– 10 ಸಾವಿರ ಫಲಾನುಭವಿಗಳು ಪ್ರಯೋಜನ
ಮಂಗಳೂರು: ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯಾದ್ಯಂತ ವಾತ್ಸಲ್ಯ ಸಹಾಯಹಸ್ತ ವಿತರಣೆ ಕಾರ್ಯಕ್ರಮಕ್ಕೆ ಧರ್ಮಸ್ಥಳದಲ್ಲಿ ಚಾಲನೆ ನೀಡಲಾಯಿತು.
ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸಹಾಯಹಸ್ತ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೋಜನೆಯ ವತಿಯಿಂದ ಧರ್ಮಾಧಿಕಾರಿಗಳಿಗೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗೌರವ ಸಮರ್ಪಿಸಲಾಯಿತು. ಇದೇ ವೇಳೆ ಹಲವು ಕ್ಷೇತ್ರದ ಗಣ್ಯರು ಧರ್ಮಸ್ಥಳಕ್ಕೆ ಭೇಟಿ ನೀಡಿ ಡಾ.ವೀರೇಂದ್ರ ಹೆಗ್ಗಡೆಯವರಿಗೆ ಹುಟ್ಟುಹಬ್ಬದ ಶುಭಾಶಯ ಅರ್ಪಿಸಿದರು.
ಈ ಸಂದರ್ಭ ರಾಜ್ಯದ್ಯಂತ ವಿತರಿಸಲ್ಪಡುವ ‘ವಾತ್ಸಲ್ಯ ಕಿಟ್’ ಸಾಗಿಸುವ ಟ್ರಕ್ ಗಳಿಗೆ ಚಾಲನೆ ನೀಡಲಾಯಿತು. ವಾತ್ಸಲ್ಯ ಸಹಾಯಹಸ್ತ ಯೋಜನೆಯಲ್ಲಿ ಸುಮಾರು 10 ಸಾವಿರ ಫಲಾನುಭವಿಗಳು ಪ್ರಯೋಜನ ಪಡೆಯಲಿದ್ದಾರೆ.