ಶ್ವಾನದ ಮಾಲೀಕತ್ವಕ್ಕಾಗಿ ಡಿಎನ್‍ಎ ಪರೀಕ್ಷೆ

Public TV
1 Min Read

ಭೋಪಾಲ್: ಈ ಹಿಂದೆ ಎಮ್ಮೆ ಕಳೆದುಕೊಂಡ ಮಾಲೀಕರನ್ನು ಪತ್ತೆ ಹಚ್ಚಲು ಪೊಲೀಸರುವ ಮಾಲೀಕರಿಬ್ಬರು ಎಮ್ಮೆಯನ್ನು ಕರೆಯುವಂತೆ ಹೇಳಿ ಮಾಲೀಕನನ್ನು ಪತ್ತೆ ಹಚ್ಚಿದ್ದರು. ಇದೀಗ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಶ್ವಾನ ಕಳೆದುಕೊಂಡ ಇಬ್ಬರ ನಡುವಿನ ವಿವಾದವನ್ನು ಬಗೆಹರಿಸಲು ಶ್ವಾನದ ಡಿಎನ್‍ಎ ಪರೀಕ್ಷೆ ಮಾಡಲಾಗಿದೆ.

ಲ್ಯಾಬ್ರಡಾರ್ ಶ್ವಾನದ ಮಾಲೀಕರು ಯಾರು ಎಂದು ಪತ್ತೆ ಹಚ್ಚಲು ಪೊಲೀಸರು ಶ್ವಾನಕ್ಕೆ ಡಿಎನ್‍ಎ ಟೆಸ್ಟ್ ಮಾಡಿಸಿದ್ದಾರೆ. ಅಚ್ಚರಿ ವಿಷಯ ಎಂದರೆ ಲ್ಯಾಬ್ರಡಾರ್ ಶ್ವಾನ ಮಾಲೀಕರು ಎಂದು ಹೇಳಿ ಕೊಳ್ಳುತ್ತಿರುವ ಇಬ್ಬರು ವ್ಯಕ್ತಿಗಳು ಕರೆದಾಗಲೂ ಪ್ರತಿಕ್ರಿಯಿಸುತ್ತಿದೆ. ಇಬ್ಬರ ಜೊತೆಗೂ ಸಲುಗೆಯಿಂದ ನಡೆದುಕೊಳ್ಳುತ್ತಿದೆ.

ಕಾರ್ತಿಕ್ ಶಿವಾರೆ ಮತ್ತು ಶದಬ್ ಖಾನ್ ನಡುವೆ ಶ್ವಾನದ ಮಾಲೀಕತ್ವಕ್ಕಾಗಿ ವಿವಾದ ಪ್ರಾರಂಭವಾಗಿತ್ತು. ಈ ಗೊಂದಲವನ್ನು ಬಗೆಹರಿಸಲು ಮಧ್ಯಪ್ರದೇಶದ ಹೋಶಂಗಾಬಾದ್ ಪೊಲೀಸರು ಶ್ವಾನದ ಡಿಎನ್‍ಎ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ.

ಟೈಗರ್ ಎಂಬ ಮೂರು ವರ್ಷದ ಕಪ್ಪು ಲ್ಯಾಬ್ರಡಾರ್ ನಾಯಿ ನಾಪತ್ತೆಯಾಗಿದೆ ಎಂದು ಗೋಲ್ಡನ್ ಸಿಲಿಕಾನ್ ಕಾಲೋನಿಯ ಶಾದಾಬ್ ಖಾನ್ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಇತ್ತೀಚೆಗೆ, ಅವರು ನಗರದ ಕಾರ್ತಿಕ್ ಶಿವಾರೆ ಅವರ ಮನೆಯಲ್ಲಿ ನಾಯಿ ಇರುವುದನ್ನು ಪತ್ತೆಹಚ್ಚಿದರು. ನಾಯಿಯನ್ನು ತೆಗೆದುಕೊಳ್ಳಲು ಶಿವಹರೆ ಮನೆಗೆ ಹೋಗಿದ್ದರು. ಆದರೆ ಕಾರ್ತಿಕ್ ಇದನ್ನು ವಿರೋಧಿಸಿದರು. ಶ್ವಾನ ಮಾಲೀಕರು ಯಾರು ಎಂಬ ಗೊಂದಲ ಬಗೆಹರಿಸಲು ಪೊಲೀಸರನ್ನು ಕರೆಸಲಾಯಿತು.

2017 ರಲ್ಲಿ ನಾಯಿಯನ್ನು ಪಚ್ಮರಿ ಯಿಂದ ಖರೀದಿಸಿದ್ದೇನೆ ಎಂದು ಖಾನ್ ಹೇಳಿದ್ದಾರೆ. ಕೆಲವು ವಾರಗಳ ಹಿಂದೆ ಇಟಾರ್ಸಿ ಮೂಲದ ತಳಿಗಾರನಿಂದ ತಾನು ಅದನ್ನು ಖರೀದಿ ಮಾಡಿದ್ದೇನೆ ಎಂದು ಶಿವಹರೆ ಹೇಳಿದ್ದಾರೆ. ಇಬ್ಬರ ಹೇಳಿಕೆಯನ್ನೂ ಪಡೆದುಕೊಂಡ ಪೊಲೀಸರು ನಾಯಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಲ್ಯಾಬ್ರಡರ್ ಶ್ವಾನದ ರಕ್ತದ ಮಾದರಿಯನ್ನ ಪರೀಕ್ಷೆಗೆ ಕಳುಹಿಸಿದ್ದಾರೆ.

ಶ್ವಾನದ ಮಾಲೀಕರು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಡಿಎನ್‍ಎ ಪರೀಕ್ಷಾ ವರದಿ ಬಂದ ನಂತರ ನಾಯಿಯನ್ನು ಅದರ ಸರಿಯಾದ ಮಾಲೀಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ರೀತಿಯ ಘಟನೆಯಲ್ಲಿ, ಕೇರಳದ ಕೊಲ್ಲಂನ ನ್ಯಾಯಾಲಯವು 2014 ರಲ್ಲಿ ಹಸುವಿನ ಡಿಎನ್‍ಎ ಪರೀಕ್ಷೆಯನ್ನು ಅದರ ಮಾಲೀಕತ್ವದ ವಿವಾದವನ್ನು ಬಗೆಹರಿಸಲು ಆದೇಶಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *