ಲಾಕ್‍ಡೌನ್: ಮತ್ತೆ ಬೆಂಗಳೂರು ಬಿಟ್ಟು ಹೊರಟ ಜನ!

Public TV
1 Min Read

ಬೆಂಗಳೂರು: ಒಂದು ವಾರ ಬೆಂಗಳೂರು ಲಾಕ್‍ಡೌನ್ ಹಿನ್ನೆಲೆ ನಗರ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಮೆಜೆಸ್ಟಿಕ್ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಿಂದ ಸಾವಿರಾರು ಜನರು ಊರಿಗೆ ತೆರಳ್ತಿದ್ದಾರೆ. ಲಗೇಜ್ ಹಿಡಿದುಕೊಂಡು ಸಂಸಾರ ಸಮೇತ ಊರಿಗೆ ಹೊರಡುತ್ತಿದ್ದಾರೆ.

ಕೊರೊನಾ ಭಯದಲ್ಲಿ ಬೆಂಗಳೂರು ನಗರವನ್ನು ಬಿಟ್ಟು ಜನರು ತಮ್ಮ ತವರು ಗ್ರಾಮಗಳತ್ತ ಸಾಗುತ್ತಿದ್ದು, ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಿವಿಧ ಜಿಲ್ಲೆಗಳಿಗೆ ತೆರಳುತ್ತಿರುವ ಜನ ಸಂಖ್ಯೆ ಹೆಚ್ಚಾಗಿ ಬೆಳಗ್ಗೆಯೇ ಕಂಡು ಬಂದಿತ್ತು. ಹುಬ್ಬಳ್ಳಿ, ಬಳ್ಳಾರಿ, ಬೆಳಗಾವಿ, ವಿಜಯಪುರ, ಚಿತ್ರದುರ್ಗ, ಯಾದಗಿರಿ, ದಾವರಣಗೆರೆಗೆ ಬೆಳ್ಳಂಬೆಳಗ್ಗೆ ಏಳು ಬಸ್ ಹೊರಟರೆ, ಹೊಸಪೇಟೆ ಕಡೆ ಮೂರು ಬಸ್ ಸೇರಿದಂತೆ ಸುಮಾರು 83ಕ್ಕೂ ಬಸ್ ಹೆಚ್ಚು ಬಸ್‍ಗಳಲ್ಲಿ ವಿವಿಧ ಜಿಲ್ಲೆಗಳಿಗೆ ಬೆಳಗ್ಗೆ 8 ಗಂಟೆ ವೇಳೆಗೆ ತೆರಳಿದ್ದರು.

ನಗರದಲ್ಲಿ ಗಾರೆ ಕೆಲಸ, ಬಿಲ್ಡಿಂಗ್ ನಿರ್ಮಾಣ ಮತ್ತು ಗಾರ್ಮೆಂಟ್ಸ್ ನೌಕರರು ಹೀಗೆ ಎಲ್ಲಾ ವಿಧದ ಕಾರ್ಮಿಕರು ಬಸ್ ನಿಲ್ದಾಣದಲ್ಲಿ ಕಂಡು ಬಂದರು. ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕೆಲ ಕಾರ್ಮಿಕರು, ಒಂದಿನ ಕೆಲಸ ಸಿಕ್ಕರೆ, ಇನ್ನೊಂದು ದಿನ ಕೆಲಸ ಇರೋದಿಲ್ಲ. ಮನೆ ಬಾಡಿಗೆ ಕಟ್ಟಬೇಕು, ಮಕ್ಕಳು, ಸಂಸಾರವನ್ನು ನೋಡಿಕೊಳ್ಳಬೇಕು. ಆದ್ದರಿಂದ ಜೀವನ ಕಷ್ಟ ಆಗಿ ಊರಿಗೆ ಹೋಗುತ್ತಿದ್ದೇವೆ. ಈಗಲೂ ಊಟವಿಲ್ಲದೆ ಉಪವಾಸದಿಂದಲೇ ಊರಿಗೆ ಹೊರಟ್ಟಿದ್ದೇವೆ ಎಂದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂಖ್ಯೆ ಹೆಚ್ಚಾಗುತ್ತದೆ ಎಂದು ಊಹಿಸಿದ್ದ ಕೆಎಸ್‍ಆರ್ ಟಿಸಿ ಹೆಚ್ಚುವರಿ 300 ಬಸ್‍ಗಳ ನಿಯೋಜನೆ ಮಾಡಿದೆ. ಪ್ರತಿನಿತ್ಯ 600 ಬಸ್‍ಗಳು ರಾಜ್ಯದ ವಿವಿಧ ಭಾಗಗಳಿಗೆ ಮೆಜೆಸ್ಟಿಕ್ ನಿಂದ ಪ್ರಯಾಣ ಬೆಳೆಸುತ್ತಿದ್ದವು. ಇಂದು ಒಟ್ಟು 900 ಬಸ್‍ಗಳನ್ನು ಕೆಎಸ್‍ಆರ್ ಟಿಸಿ ನಿಯೋಜನೆ ಮಾಡಿದೆ. ಪ್ರಯಾಣಿಕರ ಅಗತ್ಯದ ಮೇರೆಗೆ ಹೆಚ್ಚುವರಿ ಬಸ್ ನಿಯೋಜಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *