ವೈಷ್ಣವಿ ಧರಿಸೋದು ಮಾತ್ರ ಬಿಟ್ಟಿ ಬಟ್ಟೆ- ಹೇಗೆಂದು ವಿವರಿಸಿದ ಕಣ್ಮಣಿ

Public TV
2 Min Read

ಟ, ನಟಿಯರು ಬಟ್ಟೆಗಳನ್ನು ಹೇಗೆ ನಿರ್ವಹಿಸುತ್ತಾರೆ. ಎಲ್ಲವನ್ನೂ ಅವರೇ ಕೊಳ್ಳುತ್ತಾರಾ, ಇಲ್ಲವೇ ಸ್ಪಾನ್ಸರ್ ಮಾಡುತ್ತಾರೋ ಅಥವಾ ಯಾರಾದರೂ ಡಿಸೈನರ್ಸ್ ಕೊಲ್ಯಾಬರೇಶನ್ ಮಾಡುತ್ತಾರೋ ಎಂಬ ಹಲವು ಪ್ರಶ್ನೆಗಳು ಜನಸಾಮಾನ್ಯರಿಗೆ ಕಾಡುತ್ತಿರುತ್ತವೆ. ಇದಕ್ಕೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಉತ್ತರ ಸಿಕ್ಕಿದೆ. ಹೌದು ವೈಷ್ಣವಿ ಅವರ ಬಟ್ಟೆ ಕುರಿತು ಕೇಳಿದಾಗ ಹಲವು ವಿಚಾರಗಳನ್ನು ಕಣ್ಮಣಿ ತೆರೆದಿಟ್ಟಿದ್ದಾರೆ.

ಸ್ಪರ್ಧಿಗಳನ್ನು ಶೂಟಿಂಗ್‍ಗೆ ಕರೆದು ಇಂದೂ ಸಹ ಕಣ್ಮಣಿ ಹಲವು ವಿಚಾರದ ಕುರಿತು ಚರ್ಚಿಸಿದ್ದಾರೆ. ಅಲ್ಲದೆ ಇದು ಕೊನೇಯ ದಿನದ ಎಪಿಸೋಡ್ ಆಗಿದ್ದರಿಂದ ವೀಕ್ಷಕರು ಸಹ ಅಷ್ಟೇ ಕುತೂಹಲದಿಂದ ಬಿಗ್ ಬಾಸ್ ಶೋ ವೀಕ್ಷಿಸಿದ್ದಾರೆ. ಇದೆಲ್ಲದರ ಮಧ್ಯೆ ಕಣ್ಮಣಿ ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮಾತು ಆರಂಭಿಸುತ್ತಿದ್ದಂತೆ ಸ್ಪರ್ಧಿಗಳ ಬಟ್ಟೆ ಬಗ್ಗೆ ಮಾತನಾಡಿದ್ದಾರೆ. ಎಲ್ಲ ಹೆಣ್ಣು ಮಕ್ಕಳು ತುಂಬಾ ಮುದ್ದಾಗಿ ಕಾಣಿಸುತ್ತಿದ್ದೀರಿ. ಗಂಡು ಮಕ್ಕಳಲ್ಲಿ ಪ್ರಶಾಂತ್ ಹಾಗೂ ಅರವಿಂದ್ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ. ಚಕ್ರವರ್ತಿಯವರು ಯಾಕೋ ಮೂಡಲ್ಲೇ ಇಲ್ಲ ಎಂದು ಕಾಲೆಳೆದಿದ್ದಾರೆ.

ಬಳಿಕ ವೈಷ್ಣವಿ ಬಟ್ಟೆ ಬಗ್ಗೆ ಕಣ್ಮಣಿ ಮಾತನಾಡಿದ್ದಾರೆ. ನಿಮಗೆ ಹಳದಿ ಬಣ್ಣ ಇಷ್ಟಾನಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವೈಷ್ಣವಿ ಹಾ ಇಷ್ಟ, ಆದರೆ ಬ್ಲ್ಯಾಕ್ ತುಂಬಾ ಇಷ್ಟ ಎಂದಿದ್ದಾರೆ. ತಕ್ಷಣವೇ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ, ಎಲ್ಲಿ ತಗೋಂಡಿದ್ದು ಎಂದು ಕಣ್ಮಣಿ ಪ್ರಶ್ನಿಸಿದ ತಕ್ಷಣ ಕೊಲ್ಯಾಬರೇಶನ್ ಎಂದು ಸ್ಪರ್ಧಿಗಳು ಹೇಳುತ್ತಾರೆ. ಈ ಕೊಲ್ಯಾಬರೇಶನ್ ಬಗ್ಗೆ ನಮ್ಮ ವೀಕ್ಷಕರಿಗೆ ಗೊತ್ತಿಲ್ಲ ಸ್ವಲ್ಪ ವಿವರಿಸುತ್ತೀರಾ ಎಂದು ಕಣ್ಮಣಿ ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ವೈಷ್ಣವಿ, ತುಂಬಾ ಪ್ರೀತಿಯಿಂದ ನನ್ನ ಡಿಸೈನರ್ಸ್, ಸ್ಟೈಲಿಸ್ಟ್ ನನಗೆ ಬಟ್ಟೆಗಳನ್ನು ಕಳುಹಿಸಿಕೊಡುತ್ತಾರೆ. ಯಾವುದೇ ರೀತಿಯ ಹಣವನ್ನು ಅಪೇಕ್ಷಿಸದ್ದಕ್ಕೆ ಕೊಲಾಬರೇಶನ್ ಇಂದು ಇವರು ಕರೆಯುತ್ತಾರೆ. ಆದರೆ ಅವರು ನನಗೋಸ್ಕರ ಪ್ರೀತಿಯಿಂದ ಮಾಡಿಕೊಡುತ್ತಾರೆ ಎಂದು ಹೇಳುತ್ತಾರೆ. ಮಧ್ಯ ಪ್ರವೇಶಿಸಿದ ಮಂಜು ಪಾವಗಡ, ಅಂದರೆ ಇದಕ್ಕೆ ದುಡ್ಡು ಏನೂ ಇಲ್ಲ, ಸುಮ್ಮನೇ ಕೊಟ್ಟು ಮತ್ತೆ ವಾಪಸ್ ಅವರೇ ತೆಗೆದುಕೊಂಡು ಹೋಗುತ್ತಾರೆ ಎನ್ನುತಾರೆ. ಇದಕ್ಕೆ ಧ್ವನಿಗೂಡಿಸಿದ ಪ್ರಶಾಂತ್ ಸಂಬರಗಿ ಸೆಲೆಬ್ರಿಟಿ, ಅಗ್ನಿಸಾಕ್ಷಿ ಹಿರೋಯಿನ್ ಅಲ್ವಾ ಎಂದು ಹೇಳುತ್ತಾರೆ. ಚಕ್ರವರ್ತಿ ಸಹ ಮಾತನಾಡಿ, ಅಂಗಡಿಗಳಲ್ಲಿ ಗೊಂಬೆಗೆ ಹಾಕುವ ಬದಲು ಇಲ್ಲಿ ಹಾಕಿ, ವಾಪಸ್ ಕೊಂಡೊಯ್ಯುತ್ತಾರೆ. ಇವರು ಗೊಂಬೆ ಥರ ಇದ್ದಾರಲ್ಲಾ ಅದಕ್ಕೆ ಇವರಿಗೆ ಕೊಡುತ್ತಾರೆ ಎನ್ನುತ್ತಾರೆ.

ಬಳಿಕ ಕಣ್ಮಣಿ ಎಷ್ಟು ಜನ ಕೊಲಾಬರೇಶನ್ ಇಲ್ಲಿ ಎಂದು ಪ್ರಶ್ನಿಸಿದ್ದಾರೆ, ಆಗ ವೈಷ್ಣವಿ ಮಾತ್ರ ಕೈ ಎತ್ತಿದ್ದಾರೆ. ತಕ್ಷಣವೇ ಮಾತನಾಡಿದ ಕಣ್ಮಣಿ ಹಾಗಾದ್ರೆ ಬಿಟ್ಟಿ ಬಟ್ಟೆ ಸಿಗುತ್ತಿರುವುದು ವೈಷ್ಣವಿಗೆ ಮಾತ್ರ ಎಂದು ಕಣ್ಮಣಿ ಕಾಲೆಳೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *