ನೆಲಮಂಗಲ: ಯಲಹಂಕ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಅಭಿಮಾನಿಗಳು ಹಳ್ಳಿಗಾಡಿನ ಜನರಿಗೆ ವ್ಯಾಕ್ಸಿನ್ ಹಾಕಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಖಾಸಗಿ ಆಸ್ಪತ್ರೆಯ ಸಹ ಭಾಗಿತ್ವದಲ್ಲಿ ಐನೂರಕ್ಕೂ ಹೆಚ್ಚು ಜನರಿಗೆ ಇಂದು ವ್ಯಾಕ್ಸಿನ್ ನೀಡಲಾಗುತ್ತದೆ. ಬೆಂಗಳೂರು ಹೊರವಲಯ ನೆಲಮಂಗಲ ಸಮಯದಲ್ಲಿ ದಾಸನಪುರದ ಖಾಸಗಿ ಶಾಲೆಯ ಆವರಣದಲ್ಲಿ ಜನರಿಗೆ ವ್ಯಾಕ್ಸಿನ್ ಬಗ್ಗೆ ಅರಿವು ಮೂಡಿಸಿ, ಮಹಾಮಾರಿ ಕೊರೋನ ಸೋಂಕು ನಿಯಂತ್ರಣಿಸಲು ಪರಿಣಾಮಕಾರಿಯಾಗಿ ಈ ವ್ಯಾಕ್ಸಿನ್ ಸದುಪಯೋಗವಾಗಲಿದೆ. ಹೀಗಾಗಿ ಜನರ ನೂಕುನುಗ್ಗಲು ಶುರುವಾಗಿದೆ.
ಸಾಮಾಜಿಕ ಅಂತರ ಇಲ್ಲ, ಮಾಸ್ಕ್ ಇಲ್ಲದೆ ಜನರು ಉಚಿತ ವ್ಯಾಕ್ಸಿನ್ ಪಡೆಯಲು ಮುಗಿಬಿದ್ದಿದ್ದಾರೆ. ಈ ವೇಳೆ ಸ್ಥಳೀಯ ಮುಖಂಡ ಬಾಲಕೃಷ್ಣ ಮಾತನಾಡಿ, ನಮ್ಮ ಶಾಸಕರು ಜನರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಕೂಡ ನಮ್ಮ ಪಂಚಾಯ್ತಿ ದಾಸನಪುರ ವ್ಯಾಪ್ತಿಯಲ್ಲಿನ ಬಡ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ಅವರಿಗೆ ಲಸಿಕೆ ಹಾಕಿಸುವ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದೇವೆ.
ನಾವು 500 ಜನರಿಗೆ ವ್ಯಾಕ್ಸಿನ್ ಪಡೆಯಲು ಗುರುತಿನ ಚೀಟಿ ನೀಡಿದ್ದೆವು. ಆದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ ಸಾಧ್ಯವಾದಷ್ಟು ಜನರಿಗೆ ಲಸಿಕೆ ಹಾಕಿಸುವ ಪ್ರಯತ್ನ ಮಾಡುವುದಾಗಿ ಆಯೋಜಕರು ತಿಳಿಸಿದ್ದಾರೆ. ಈ ವೇಳೆ ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ಅರಸಹನುಮಂತೇಗೌಡ್ರು, ಗ್ರಾಮ ಪಂಚಾಯ್ತಿ ಸದಸ್ಯ ಡಿ.ಬಿ ಬಾಲಕೃಷ್ಣ, ಮಧುಸೂದನ್, ರಂಗಾಚಾರ್, ಗಿರೀಶ್.ಡಿಎಂ, ಹನುಮಂತರಾಜು ಇನ್ನಿತರರು ಹಾಜರಿದ್ದರು. ಇದನ್ನೂ ಓದಿ: ರಸ್ತೆ ಬದಿ ನಿಂತು ಸೀಬೆಕಾಯಿ ಸವಿದ ಪ್ರಹ್ಲಾದ್ ಜೋಶಿ