ವೀಕೆಂಡ್ ಲಾಕ್‍ಡೌನ್ ನಡುವೆ ಉಡುಪಿಯಲ್ಲಿ 354 ಮದುವೆ

Public TV
1 Min Read

– ಮದುವೆ ಮನೆಯಲ್ಲಿ ಖುಷಿ ಬೇಸರದ ಸಮ್ಮಿಲನ

ಉಡುಪಿ: ಕೋವಿಡ್ 19ರ ಅಬ್ಬರ, ವೀಕೆಂಡ್ ಲಾಕ್ ಡೌನ್ ಕಠಿಣ ನಿಯಮದ ನಡುವೆ ಉಡುಪಿಯಲ್ಲಿ ಸಿಂಪಲ್ ಮದುವೆಗಳು ನಡೆದಿವೆ. ಇಂದು ಜಿಲ್ಲೆಯಲ್ಲಿ ಜಿಲ್ಲಾಡಳಿತದ ಅನುಮತಿ ಪಡೆದು 354 ಮದುವೆಗಳು ನಡೆಯಿತು.

ಸಾವಿರ ಆಮಂತ್ರಣ ಅಚ್ಚು ಹಾಕಿಸಿದ ಕುಟುಂಬಗಳು 50 ಜನಕ್ಕೆ ಸೀಮಿತಗೊಳಿಸಿ ಮದುವೆ ಕಾರ್ಯ ಪೂರೈಸಿದೆ. ಮದುವೆಯನ್ನು ಫೇಸ್ ಬುಕ್, ಯುಟ್ಯೂಬ್ ನಲ್ಲಿ ಲೈವ್ ಮಾಡಿ ಕುಟುಂಬಸ್ಥರು ಮನೆಯಲ್ಲೇ ಕುಳಿತು ಮದುವೆ ನೋಡುತ್ತಿದ್ದಾರೆ. ನಗರದ ಶಾರದಾ ಮಂಟಪದಲ್ಲಿ ಉಡುಪಿಯ ಶ್ರಾವ್ಯಾ ಮೈಸೂರಿನ ಪ್ರಸನ್ನ ರಾವ್ ಸಿಂಪಲ್ಲಾಗಿ ಮದುವೆ ಮಾಡಿಕೊಂಡರು.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಪ್ರತಿಕ್ರಿಯಿಸಿದ ಕುಟುಂಬಸ್ಥರು, ಒಂದೂವರೆ ಸಾವಿರ ಜನರ ವ್ಯವಸ್ಥೆಗೆ ಸಿದ್ಧಗಾಗಿದ್ದೇವು ನಂತರ ಕಾರ್ಯಕ್ರಮವನ್ನು 50 ಜನಕ್ಕೆ ಸೀಮಿತಗೊಳಿಸಿದ್ದೇವೆ. ಮದುವೆ ಮುಂದೂಡಬಹುದಿತ್ತು ನಿಗದಿಯಾದ ಘಳಿಗೆ ಚೆನ್ನಾಗಿದ್ದ ಕಾರಣ ಮದುವೆ ಮಾಡುತ್ತಿದ್ದೇವೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ವಧುವಿನ ಮಾವ ಪ್ರಫುಲ್ಲಚಂದ್ರ ರಾವ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ನಾವು 1000 ಆಮಂತ್ರಣ ಪತ್ರಿಕೆಯನ್ನು ಪ್ರಿಂಟ್ ಮಾಡಿದ್ದೆವು ಆನಂತರ ಸರ್ಕಾರದ ನಿರ್ಧಾರ ಪ್ರಕಟ ಆಯ್ತು. ನಾವು ಮತ್ತೆ ಸಂಬಂಧಿಕರಿಗೆ ಕರೆ ಮಾಡಿ ಮದುವೆಗೆ ಬರಬೇಡಿ ಎಂದು ಹೇಳಿಲ್ಲ. ಸಂಬಂಧಿಕರೇ ಸಮಸ್ಯೆಯನ್ನು ಅರ್ಥಮಾಡಿಕೊಂಡು ಮದುವೆಗೆ ಬಂದಿಲ್ಲ ಎಂದು ಹೇಳಿದರು.

ವರ ಪ್ರಸನ್ನ ರಾವ್ ಮಾತನಾಡಿ, ನಾನು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಅಲ್ಲಿಂದ ಉಡುಪಿಗೆ ಸುಮಾರು 300 ಜನ ಕುಟುಂಬದವರು, ಸ್ನೇಹಿತರು ಬರುವ ಪ್ಲಾನ್ ಮಾಡಿದ್ದೆವು. ಬರೀ 15 ಜನ ಬಂದಿದ್ದೇವೆ. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಮೈಸೂರಿನಲ್ಲಿ ಒಂದು ರಿಸೆಪ್ಷನ್ ಮಾಡಿ ಮದುವೆಗೆ ಬರಲು ಅಸಾಧ್ಯ ಆದವರಿಗೆ ಪಾರ್ಟಿ ಕೊಡಬೇಕು ಎಂದು ಅಂದುಕೊಂಡಿದ್ದೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *