ಶಮಂತ್ ಒಂದು ದಾರಿಯಲ್ಲಿ ನಡೆದು ಬಿಟ್ರೆ, ನಾನು ಚಾಲೆಂಜ್ ಮಾಡ್ತೇನೆ: ಚಕ್ರವರ್ತಿ

Public TV
2 Min Read

ಗಮನವನ್ನು ಸೆಳೆಯುತ್ತ ಟಾಸ್ಕ್‌ನಲ್ಲಿ ಸೋತ ನಿಂಗೈತೆ ತಂಡದ ಇಬ್ಬರು ಸದಸ್ಯರು ಇಡೀ ದಿನದಲ್ಲಿ 10 ಜೊತೆ ಬಟ್ಟೆ ಚೇಂಜ್ ಮಾಡಬೇಕೆಂದು ಬಿಗ್‍ಬಾಸ್ ಸೂಚಿಸಿದ್ದರು.

ಸೂಚನೆಯ ಹಿನ್ನೆಲೆಯಲ್ಲಿ ದಿವ್ಯಾ ಸುರೇಶ್ ಹಾಗೂ ಶಮಂತ್ ಇಬ್ಬರು ಒಂದೇ ತರಹದ ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿ ವಿಜಯ ಯಾತ್ರೆ ತಂಡದ ನಾಯಕರಿಗೆ ತೋರಿಸಿ ಅನುಮೋದನೆ ಪಡೆಯುತ್ತಾ, ನಂತರ ಇಬ್ಬರು ಆ ಡ್ರೆಸ್‍ನಲ್ಲಿ ಕ್ಯಾಮೆರಾ ಮುಂದೆ ಪೋಸ್ ನೀಡಿ ಫೋಟೋ ಹಿಡಿಸಿಕೊಂಡಿದ್ದಾರೆ. ಅಲ್ಲದೇ ಶಮಂತ್ ಹಾಗೂ ದಿವ್ಯಾ ಉರುಡುಗ ಬ್ಯಾಕ್ ಟೂ ಬ್ಯಾಕ್ ಮ್ಯಾಚಿಂಗ್ ಡ್ರೆಸ್‍ಗಳನ್ನು ನೋಡಿ ಇಷ್ಟು ದಿನ ಇಷ್ಟು ಚೆಂದದ ಬಟ್ಟೆಗಳನ್ನು ಇಟ್ಟುಕೊಂಡು ಹಾಕಿಕೊಂಡೇ ಇಲ್ಲ ಮನೆ ಮಂದಿಯೆಲ್ಲಾ ಕಾಮೆಂಟ್ ಕೂಡ ಮಾಡುತ್ತಾರೆ.

ಈ ನಡುವೆ ಎಲ್ಲರೂ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುವ ವೇಳೆ ಚಕ್ರವರ್ತಿಯವರು, ಒಂದೊಂದು ಜೊತೆ ಬಟ್ಟೆ ಹಾಕಿಕೊಂಡು ನೀನು ಏನೇನು ಮಾಡುತ್ತಿದ್ಯಾ ಅನ್ನುವುದು ಎಂದು ಶಮಂತ್‍ರನ್ನು ಅಣುಕಿಸುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ಇಬ್ಬರು ಟಾಸ್ಕ್ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಆಗ ಚಕ್ರವರ್ತಿಯವರು ಟಾಸ್ಕ್ ಅಲ್ಲಮ್ಮ, ಇವನು ಇನ್ನೂ ಬೇರೆ, ಬೇರೆ ಮಾಡುತ್ತಿದ್ದಾನೆ. ನಿನ್ನದು ಒಂದೇ ದೃಷ್ಟಿಕೋನ, ಆದರೆ ನಾನು ತಿರುಗಿಸಿ, ತಿರುಗಿಸಿ ನೋಡುತ್ತಿರುತ್ತೇನೆ. ಈ ಹುಡುಗ ಯಾವತ್ತಾದರೂ ಒಂದು ದಾರಿಯಲ್ಲಿ ನಡೆದು ಬಿಟ್ಟರೆ, ನಾನು ಚಾಲೆಂಜ್ ಮಾಡಿ ಬಿಡುತ್ತೇನೆ. ಎರಡು ದೋಣಿ ಮೇಲೆ ಕಾಲಿಡುತ್ತಾನೆ ಎನ್ನುತ್ತಾರೆ.

ಆಗ ವೈಷ್ಣವಿ ಎರಡೇನಾ? ಅಂದಾಗ ಈ ಮನೆಯಲ್ಲಿ ಮಾಡುತ್ತಾ ಇರುವುದು ಎರಡೆನೇ ಮೂರನೆಯದಕ್ಕೆ ಜಾಗವಿಲ್ಲ ಎಂದು ಚಕ್ರವರ್ತಿಯವರು ಹೇಳುತ್ತಾರೆ. ಆಗ ಶಮಂತ್ ಕೆರಿಯರ್ ಮತ್ತು ಆಫೀಸ್ ಎರಡು ದೋಣಿಯಲ್ಲಿ ಹೋಗುತ್ತಿದೆ. ಆದರೆ ಈಗ ಆಫೀಸ್ ಬಿಟ್ಟು ಕೆರಿಯರ್ ಎಂಬ ಒಂದೇ ದೋಣಿಯಲ್ಲಿ ಹೋಗುತ್ತಿದ್ದೇನೆ ಎನ್ನುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ಕೊನೆಯದಾಗಿ ನೀನು ಮಾಡುವುದು ನಿನಗೆ ಸರಿ ಎನಿಸಿದರೆ ಬೇರೆಯವರಿಗೆ ಏನು ಹೇಳುವುದು ಬೇಕಾಗಿಲ್ಲ ಎಂದು ಟಾಂಗ್ ನೀಡುತ್ತಾರೆ.

ನಂತರ ಮೇಕಪ್ ರೂಮಿನಲ್ಲಿ ಕುಳಿತು ದಿವ್ಯಾ ಸುರೇಶ್ ನೀನು ಚಕ್ರವರ್ತಿಯವರು ವೈಯಕ್ತಿವಾಗಿ ಏನಾದರೂ ಮಾತನಾಡಿಕೊಳ್ಳಿ ಅದರಿಂದ ನನಗೆ ತೊಂದರೆಯಾಗುವುದಿಲ್ಲ. ಆದರೆ ನಿನ್ನ ವಿಷಯಕ್ಕೆ ಬೇರೆಯವರನ್ನು ಹೋಲಿಸಿ ಮಾತನಾಡುತ್ತಿದ್ದಾರೆ, ಇನ್ ಡೈರೆಕ್ಟ್ ಆಗಿ ಎರಡು ದೋಣಿ, ಮೂರು ದೋಣಿ ಎನ್ನುವುದು ನನಗೆ ಇಷ್ಟವಾಗುವುದಿಲ್ಲ, ನೀನು ಮಾತನಾಡಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ:ಬಿಗ್‍ಬಾಸ್ ಮನೆಯಲ್ಲಿ ಕೊರೊನಾ ಆತಂಕ

Share This Article
Leave a Comment

Leave a Reply

Your email address will not be published. Required fields are marked *