ಶಿಖರ್‌ ಧವನ್‌ಗೆ ನಮಸ್ಕರಿಸಿ ಅಡ್ಡ ಬಿದ್ದ ಹಾರ್ದಿಕ್‌ ಪಾಂಡ್ಯ

Public TV
1 Min Read

ಪುಣೆ: ಇಂಗ್ಲೆಂಡ್‌ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಶಿಖರ್‌ ಧವನ್‌ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿದ್ದಾರೆ.

ಹಾರ್ದಿಕ್‌ ಪಾಂಡ್ಯ ಸಂತೋಷಗೊಂಡು ಸಂಭ್ರಮಿಸಿ ನಮಸ್ಕರಿಸಲು ಕಾರಣ ಶಿಖರ್‌ ಧವನ್‌ ಹಿಡಿದ ಕ್ಯಾಚ್‌. ಅಪಾಯಕಾರಿ ಆಟಗಾರ ಬೆನ್‌ಸ್ಟೋಕ್ಸ್‌ ಅವರ ಕ್ಯಾಚ್‌ ಹಿಡಿದಿದ್ದಕ್ಕೆ ಸಂಭ್ರಮಿಸಿ ಪಾಂಡ್ಯ ನಮಸ್ಕರಿಸಿದ್ದಾರೆ.

https://twitter.com/viratian18183/status/1376163494203023367

ಕ್ಯಾಚ್‌ ಡ್ರಾಪ್‌:
ಭುವನೇಶ್ವರ್‌ ಕುಮಾರ್‌ ಎಸೆದ 5ನೇ ಓವರಿನಲ್ಲಿ 14 ರನ್‌ ಗಳಿಸಿದ್ದ ಬೆನ್‌ ಸ್ಟೋಕ್ಸ್‌ ಬಲವಾಗಿ ಬೀಸಿದ್ದರು. ಈ ವೇಳೆ ಮಿಡ್‌ ಆಫ್‌ನಲ್ಲಿದ್ದ ಪಾಂಡ್ಯ ಕ್ಯಾಚ್‌ ಹಿಡಿಯುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪಾಂಡ್ಯ ಸುಲಭವಾಗಿ ಹಿಡಿಯಬೇಕಿದ್ದ ಕ್ಯಾಚ್‌ ಕೈ ಚೆಲ್ಲಿದರು. ಇದನ್ನು ನೋಡಿ ಆಟಗಾರರ ಜೊತೆ ಡಗೌಟ್‌ನಲ್ಲಿ ಕುಳಿತ್ತಿದ್ದ ಟೀಂ ಇಂಡಿಯಾ ಸದಸ್ಯರು ಶಾಕ್‌ ಆದರು.

https://twitter.com/j_dhillon7/status/1376155566045757440

ಕಷ್ಟದ ಕ್ಯಾಚ್‌ ಕೈ ಚೆಲ್ಲಿದರೆ ಯಾರೂ ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ. ಆದರೆ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್‌ ಬಿಟ್ಟದ್ದಕ್ಕೆ ಆಟಗಾರ ಕೈ ತಲೆ ಮೇಲೆ ಹೋಗಿತ್ತು.

ಕ್ರೀಸಿನಲ್ಲಿ ತಳವುರಲು ಆರಂಭಿಸಿದ್ದ ಬೆನ್‌ಸ್ಟೋಕ್ಸ್‌ ನಟರಾಜ್‌ ಎಸೆದ ಇನ್ನಿಂಗ್ಸ್‌ನ 11ನೇ ಓವರಿನ ಮೂರನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನ ಮಾಡಿದರು. ಆದರೆ ಬಾಲ್‌ ನೇರವಾಗಿ ಸ್ಕ್ವಾರ್‌ ಲೆಗ್‌ನಲ್ಲಿದ್ದ ಶಿಖರ್‌ ಧವನ್‌ ಕೈ ಸೇರಿತು. ಈ ಮೂಲಕ 35 ರನ್‌(39 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದಿದ್ದ ಸ್ಟೋಕ್ಸ್‌ ಔಟಾದರು. ಸ್ಟೋಕ್ಸ್‌ ಔಟಾಗುತ್ತಿದ್ದಂತೆ ಪಾಂಡ್ಯ ಕೈ ಮುಗಿದು, ನೆಲಕ್ಕೆ ಅಡ್ಡ ಬಿದ್ದು ನಮಸ್ಕರಿಸಿದರು.

Share This Article
Leave a Comment

Leave a Reply

Your email address will not be published. Required fields are marked *