ಶಾಸಕ ಮುನಿರತ್ನರವರ ಹುಟ್ಟುಹಬ್ಬವನ್ನ ಆಚರಿಸಿದ ಅನಾಥ ಮಕ್ಕಳು

Public TV
2 Min Read

ಬೆಂಗಳೂರು: ಶಾಸಕ ಮುನಿರತ್ನರವರ ಹುಟ್ಟುಹಬ್ಬವನ್ನು, ಆನಾಥ ಮಕ್ಕಳು ವಸತಿ ಶಾಲೆಯಲ್ಲಿ  ಕೇಕ್ ಕತ್ತರಿಸಿ ಆಚರಿಸಿದ್ದಾರೆ.

ಜಾಲಹಳ್ಳಿ ವಾರ್ಡ್-16ರಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮುನಿರತ್ನರವರ ಹುಟ್ಟುಹಬ್ಬದ ಪ್ರಯುಕ್ತ ಆನಾಥ ಮಕ್ಕಳ ವಸತಿ ಶಾಲೆ ಮಕ್ಕಳು ಕೇಕ್ ಕತ್ತರಿಸಿ ಶಾಸಕ ಮುನಿರತ್ನರವರ ಹುಟ್ಟುಹಬ್ಬವನ್ನು ಅಚರಿಸಿದರು. ನಂತರ ಕೊವಿಡ್-19ಲಸಿಕಾ ಅಭಿಯಾನ ಮತ್ತು ಆಟೋ ಚಾಲಕರಿಗೆ ಸುರಕ್ಷತಾ ಕಿಟ್ ವಿತರಣೆ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ದಿನಸಿ ಸಾಮಾಗ್ರಿಗಳ ವಿತರಣೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಾ ಕಂಪ್ಯೂಟರ್ ಲ್ಯಾಬ್ ,ರಸಾಯನ ಶಾಸ್ತ್ರ ವಿಭಾಗ ಉದ್ಘಾಟಯಲ್ಲಿ ಜಾಲಹಳ್ಳಿ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀನಿವಾಸಮೂರ್ತಿ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶ್ರೀರಾಮ್, ಉಪಸ್ಥಿತರಿದ್ದರು. ಇದನ್ನೂ ಓದಿ:  ನವಜೋತ್ ಸಿಂಗ್ ಸಿಧು ಪದಗ್ರಹಣ ಕಾರ್ಯಕ್ರಮ- ಬಸ್ ಅಪಘಾತ, ಮೂವರು ದುರ್ಮರಣ

ಈ ಸಮಯದಲ್ಲಿ ಮಾಜಿ ಕಾರ್ಪೋರೆಟರ್ ಶ್ರೀನಿವಾಸಮೂರ್ತಿ(ಜಾನಿ)ರವರು ಮಾತನಾಡಿ, ಬಡವರ ಪರ ಕಾಳಜಿವುಳ್ಳ ವ್ಯಕ್ತಿತ್ವ, ಅಭಿವೃದ್ದಿಯ ಹರಿಕಾರರಾದ ಶಾಸಕರಾದ ಮುನಿರತ್ನರವರು ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊವಿಡ್-19 ಸಾಂಕ್ರಮಿಕ ರೋಗದಿಂದ ಕಳೆದ 18ತಿಂಗಳಿಂದ ಬಡವರಿಗೆ ಉದ್ಯೋಗವಿಲ್ಲ ಮತ್ತು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಬಡವರು ಹಸಿವಿನಿಂದ ಬಳಲಬಾರದು ಎಂದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‌ಗಳಲ್ಲಿ ಲಕ್ಷಾಂತರ ದಿನಸಿ ಕಿಟ್‍ಗಳನ್ನು ಶಾಸಕರಾದ ಮುನಿರತ್ನರವರು ವಿತರಿಸಿದ್ದಾರೆ.

ಕೊರೊನಾ ಲಸಿಕಾ ಅಭಿಯಾನವನ್ನು ಶಾಸಕರಾದ ಮುನಿರತ್ನರವರ ನೇತೃತ್ವದಲ್ಲಿ ಯಶ್ವಸಿಯಾಗಿ ನಡೆಯುತ್ತಿದೆ. ಕೊರೊನಾ ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ ಮತ್ತು ಉಚಿತವಾಗಿ ಔಷಧಿ ವಿತರಣೆ ಶಾಸಕರಾದ ಮುನಿರತ್ನರವರು ನೀಡಿದ್ದಾರೆ. ಸತತವಾಗಿ ಜನ ಸಂಪರ್ಕದಲ್ಲಿ ಇರುವ ಆಟೋ ಚಾಲಕರಿಗೆ ತಮ್ಮ ಆರೋಗ್ಯ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸಲಿ ಎಂದು ಕೊವಿಡ್ ಸುರಕ್ಷತಾ ಕಿಟ್‍ಗಳನ್ನು ಸಹ ಉಚಿತವಾಗಿ ವಿತರಿಸಲಾಗುತ್ತಿದೆ ಜಾಲಹಳ್ಳಿ ಸರ್ಕಾರಿ ಶಾಲೆ ರಾಜ್ಯದಲ್ಲಿ ಉತ್ತಮ ಶಾಲೆಯಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಶಾಲೆ ಉನ್ನತೀಕರಣಕ್ಕೆ 2ಕೋಟಿ ಅನುದಾನ ಬಿಡುಗಡೆಯಾಗಿದೆ. ಬಡವರ ಪರ ಸದಾ ಚಿಂತನೆ ಮಾಡುವ ಶಾಸಕರಾದ ಮುನಿರತ್ನರವರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಉನ್ನತ ಸ್ಥಾನ ಸಿಗಲಿ ಎಂದು ಜಾಲಹಳ್ಳಿ ವಾರ್ಡ್ ನಾಗರಿಕರ ಪರವಾಗಿ ಶುಭ ಕೋರುತ್ತೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *