ಶ್ವಾನದ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಖಾಸಗಿ ಅಂಗಕ್ಕೆ ಕೋಲು ತುರುಕಿದ ಪಾಪಿಗಳು!

Public TV
2 Min Read

– 11 ಇಂಚಿನ ಕೋಲು ಹೊರತೆಗೆದ ವೈದ್ಯರು
– ಸಾವು- ಬದುಯಕಿನ ಮಧ್ಯೆ ನೂರಿ ಹೋರಾಟ

ಮುಂಬೈ: ಪ್ರಾಣಿ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ಮುಂಬೈನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಹೌದು. 8 ವರ್ಷದ ನೂರಿ ಎಂಬ ಹೆಣ್ಣು ಶ್ವಾನದ ಮೇಲೆ ಪಾಪಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮುಂಬೈನ ಪೊವಾಯ್ ಶಾಪಿಂಗ್ ಕಾಂಪ್ಲೆಕ್ಸ್ ಒಳಗಡೆ ಈ ಆಘಾತಕಾರಿ ಘಟನೆ ನಡೆದಿದೆ.

ಮಹಿಳೆಯೊಬ್ಬರು ಪ್ರಾಣಿಗಳಿಗೆ ಪ್ರತಿದಿನ ಆಹಾರ ಮತ್ತು ಔಷಧಿ ನೀಡುತ್ತಿದ್ದಾರೆ. ಹೀಗೆ ಅವರು ಗುರುವಾರ ಬಂದಾಗ ನಾಯಿಯ ಖಾಸಗಿ ಅಂಗದಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅವರು ಸ್ಥಳೀಯ ಪಶು ವೈದ್ಯರ ಬಳಿ ಶ್ವಾನವನ್ನು ಕರೆದುಕೊಂಡು ಹೋಗಿದ್ದಾರೆ.

ಪರೀಕ್ಷೆ ನಡೆಸಿದ ವೈದ್ಯರು ಯಾವುದೋ ಒಂದು ಬಲವಾದ ವಸ್ತು ಶ್ವಾನದ ದೇಹದೊಳಗೆ ಹೊಕ್ಕಿದೆ. ಪರಿಣಾಮ ಈ ರೀತಿ ರಕ್ತಸ್ರಾವವಾಗುತ್ತಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು. ಅಲ್ಲದೆ ಕಿಡಿಗೇಡಿಗಳು ಶ್ವಾನದ ಖಾಸಗಿ ಅಂಗದ ಮೂಲಕ 11 ಇಂಚಿನ ಕೋಲು ತುರುಕಿರುವುದು ಬೆಳಕಿಗೆ ಬಂದಿದ್ದು, ಅದನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.

ನೂರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ ದೇವಿ ಶೆತ್ ಮಾಧ್ಯಮಗಳ ಜೊತೆ ಮಾತನಾಡಿ, ಆಕೆ(ಶ್ವಾನ) ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಕರೆದರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದರಿಂದ ಆಕೆ ನೋವಿನಿಂದ ಬಳಲುತ್ತಿರುವುದು ಗಮನಕ್ಕೆ ಬಂತು. ನಾನು ಆಕೆಯ ಸ್ಥಿತಿಯನ್ನು ನೋಡಿದ ಸಂದರ್ಭದಲ್ಲಿ ಆಕೆಯ ಬಳಿಯಿಂದಲೇ ಹಲವಾರು ಮಂದಿ ಓಡಾಡುತ್ತಿದ್ದರು. ಬೀದಿ ನಾಯಿಗಳ ಮೇಲೂ ನಮಗೆ ಜವಾಬ್ದಾರಿ ಇದೆ. ಆದರೆ ಆಕೆ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದರೂ, ಆಕೆಗೆ ಏನೂ ಆಗಿಲ್ಲ ಎಂಬಂತೆ ಜನ ವರ್ತಿಸಿದರು. ಈ ಮೂಲಕ ಅವುಗಳನ್ನು ಜನ ತಿರಸ್ಕರಿಸುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸದ್ಯ ನೂರಿಯ ಖಾಸಗಿ ಅಂಗದಿಂದ ಕೋಲನ್ನು ಹೊರತೆಗೆದಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಯಾಕೆಂದರೆ ಆಕೆಯ ಕರುಳಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ ದೇಹದ ಇತರ ಅಂಗಗಳು ಕೂಡ ಹಾನಿಗೊಳಗಾಗಿವೆ. ಹೀಗಾಗಿ ಆಕೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಇತ್ತ ಆಕೆಯ ಜೀವ ಉಳಿಸಲು ಎನ್‍ಜಿಓ ಒಂದು ಹಣ ಸಂಗ್ರಹಿಸಲು ಪ್ರಯತ್ನಿಸುತ್ತಿದೆ ಎಂದು ದೇವಿ ತಿಳಿಸಿದರು.

ಘಟನೆ ಸಂಬಂಧ ಪೊವಾಯ್ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 377(ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *