ನವದೆಹಲಿ: ನಾಳೆಯ ಸಂಜೆಯ ಒಳಗಡೆ ಬಹುಮತವನ್ನು ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ಬಿಎಸ್ ಯಡಿಯೂರಪ್ಪನವರಿಗೆ ಆದೇಶಿಸಿದೆ.
ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ಶನಿವಾರ 4 ಗಂಟೆಯ ಒಳಗಡೆ ಬಹುಮತವನ್ನು ಸಾಬೀತುಪಡಿಸಬೇಕು. ಅಷ್ಟೇ ಅಲ್ಲದೇ ಅಂಗ್ಲೋ ಇಂಡಿಯನ್ ನೇಮಕ ಮಾಡುವಂತಿಲ್ಲ ಎಂದು ಆದೇಶಿಸಿದೆ.
ಇದರ ಜೊತೆಯಲ್ಲಿ ಬಹುಮತ ಸಾಬೀತುಪಡೆಸುವ ವರೆಗೂ ಯಾವುದೇ ಆಡಳಿತಾತ್ಮಕ ನಿರ್ಧಾರವನ್ನು ಬಿಎಸ್ ಯಡಿಯೂರಪ್ಪನವರನ್ನು ಪ್ರಕಟಿಸುವಂತಿಲ್ಲ ಎಂದು ಆದೇಶಿಸಿದೆ.
ಸುಪ್ರೀಂ ಆದೇಶವನ್ನು ಬಿಜೆಪಿ ಸ್ವಾಗತಿಸಿದ್ದು, ಸಂಸದೆ ಶೋಭಾ ಕರಂದ್ಲಾಜೆ, ನಮಗೆ 120 ಮಂದಿ ಸದಸ್ಯರ ಬೆಂಬಲವಿದ್ದು ಬಹುಮತವನ್ನು ಸಾಬೀತು ಪಡಿಸುತ್ತೇವೆ ಎಂದು ಹೇಳಿದ್ದಾರೆ.