ಸಕಲ ಗೌರವಗಳೊಂದಿಗೆ 18 ತಿಂಗಳ ಹಿಂದೆಯಷ್ಟೆ ಸೇನೆ ಸೇರಿದ್ದ ಯೋಧನ ಅಂತ್ಯಕ್ರಿಯೆ

Public TV
1 Min Read

ಚಿಕ್ಕೋಡಿ(ಬೆಳಗಾವಿ): ಕಳೆದ ಮೂರು ದಿನದ ಹಿಂದೆ ದೆಹಲಿಯಲ್ಲಿ ಸಾವನ್ನಪ್ಪಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಯೋಧ ಅನೀಲ್ ಶಿವಾಜಿ ಶಿಂಗಾಯಿ(23) ಅವರ ಅಂತ್ಯಕ್ರಿಯೆ ಸಕಲ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಭಾನುವಾರ ಸಂಜೆ ನಡೆಯಿತು.

ಕಳೆದ 18 ತಿಂಗಳ ಹಿಂದೆಯಷ್ಟೆ ಸೈನಿಕ ಸೇವೆಗೆ ಸೇರಿದ್ದರು. ದೆಹಲಿಯಲ್ಲಿನ ರಾಜಪುಟಾನ ರಿಫಾಯಿಲ್ ದಲ್ಲಿ ತರಬೇತಿ ಮುಗಿಸಿದ್ದರು. ನಂತರ ಕಳೆದ ಮಾರ್ಚ್‍ನಲ್ಲಿ ಕರೋಶಿ ಗ್ರಾಮಕ್ಕೆ ಆಗಮಿಸಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮತ್ತೆ ದೇಶ ಸೇವೆ ಮಾಡಲು ಹೋಗಿರುವಾಗ ಇವರು ಮೃತಪಟ್ಟಿದ್ದಾರೆ. ಯೋಧನ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ತಹಶೀಲ್ದಾರ್ ಅವರು ತಿಳಿಸಿದ್ದಾರೆ.

ಕಡು ಬಡತನದಲ್ಲೇ ಹುಟ್ಟಿ ಬೆಳೆದ ಅನೀಲ್ ಹುಟ್ಟೂರಿನಲ್ಲಿಯೇ ತನ್ನ ಪ್ರಾಥಮಿಕ ಶಿಕ್ಷಣ ಪಡೆದುಕೊಂಡು ದೇಶ ಸೇವೆಗೆ ಸೈನಿಕನಾಗಿ ಸೇರಿಕೊಂಡಿದ್ದರು. ಯೋಧನ ಕಳೆದುಕೊಂಡ ಕುಟಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ನೀರವ ಮೌನ ಆವರಿಸಿದೆ. ಗ್ರಾಮದ ಜನರು ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ತಾಲೂಕಾಡಳಿತ ಪರವಾಗಿ ಕೆಲವು ಅಧಿಕಾರಿಗಳು ಮಾತ್ರ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಕಡು ಬಡತನದಲ್ಲಿ ಹುಟ್ಟಿ ಬೆಳೆದ ಯೋಧ ಮೃತಪಟ್ಟಿರುವ ದು:ಖ ಇದೀಗ ಕರೋಶಿ ಗ್ರಾಮದಲ್ಲಿ ಆವರಿಸಿದೆ. ಹೆತ್ತವರ ಆಕ್ರಂದನ ಮುಗಿಲುಮುಟ್ಟಿತ್ತು. ಗ್ರಾಮದಲ್ಲೂ ಪಾರ್ಥಿವ ಶರೀರ ಮೆರವಣಿಗೆ ನಡೆಸಲಾಯಿತು. ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಗಿಬಿದಿದ್ದರು.

Share This Article
Leave a Comment

Leave a Reply

Your email address will not be published. Required fields are marked *