ಶಾಸಕಿಯ ಕೆನ್ನೆ ಹಿಂಡಿದ ಸಂಸದ – ವೀಡಿಯೋ ವೈರಲ್

Public TV
1 Min Read

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆರೋಪ-ಪ್ರತ್ಯಾರೋಪಗಳ ನಡುವೆ ವೀಡಿಯೋಗಳು ಸಹ ಹೆಚ್ಚು ಸದ್ದು ಮಾಡುತ್ತಿವೆ. ಇದೀಗ ಟಿಎಂಸಿ ಸಂಸದರೊಬ್ಬರು ಶಾಸಕಿಯ ಕೆನ್ನೆ ಹಿಂಡುವ ವೀಡಿಯೋ ವೈರಲ್ ಆಗಿದೆ.

ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಅವರು ಟಿಎಂಸಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ಸುದ್ದಿಗೋಷ್ಠಿಯಲ್ಲಿ ಬಂಕುರಾ ಶಾಸಕಿಯ ಕೆನ್ನೆ ಹಿಂಡಿದ್ದಾರೆ. ಶಾಸಕಿ  ಟಿಕೆಟ್ ಆಕಾಂಕ್ಷಿಯಾಗಿದ್ದರು ಎನ್ನಲಾಗಿದೆ. ಟಿಕೆಟ್ ಸಿಗದಿದ್ದಾಗ ನಿರಾಸೆಗೊಂಡಾಗ ಸಂಸದರು ಕೆನ್ನೆ ಹಿಂಡಿದ್ದಾರೆ ಎನ್ನಲಾಗುತ್ತಿದೆ. ಈ ವೀಡಿಯೋ ಎಲ್ಲಿಯದ್ದು ಅನ್ನೋದರ ಮಾಹಿತಿ ಸಿಕ್ಕಿಲ್ಲ. ಆದ್ರೆ ಈ ವೀಡಿಯೋವನ್ನ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಕಮಲ ನಾಯಕರು ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ವೀಡಿಯೋ ಶೇರ್ ಮಾಡಿಕೊಂಡಿರುವ ಲಾಕೆಟ್ ಬ್ಯಾನರ್ಜಿ, ಮಹಿಳೆಯರನ್ನ ಸಶಕ್ತರನ್ನಾಗಿ ಮಾಡಲಾಗ್ತಿದೆ ಎಂದು ಟಿಎಂಸಿ ಹೇಳುತ್ತಿದೆ. ಆದ್ರೆ ಇಲ್ಲಿ ಅವರದೇ ಸಂಸದರು ಟಿಕೆಟ್ ಸಿಗದ ಶಾಸಕಿಯ ಕೆನ್ನೆಯನ್ನು ಹಿಂಡಿದ್ದಾರೆ. ನಿಮಗೆ ನಾಚಿಕೆಯಾಗಬೇಕು ಎಂದು ಬರೆದುಕೊಂಡಿದ್ದಾರೆ.

ಬಿಜೆಪಿಯವರು ಚುನಾವಣೆ ಸಮಯದಲ್ಲಿ ಮಾತ್ರ ಬಂಗಾಳಕ್ಕೆ ಬಂದು ಸುಳ್ಳುಗಳನ್ನು ಹೇಳಿ ಹೋಗುತ್ತಾರೆ. ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುವ ಅವರು ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಮಹಿಳೆಯರಿಗೆ ಭದ್ರತೆ ಒದಗಿಸಿದ್ದಾರೆಯೇ? ಮೋದಿಯವರ ಪ್ರಿಯವಾದ ಗುಜರಾತ್ ರಾಜ್ಯದಲ್ಲಿನ ಪರಿಸ್ಥಿತಿ ಹೇಗಿದೆ? ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು ರಾತ್ರಿ ಕೂಡ ಓಡಾಡುವಷ್ಟು ಸುರಕ್ಷತೆ ಇದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಎಲೆಕ್ಷನ್ ಕಾಂಪೇನ್ ನಲ್ಲಿ ಹೇಳಿದ್ದರು.

ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಇಲ್ಲಸಲ್ಲದ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ. ತೃಣಮೂಲದ ಧ್ಯೇಯವಾಕ್ಯವನ್ನು ನೆನಪಿನಲ್ಲಿಟ್ಟುಕೊಳ್ಳಿ ಮಾ-ಮಾತಿ-ಮನುಷ್ಯ (ತಾಯಿ, ತಾಯಿನಾಡು ಮತ್ತು ಮಾನವೀಯತೆ) ಎಂದು ಹೇಳುವ ಮೂಲಕ ಕಿಡಿಕಾರಿದರು.

ಮಹಿಳೆಯರು ಬಂಗಾಳದ ಪರ ಹೋರಾಡಲಿದ್ದಾರೆ. ಮಹಿಳೆಯರು ಬಂಗಾಳವನ್ನು ನಿರ್ಮಿಸಲಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇದು ನಾನು ಮಾಡುತ್ತಿರುವ ಪ್ರತಿಜ್ಞೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *