ಶೂಟಿಂಗ್ ಸೆಟ್‍ಗೆ ಮರಳಿದ ಗರ್ಭಿಣಿ ಅನುಷ್ಕಾ ಶರ್ಮಾ

Public TV
1 Min Read

ಮುಂಬೈ: ಮೊದಲ ಮಗುವಿನ ನೀರಿಕ್ಷೆಯಲ್ಲಿರುವ ಎಂಟು ತಿಂಗಳ ತುಂಬು ಗರ್ಭಿಣಿ ಅನುಷ್ಕಾ ಶರ್ಮಾ ಶೂಟಿಂಗ್ ಸೆಟ್ ಕಡೆ ಮುಖ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜಾಹೀರಾತು ಶೂಟ್‍ಗಾಗಿ ಮುಂಬೈನಲ್ಲಿ ಕ್ಯಾಮೆರಾ ಮುಂದೆ ಬಂದಿದ್ದಾರೆ.

 

View this post on Instagram

 

A post shared by AnushkaSharma1588 (@anushkasharma)

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಬರೊಬ್ಬರಿ 7 ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗರ್ಭಿಣಿಯಾಗಿರುವ ದಿನದಿಂದ ಯಾವುದೇ ಶೂಟಿಂಗ್‍ನಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಸದ್ಯ ಜಾಹೀರಾತಿನ ಶೂಟ್‍ಗೆ ಕ್ಯಾಮೆರಾ ಮುಂದೆ ಬಂದಿರುವ ಸಂತೋಷವನ್ನು ಅನುಷ್ಕಾ ಶರ್ಮಾ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಅವರ ಫೋಟೋದಿಂದ ತಿಳಿಯಬಹುದಾಗಿದೆ.

 

View this post on Instagram

 

A post shared by Viral Bhayani (@viralbhayani)

ತುಂಬು ಗರ್ಭಿಣಿ ಅನುಷ್ಕಾ ಶರ್ಮಾ ಮುಂಬೈನಲ್ಲಿ ಶೂಟ್‍ಗಾಗಿ ಬಂದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಪತಿ ವಿರಾಟ್ ಐಪಿಎಲ್ 2020ರಲ್ಲಿ ಭಾಗವಹಿಸುವಾಗ ಅನುಷ್ಕಾ ಕೂಡಾ ಪತಿಯೊಂದಿಗೆ ದುಬೈನಲ್ಲಿದ್ದರು ಇದೀಗ ಮರಳಿ ಮುಂಬೈಗೆ ಬಂದು ಶೂಟಿಂಗ್‍ನಲ್ಲಿ ತೊಡಗಿಸಿಕೊಂಡಿದ್ದಾರೆ.

ಟೀಲ್ ಗ್ರೀನ್, ಸಿಂಗಲ್ ಹೆಲ್ಡರ್ ಗೌನ್ ಮತ್ತು ಬ್ರೌನ್ ಫ್ಲಾಟ್ ಸ್ಯಾಂಡಲ್ ಧರಿಸಿ ಮೇಕಪ್ ಮಾಡಿಕೊಂಡು ವ್ಯಾನ್‍ನಿಂದ ಹೊರಬಂದಿದ್ದಾರೆ. ಶೂಟಿಂಗ್ ಸ್ಥಳದಲ್ಲಿ ಮಾಸ್ಕ್‍ನ್ನು ಧರಿಸಿ ಅನುಷ್ಕಾ ಜಾಗೃತರಾಗಿದ್ದರು. ಜಾಹೀರಾತು ಫೋಟೋ ಶೂಟ್‍ನ ವೇಳೆ ಕ್ಲಿಕ್ಕಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

 

View this post on Instagram

 

A post shared by AnushkaSharma1588 (@anushkasharma)

ಅನುಷ್ಕಾ ಶರ್ಮಾ ಹೆರಿಗೆ ದಿನಚರಿಗಳ ಚಿತ್ರಗಳನ್ನು ತನ್ನ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಮ್ಮ-ಟು-ಬಿ ಅನುಷ್ಕಾ ಶರ್ಮಾ ಅವರು ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಮಂಚದ ಮೇಲೆ ಕುಳಿತು ಸೂರ್ಯ-ಚುಂಬಿಸಿದ ಚಿತ್ರವನ್ನು “ಹೇ” ಎಂಬ ಶೀರ್ಷಿಕೆಯೊಂದಿಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *