ವಿಶ್ವದ ದುಬಾರಿ ಕಾರನ್ನು ಖರೀದಿಸಿದ ಫುಟ್ಬಾಲ್‌ ತಾರೆ ರೊನಾಲ್ಡೊ

Public TV
1 Min Read

ರೋಮ್: ಜಗತ್ತಿನ ಶ್ರೀಮಂತ ಫುಟ್ಬಾಲ್ ಆಟಗಾರ ಪೋರ್ಚುಗಲ್‌ ದೇಶದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಪ್ರಪಂಚದ ದುಬಾರಿ ಕಾರನ್ನು ಖರೀದಿಸಿದ್ದಾರೆ.

ಕಾರಿನ ಮೇಲೆ ಹೆಚ್ಚು ಫ್ಯಾಷನ್ ಹೊಂದಿರುವ ರೊನಾಲ್ಡೊ ಅವರು ಬುಗಾಟಿ ಸಂಸ್ಥೆ ನಿರ್ಮಿಸಿರುವ 8.5 ದಶಲಕ್ಷ ಯುರೋ(ಅಂದಾಜು 75 ಕೋಟಿ ರೂ.) ಮೌಲ್ಯದ ಅತ್ಯಂತ ದುಬಾರಿ ಕಾರನ್ನು ಖರೀದಿಸಿದ್ದಾರೆ.

 

View this post on Instagram

 

You choose the view ????????

A post shared by Cristiano Ronaldo (@cristiano) on

2019 ರಲ್ಲಿ ವಿನ್ಯಾಸ ಮಾಡಲಾದ ಬುಗಾಟಿ ಲಾ ವೂಯಿಟ್ ನೊಯಿರ್ ಹೆಸರಿನ ಕಾರನ್ನು ರೊನಾಲ್ಡೊ ಖರೀದಿಸಿದ್ದರೂ ಈಗಲೇ ಇವರ ಕೈ ಸೇರುತ್ತಿಲ್ಲ. ಕೆಲ ಭಾಗಗಳನ್ನು ವಿನ್ಯಾಸ ಮಾಡಬೇಕಾಗಿರುವ ಕಾರಣ 2021ರಲ್ಲಿ ರೊನಾಲ್ಡೊ ಅವರಿಗೆ ಹಸ್ತಾಂತರವಾಗಲಿದೆ.

ಬುಗಾಟಿ ಕಂಪನಿ 110ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ 10 ಕಾರುಗಳನ್ನು ಮಾತ್ರ ತಯಾರಿಸುತ್ತಿದೆ. 2019ರ ಜಿನಿವಾ ಮೋಟರ್ ಶೋದಲ್ಲಿ ಈ ಕಾರಿನ ಮಾದರಿಯನ್ನು ಕಂಪನಿ ಅನಾವರಣಗೊಳಿಸಿತ್ತು. ಈ ಕಾರು ಕಂಪನಿಯ 8.0 ಲೀಟರ್ ಟರ್ಬೋಚಾರ್ಜ್ ಡಬ್ಲ್ಯೂ16 ಎಂಜಿನ್ ಹೊಂದಿದ್ದು ಗಂಟೆಗೆ 380 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಶೂನ್ಯದಿಂದ 60 ಕಿ.ಮೀ ವೇಗಕ್ಕೆ ಕೇವಲ 3 ಸೆಕೆಂಡ್‌ಗಳಲ್ಲಿ ಕ್ರಮಿಸುವ ಸಾಮರ್ಥ್ಯ ಈ ಕಾರಿಗಿದೆ.

ಕಾರಿನ ಮೇಲೆ ಹೆಚ್ಚು ಒಲವು ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಜಗತ್ತಿನ ಅತ್ಯಂತ ದುಬಾರಿ ಕಾರುಗಳ ಒಡೆಯರಾಗಿದ್ದಾರೆ. ಅವರ ಬಳಿ ಮರ್ಸಿಡಿಸ್ ಸಿ ಕ್ಲಾಸ್ ಸ್ಪೋರ್ಟ್ಸ್ ಕೂಪೆ, ರೋಲ್ಸ್ ರಾಯ್ಸ್ ಫ್ಯಾಂಥಮ್, ಫೆರಾರಿ 599 ಜಿಟಿಒ, ಲ್ಯಾಂಬೋರ್ಗಿನಿ ಅವೆಂಟಡರ್ ಎಲ್‍ಪಿ 700-4, ಆಸ್ಟನ್ ಮಾರ್ಟೀನ್ ಡಿಬಿ 9, ಮೆಕ್ಲಾರೆನ್ ಎಂಪಿ 4 12 ಸಿ ಮತ್ತು ಬೆಂಟ್ಲೆ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ನಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *