ಶ್ರೀರಾಮ ಮಂದಿರ ನಿರ್ಮಾಣ- ತಾಮ್ರದ ಎಲೆಗಳನ್ನು ದಾನ ಮಾಡಲು ಟ್ರಸ್ಟ್ ಮನವಿ

Public TV
1 Min Read

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಮುಂದಿನ 30 ರಿಂದ 40 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ರಾಮಮಂದಿರ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.

ಶ್ರೀರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ದೆಹಲಿಯಲ್ಲಿ ಇಂದು ಟ್ರಸ್ಟ್ ಸದಸ್ಯರು ಸಭೆ ನಡೆಸಿದರು. ಈ ಸಭೆಯಲ್ಲಿ ಮಂದಿರ ನಿರ್ಮಾಣದ ಮುಂದಿನ ಹಂತಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆ ಬಳಿಕ ರಾಮಮಂದಿರ ನಿರ್ಮಾಣ ಮಾಹಿತಿ ಹಂಚಿಕೊಂಡ ಟ್ರಸ್ಟ್ ಸದಸ್ಯರು, ನಿರ್ಮಾಣ ಪ್ರದೇಶದ ಮಣ್ಣಿನ ಪರೀಕ್ಷೆ ಮಾಡಲಾಗಿದೆ. ಭಾರತದ ಪ್ರಾಚೀನ ಮತ್ತು ಸಂಪ್ರದಾಯಿಕವಾಗಿ ಮಂದಿರ ನಿರ್ಮಾಣ ಮಾಡಲಿದ್ದೇವೆ ಎಂದರು.

https://twitter.com/ShriRamTeerth/status/1296349104688177154

ಮಂದಿರ ನಿರ್ಮಾಣಕ್ಕೆ ಸಿಬಿಆರ್‍ಸಿ ರೂರ್ಕಿ, ಐಐಟಿ ಮದ್ರಾಸ್, ಎಲ್ ಆ್ಯಂಡ್ ಟಿ ಎಂಜಿನಿಯರ್ ಗಳು ಸಲಹೆ ನೀಡಲಿದ್ದಾರೆ. ನೈಸರ್ಗಿಕ ವಿಕೋಪಗಳಿಂದ ಹಾನಿಯಾದಂತೆ ತಂತ್ರಜ್ಞಾನ ಮಂದಿರ ನಿರ್ಮಾಣದಲ್ಲಿ ಬಳಕೆಯಾಗಲಿದೆ ಎಂದು ಸದಸ್ಯರು ತಿಳಿಸಿದರು. ಇದನ್ನೂ ಓದಿ: ಕಬ್ಬಿಣದ ಬಳಕೆ ಇಲ್ಲ – ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ

ದೇವಾಲಯದ ನಿರ್ಮಾಣಕ್ಕೆ ಕಲ್ಲುಗಳನ್ನು ಸೇರಿಸಲು ತಾಮ್ರದ ಎಲೆಗಳನ್ನು ಬಳಸಲಾಗುತ್ತದೆ. 18 ಇಂಚು ಉದ್ದ, 3 ಎಂಎಂ ಆಳ, 30 ಎಂಎಂ ಅಗಲದ 10,000 ಎಲೆಗಳು ಬೇಕಾಗುತ್ತವೆ. ತಾಮ್ರದ ಎಲೆಗಳನ್ನು ದಾನ ಮಾಡಲು ಶ್ರೀ ರಾಮ ಭಕ್ತರನ್ನು ಟ್ರಸ್ಟ್ ಆಹ್ವಾನಿಸುತ್ತಿದೆ. ದಾನಿಗಳು ಈ ಫಲಕಗಳಲ್ಲಿ ಕುಟುಂಬದ ಹೆಸರುಗಳು, ಮೂಲ ಸ್ಥಳ ಅಥವಾ ಅವರ ಸಮುದಾಯ ದೇವಾಲಯಗಳ ಹೆಸರುಗಳನ್ನು ಕೆತ್ತಬಹುದು. ಈ ರೀತಿಯಾಗಿ, ತಾಮ್ರದ ಫಲಕಗಳು ಈ ದೇಶದ ಏಕತೆಯನ್ನು ಸಂಕೇತಿಸುವುದು ಮಾತ್ರವಲ್ಲದೆ ಮಂದಿರ ನಿರ್ಮಾಣಕ್ಕೆ ಇಡೀ ದೇಶದ ಕೊಡುಗೆಗೆ ಸಾಕ್ಷಿಯಾಗಿಸುತ್ತದೆ ಎಂದು ಹೇಳಿದರು.

https://twitter.com/ShriRamTeerth/status/1296349106424537089

ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *