ಶಾಲಾ-ಕಾಲೇಜು ಆರಂಭಕ್ಕೆ ಸೋಮವಾರ ಮಾರ್ಗಸೂಚಿ

Public TV
1 Min Read

ಬೆಂಗಳೂರು: ಆಗಸ್ಟ್ 23ರಿಂದ ಶಾಲಾ- ಕಾಲೇಜು ಆರಂಭಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೊದಲ ಹಂತದಲ್ಲಿ 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ತರಗತಿಗಳು ಆರಂಭಗೊಳ್ಳಲಿವೆ. ಈ ಸಂಬಂಧ ಸೋಮವಾರ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಲಿದೆ.

ಶಾಲೆ ಕಾಲೇಜು ಆರಂಭವಾಗುವ ಸಮಯದಲ್ಲೇ ಕೆಲವು ತಜ್ಞರಿಂದ ಅಪಸ್ವರ ವ್ಯಕ್ತವಾಗಿದೆ. ಸರ್ಕಾರ ರಿಸ್ಕ್ ತಗೊಳ್ಳುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಜಿಲ್ಲಾಧಿಕಾರಿಗಳು, ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಆಗಸ್ಟ್ 23ರಿಂದ ಶಾಲೆ ಓಪನ್ ಮಾಡೋಣ ಅಂತಾ ಸ್ಪಷ್ಟಪಡಿಸಿದ್ರು. ಶಾಲೆ ಕಾಲೇಜು ಆರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಸೂಚನೆ ನೀಡಿದ್ರು.

ಇದೇ ವೇಳೆ ಶಾಲೆಗಳಿಲ್ಲದೆ ಮಕ್ಕಳು ಓದುವುದನ್ನೇ ಮರೆತಿದ್ದಾರೆ. ಹಳ್ಳಿಗಳಲ್ಲಿ ಪೋಷಕರು ಮಕ್ಕಳನ್ನು ಹೊಲದ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ ಅಂತ ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಆತಂಕ ವ್ಯಕ್ತಪಡಿಸಿದ್ರು. ಕೂಡಲೇ ಶಾಲೆ ಆರಂಭಿಸಿ ಎಂದು ಒತ್ತಾಯಿಸಿದರು.

ಶಾಲಾ-ಕಾಲೇಜು ಆರಂಭದ ಮಾರ್ಗಸೂಚಿ ಏನಿರಬಹುದು?:
ಈ ಬಾರಿಯೂ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಅಲ್ಲ. ಆಫ್‍ಲೈನ್ ಅಥವಾ ಆನ್‍ಲೈನ್ ಕ್ಲಾಸಲ್ಲಿ ಒಂದನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಪೋಷಕರಿಂದ ಅನುಮತಿ ಪತ್ರ ಕಡ್ಡಾಯ ಪಡೆದು ಶಾಲೆಗೆ ಬರೋದು. ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದ್ದರೆ ಪಾಳಿ ಪದ್ಧತಿ ಅನುಸರಿಸಲು ಶಾಲೆಗಳಿಗೆ ಸಲಹೆ ನೀಡಬಹುದು. ದಿನ ಬಿಟ್ಟು ದಿನ ಅಥವಾ ವಾರಕ್ಕೆ 3 ದಿನ ಶಾಲೆಗೆ ಬರಬೇಕು ಅನ್ನೋ ವಿಧಾನ ತರಬಹುದು. ಆರೋಗ್ಯ ವ್ಯತ್ಯಾಸ ಇದ್ದಲ್ಲಿ ಯಾರಿಗೂ ಪ್ರವೇಶ ಇಲ್ಲ. ಶಿಕ್ಷಕರು ಹಾಗೂ ಸಿಬ್ಬಂದಿ 1 ಡೋಸ್ ಆದ್ರೂ ಪಡೆದಿರಬೇಕು ಎಂಬ ಷರತ್ತು ವಿಧಿಸಬಹುದು. ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಮತ್ತೆ ಟಫ್ ರೂಲ್ಸ್ ಜಾರಿಯಾಗುತ್ತಾ?

Share This Article
Leave a Comment

Leave a Reply

Your email address will not be published. Required fields are marked *