆದರೆ ಜೂನಿಯರ್ ರಾಖಿ ಭಾಯ್ ತುಂಟಾಟ, ಸ್ಟೆಪ್ಸ್ ಹಾಕಿರುವುದನ್ನು ನೋಡಿರಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ಜೂನಿಯರ್ ರಾಖಿ ಭಾಯ್ ವಿಡಿಯೋ ಬಹಿರಂಗವಾಗಿದೆ.

ಯಶ್ ಲಾಕ್‍ಡೌನ್ ದಿನಗಳನ್ನು ಮನೆಯಲ್ಲೇ ಕಳೆಯುತ್ತಿದ್ದು, ಇತ್ತೀಚೆಗೆ ಲಾಕ್‍ಡೌನ್ ಸಡಿಲಗೊಳಿಸಿದರೂ, ಯಾವುದೇ ಶೂಟಿಂಗ್‍ಗೆ ಹೋಗಿಲ್ಲ. ಬದಲಿಗೆ ಮಕ್ಕಳೊಂದಿಗೆ ಆಟವಾಡುತ್ತ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಮಗಳು ತಮಗೆ ಊಟ ಮಾಡಿಸುತ್ತಿದ್ದ ವಿಡಿಯೋವನ್ನು ಯಶ್ ಹಂಚಿಕೊಂಡಿದ್ದರು. ಅಂಗಿ ಮೇಲೆ ಆಹಾರವನ್ನು ಚೆಲ್ಲುತ್ತಿದ್ದರೂ ಮಗಳು ಊಟ ಮಾಡಿಸುವ ಆನಂದದಲ್ಲಿ ಯಶ್ ಮುಳುಗಿದ್ದರು. ಇದೀಗ ಅದಕ್ಕೂ ಮೊದಲು ಮಗಳು ದೀಪ ಬೆಳಗಿಸುವ ವಿಡಿಯೋವನ್ನು ಹಂಚಿಕೊಂಡಿದ್ದರು.

 

View this post on Instagram

 

And i surrender…❤ P.S ” Perks of home quarantine ” my t’shirt doesn’t agree though ???? Stay safe everyone ????

A post shared by Yash (@thenameisyash) on

ಹೀಗೆ ಲಾಕ್‍ಡೌನ್ ದಿನಗಳನ್ನು ಯಶ್ ಕುಟುಂಬ ಹಾಗೂ ಮಕ್ಕಳೊಂದಿಗೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ರಾಧಿಕಾ ಪಂಡಿತ್ ಸಹ ಯಾವುದೇ ಚಿತ್ರೀಕರಣಗಳಿಗೆ ಹೋಗಿಲ್ಲ. ಅವರೂ ಸಹ ಮನೆಯಲ್ಲೇ ಇದ್ದಾರೆ. ಇತ್ತೀಚೆಗಷ್ಟೇ ಐರಾ ತನ್ನ ತಮ್ಮನಿಗೆ ಲಾಲಿ ಹಾಡಿದ ವಿಡಿಯೋವನ್ನು ಸ್ಯಾಂಡಲ್‍ವುಡ್ ಸಿಂಡ್ರೆಲಾ ಹಂಚಿಕೊಂಡಿದ್ದರು. ಇದಕ್ಕೂ ಸಹ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೆ ಇದಾದ ಬಳಿಕ ಅವರ ಮನೆಗೆಲಸದ ಗೀತಾ ಆಂಟಿಯ ಹುಟ್ಟುಹಬ್ಬವನ್ನು ಸ್ವತಃ ರಾಧಿಕಾ ಪಂಡಿತ್ ಕೇಕ್ ತಯಾರಿಸಿ ಆಚರಿಸಿದ್ದರು. ಈ ಮೂಲಕ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದರು.

ಇದೀಗ ಜೂನಿಯರ್ ಯಶ್ ಆಟಿಕೆ ಕಾರಿನಲ್ಲಿ ಕುಣಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದು, ಕನಿಷ್ಟ ನಿಲ್ಲಲೂ ಸಾಧ್ಯವಿಲ್ಲ. ಆದರೆ ಮ್ಯೂಸಿಕ್ ಕೇಳಿದ ತಕ್ಷಣ ನಮ್ಮ ಪುಟ್ಟ ಮಾನವ ಪಾರ್ಟಿ ಅನಿಮಲ್ ಆಗುತ್ತಾನೆ ಎಂದು ಬರೆದಿದ್ದಾರೆ. ಅಲ್ಲದೆ ವಿಶೇಷ ಸೂಚನೆ ಎಂಬಂತೆ ಹಿಂದೆ ಉತ್ಸಾಹಭರಿತನಾಗಿ ಕೂಗಾಡುವ ತಂದೆಯನ್ನು ನಿರ್ಲಕ್ಷಿಸಿ ಎಂದು ಬರೆದಿದ್ದಾರೆ.

ಆಟಿಕೆ ಕಾರಿನಲ್ಲಿ ಜೂನಿಯರ್ ರಾಖಿ ಭಾಯ್ ನಿಂತಾಗ ಮ್ಯೂಸಿಕ್ ಪ್ಲೇ ಆಗುತ್ತದೆ. ಆಗ ತಕ್ಷಣವೇ ಸ್ಟೆಪ್ ಹಾಕಲು ಪ್ರಾರಂಭಿಸುತ್ತಾನೆ. ಇದಕ್ಕೆ ತಕ್ಕಂತೆ ವಿಡಿಯೋ ಮಾಡುತ್ತಲೇ ಯಶ್ ಕಮಾನ್, ಕಮಾನ್ ಡ್ಯಾನ್ಸ್ ಎಂದು ಹೇಳುತ್ತ, ಸೂಪರ್ ಮಗನೇ, ಸೂಪರ್ ನೀನು ಎನ್ನತ್ತಲೇ ಹುರಿದುಂಬಿಸೋದನ್ನ ವಿಡಿಯೋದದಲ್ಲಿ ನೋಡಬಹುದು.

Share This Article
Leave a Comment

Leave a Reply

Your email address will not be published. Required fields are marked *