ವೈನ್‍ಸ್ಟೋರ್ ರಘುಗೆ ಈ ವಾರದ ಕಿಚ್ಚನ ಚಪ್ಪಾಳೆ

Public TV
2 Min Read

ಬಿಗ್‍ಬಾಸ್ ಮನೆಯಲ್ಲಿ ಪ್ರತಿವಾರ ಅತ್ಯುತ್ತಮವಾಗಿ ಆಟ ಆಡಿದ ಸ್ಪರ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಲು ಕಿಚ್ಚ ಸುದೀಪ್ ಚಪ್ಪಾಳೆ ಹೊಡೆಯುತ್ತಾರೆ. ಪ್ರತಿವಾರ ಸ್ಪರ್ಧಿಗಳು ಕಿಚ್ಚನ ಚಪ್ಪಾಳೆಗಾಗಿ ಕಾಯುತ್ತಾ ಇರುತ್ತಾರೆ.

ಅದರಂತೆ ಈ ಬಾರಿ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ರಘುರವರಿಗೆ ಸಿಕ್ಕಿದೆ. ಬಿಗ್‍ಬಾಸ್ ಮನೆಯಲ್ಲಿ ಎಚ್ಚರವಾಗಿರುವುದು ಬಹಳ ಮುಖ್ಯ. ಈ ವಾರ ಈ ವ್ಯಕ್ತಿ ಎಚ್ಚರವಾಗಿದ್ದರು. ಬಿಗ್‍ಬಾಸ್ ಮನೆಯಲ್ಲಿ ಆ ಕ್ಷಣದಲ್ಲಿ ಬದುಕುವುದು ಬಹಳ ಬಹಳ ಮುಖ್ಯ, ಇವರು ಬದುಕಿದರು. ಭಾವನೆಗಳನ್ನು ಬಿಗ್‍ಬಾಸ್ ಮನೆಯಲ್ಲಿ ಇವರು ಈ ಬಾರಿ ಮುಕ್ತವಾಗಿ ಹಂಚಿಕೊಳ್ಳಬೇಕು. ಈ ಮನೆಯಲ್ಲಿ ಇವರು ಅನಿಸಿಕೆಗಳನ್ನು ನೇರವಾಗಿ ಹೇಳಿದರು. ಎಲ್ಲದರ ನಡುವೆ ತಮ್ಮ ತನವನ್ನು ತಾವು ಬಿಟ್ಟು ಕೊಡಬಾರದು, ಇವರು ಬಿಟ್ಟುಕೊಡಲಿಲ್ಲ. ಚೆನ್ನಾಗಿ ಟಾಸ್ಕ್ ಆಡಬೇಕು, ಆದರೆ ಇವರು ಆಡಲಿಲ್ಲ. ಆದರೆ ಪ್ರಯತ್ನ ಪಡುತ್ತಾರೆ.

ಎರಡು ವಾರದ ಹಿಂದೆ ನಾನು ಹೇಳಿದ್ದನ್ನು ಮಾಡಬಹುದು, ಮಾಡುತ್ತಾರೆ ಎಂಬ ಸೂಚನೆ ಕೂಡ ಕೊಡದೇ, ಒಂದೇ ವಾರದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಈ ವ್ಯಕ್ತಿಗೆ ನಾನು ಪ್ರೋತ್ಸಾಹ ಕೊಟ್ಟೆ ಕೊಡುತ್ತೇನೆ. ಇನ್ನೂ ಚೆನ್ನಾಗಿ ಆಟ ಆಡಬೇಕೆಂದರೆ ಅವರಿಗೆ ಈ ಎನ್‍ಕ್ರೇಜ್‍ಮೆಂಟ್ ಹೋಗಲೇಬೇಕು ಎಂದು ಹೇಳುತ್ತಾ, ಈ ವಾರದ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ರಘುರವರಿಗೆ ಎಂದು ಚಪ್ಪಾಳೆ ತಟ್ಟುತ್ತಾರೆ.

ಬಳಿಕ ಮಾತನಾಡಿದ ರಘು, ಎರಡು ವಾರಕ್ಕೂ ಮುನ್ನ ಶಂಖದಿಂದಲೇ ತೀರ್ಥ ಬರುವ ರೀತಿ ಆಟೋ ಹೊರಗೆ ಬಂದು ಕಾಯುತ್ತಿದ್ದ ವೇಳೆ ನನಗೆ ಸ್ವಲ್ಪ ಭಯವಾಗಿತ್ತು. ಆದರೆ ಆಗ ಯೋಚಿಸಿದೆ, ನಾನು ಎಲ್ಲರ ವಿರುದ್ಧ ಹೋರಾಡುವುದಕ್ಕಿಂತ ನನ್ನ ವಿರುದ್ಧ ನಾನು ಹೋರಾಡುತ್ತಿದ್ದೆ ಅನಿಸಿತ್ತು. ಆ ನಡವಳಿಕೆ ಇದೀಗ ಬದಲಾಗಿದೆ. ಮೊದಲಿಗೆ ಮಂಜು ಕಂಡರೆ ಭಯಪಡುತ್ತಿದ್ದೆ. ಆದರೆ ಈಗ ಅವರ ಹತ್ತಿರವೇ ಹೋಗಿ, ನಾನು ನಿಮಗೆ ಫೈಟ್ ಕೊಡಬೇಕೆಂಬ ಛಲ ಹಾಗೂ ಆಸೆ ಇದೆ ಎಂದು ಹೇಳುವಷ್ಟು ಧೈರ್ಯ ಬಂದಿದೆ. ಸೋ ಎಲ್ಲರಿಗೂ ನಾನು ಅದೇ ರೀತಿ ಹೇಳುತ್ತೇನೆ ಎಂದು ಹೇಳುತ್ತಾರೆ.

ಈ ಹಿಂದೆ ಮೊದಲನೇ ವಾರ ಶಂಕರ್, ಎರಡನೇ ವಾರ ಶುಭ ಹಾಗೂ ಮೂರನೇ ವಾರ ಅರವಿಂದ್ ಕಿಚ್ಚನ ಚಪ್ಪಾಳೆ ಗಳಿಸಿದ್ದರು. ಇದೀಗ ನಾಲ್ಕನೇ ವಾರದಲ್ಲಿ ರಘು ಕಿಚ್ಚನ ಮೆಚ್ಚುಗೆಯ ಚಪ್ಪಾಳೆಯನ್ನು ಗಳಿಸಿದ್ದಾರೆ.

ಒಟ್ಟಾರೆ ಕಿಚ್ಚನ ಚಪ್ಪಾಳೆ ಜೊತೆ ಕೈ ಜೋಡಿಸಿ, ಮನೆಯ ಎಲ್ಲ ಸದಸ್ಯರು ರಘುಗೆ ಚಪ್ಪಾಳೆ ಹೊಡೆಯುವ ಮೂಲಕ ಹರ್ಷವನ್ನು ವ್ಯಕ್ತಪಡಿಸುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *