ಶಿಕ್ಷಣಕ್ಕೆ ಕೂಡಿಟ್ಟ 5 ಲಕ್ಷ ಬಡವರಿಗೆ ನೆರವು- ವಿಶ್ವಸಂಸ್ಥೆಯ ಗಮನಸೆಳೆದ ಕ್ಷೌರಿಕನ ಮಗಳು

Public TV
2 Min Read

– ‘ಬಡವರ ಸದ್ಭಾವನಾ ರಾಯಭಾರಿ’ಯಾಗಿ ನೇತ್ರಾ ನೇಮಕ

ಚೆನ್ನೈ: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರ ನೆರವಿಗೆ ಸಿನಿಮಾ ನಟರು ಸೇರಿದಂತೆ ಅನೇಕ ಮಂದಿ ಧಾವಿಸಿದ್ದಾರೆ. ಈ ಮಧ್ಯೆ ತಮಿಳುನಾಡಿನ ಕ್ಷೌರಿಕನ ಮಗಳು ವಿಭಿನ್ನವಾಗಿ ಸಹಾಯ ಹಸ್ತ ಚಾಚುವ ಮೂಲಕ ವಿಸ್ವಸಂಸ್ಥೆಯ ಗಮನಸೆಳೆದಿದ್ದಾಳೆ.

ಹೌದು. ತಮಿಳುನಾಡಿನ ಮಧುರೈ ನಿವಾಸಿ ಕ್ಷೌರಿಕ ಸಿ ಮೋಹನ್ ಮಗಳು ಎಂ ನೇತ್ರಾ, ಕೊರೊನಾ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ವಿಶ್ವಸಂಸ್ಥೆಯ ‘ಬಡವರ ಸದ್ಭಾವನಾ ರಾಯಭಾರಿ’ಯಾಗಿ ನೇಮಕಗೊಂಡಿದ್ದಾಳೆ.

ಅಪ್ರಾಪ್ತಳಾಗಿರುವ ಈಕೆ ತನ್ನ ಶಿಕ್ಷಣಕ್ಕೆ ಕೂಡಿಟ್ಟಿದ್ದ 5 ಲಕ್ಷ ಹಣವನ್ನು ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡುವಂತೆ ತಂದೆಯ ಬಳಿ ಮನವಿ ಮಾಡಿಕೊಂಡಿದ್ದಾಳೆ. ಈ ವೇಳೆ ಮಗಳಿಗೆ ತಂದೆಯೂ ಸಾಥ್ ನೀಡಿದ್ದಾರೆ.

ತಮಿಳುನಾಡಿನ ಸಚಿವ ಸೆಲ್ಲುರ್ ರಾಜು, ಹುಡುಗಿಯ ಮಾನವೀಯತೆಗೆ ಮಾರುಹೋಗಿ ಆಕೆಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಆಕೆಯನ್ನು ದಿವಂಗತ ಜಯಲಲಿತಾ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸುವಂತೆ ಮುಖ್ಯಮಂತ್ರಿ ಪನೀರ್ ಸೆಲ್ವಂ ಅವರ ಬಳಿ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.

ಅವಳು ಮಧುರೈನ ಹೆಮ್ಮೆಯ ಪುತ್ರಿ. ಆಕೆಗೆ ಯುನ್ ನಾಯಕರು ಹಾಗೂ ಅಲ್ಲಿನ ಕಾರ್ಯಕ್ರಮಕ್ಕೆ ಹಾಜರಾಗಲು ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಆಕೆಗೆ ಜಯಲಲಿತಾ ಪ್ರಶಸ್ತಿ ನೀಡಿ ಗೌರವಿಸುವಂತೆ ಸಿಎಂ ಬಳಿ ಶಿಫಾಸರು ಮಾಡುವುದಾಗಿ ಭರವಸೆ ನೀಡಿದರು.

ಕೆಲ ದಿನಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಹುಡುಗಿಯ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿದ್ದರು. ಕಳೆದ ಭಾನುವಾರ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಹುಡುಗಿ ಹಾಗೂ ಆಕೆಯ ತಂದೆಯನ್ನು ಪ್ರಶಂಸಿಸಿದ್ದರು. ಕೊರೊನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಮೋಹನ್ ಅವರು ಜನರಿಗೆ ಸಹಾಯ ಮಾಡುವ ಸಲುವಾಗಿ ತನ್ನ ಉಳಿತಾಯವನ್ನು ಖರ್ಚು ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದ್ದರು.

ಮೋಹನ್ ಅವರು ಮಧುರೈನಲ್ಲಿ ಸಲೂನ್ ಅಂಗಡಿ ಇಟ್ಟುಕೊಂಡಿದ್ದಾರೆ. ತನ್ನ ಕಠಿಣ ಪರಿಶ್ರಮದ ಮಧ್ಯೆಯೂ ಮಗಳ ವಿದ್ಯಾಭ್ಯಾಸಕ್ಕಾಗಿ ಒಂದಷ್ಟು ಹಣವನ್ನು ಕೂಡಿಟ್ಟಿದ್ದರು. ಆದರೆ ಆ ಸಂಪೂರ್ಣ ಹಣವನ್ನು ಇಂದು ಕಷ್ಟದಲ್ಲಿರುವವರಿಗೆ ನೀಡಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದರು.

ಸದ್ಯ ವಿಶ್ವಸಂಸ್ಥೆ ನ್ಯೂಯಾರ್ಕ್ ಹಾಗೂ ಜಿನೇವಾದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ವಿಶ್ವನಾಯಕರ ಮುಂದೆ ಭಾಷಣ ಮಾಡುವ ಅವಕಾಶವನ್ನು ನೇತ್ರಾ ಪಡೆದುಕೊಂಡಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *