ವಿಶ್ವದಲ್ಲೇ ಅತ್ಯಂತ ಚಿಕ್ಕ ಊಸರವಳ್ಳಿ ಪತ್ತೆ ಮಾಡಿದ ವಿಜ್ಞಾನಿಗಳು

Public TV
1 Min Read

ಬರ್ಲಿನ್: ವಿಶ್ವದಲ್ಲೇ ಅತ್ಯಂತ ಚಿಕ್ಕ ಊಸರವಳ್ಳಿ ಪತ್ತೆಯಾಗಿದೆ. ಮಾನವನ ಬೆರಳ ತುದಿಯಲ್ಲಿ ಕೂರುವಷ್ಟು ಚಿಕ್ಕದಾದ ಹೊಸ ಪ್ರಭೇದದ ಗೋಸುಂಬೆ (ಊಸರವಳ್ಳಿ)ಯನ್ನು ಮಡಗಾಸ್ಕರ್ ಮತ್ತು ಜರ್ಮನಿಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ವಿಶ್ವದ ಅತಿ ಚಿಕ್ಕದಾದ ಸರೀಸೃಪಗಳಿಗೆ ಸ್ಪರ್ಧೆ ನೀಡುವಂತಿದೆ ಊಸರವಳ್ಳಿಯಾಗಿದೆ. ಅಂತರರಾಷ್ಟ್ರೀಯ ಸಂಶೋಧಕರ ತಂಡವೊಂದು ಈ ಹೊಸ ಪ್ರಬೇಧವನ್ನು ವರ್ಗೀಕರಿಸಿ, ಅದಕ್ಕೆ ಬ್ರುಕೇಶಿಯಾ ನಾನಾ ಎಂದು ಹೆಸರಿಟ್ಟಿದ್ದು, ಈ ಊಸರವಳ್ಳಿ ಫೋಟೋ ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಜ್ಞಾನಿ ಫ್ರಾಂಕ್ ಗ್ಲಾವ್ ಹೇಳುವ ಪ್ರಕಾರ ಗಂಡು ಮಾದರಿಯ ಹೊಸ ಪ್ರಭೇದದ ದೇಹವು ಕೇವಲ 13.5 ಮಿಲಿಮೀಟರ್ ಉದ್ದವಿದೆ (1/2 ಇಂಚಿಗಿಂತ ಸ್ವಲ್ಪ ಹೆಚ್ಚು) ಇದೆ. ಈ ಹಿಂದೆ ಪತ್ತೆಯಾಗಿ ದಾಖಲೆಯನ್ನು ಸೃಷ್ಟಿಸಿದ್ದ, ಬ್ರೂಕೆಸಿಯಾ ಕುಟುಂಬದ ಮತ್ತೊಂದು ತಳಿಯ ಅಳತೆಗಿಂತ ಇದು ಕನಿಷ್ಠ 1.5 ಮಿ.ಮೀ ಚಿಕ್ಕದಾಗಿದೆ ಎಂದು ಅವರು ಹೇಳಿದ್ದಾರೆ.

ಇಲ್ಲಿನ ಮ್ಯೂಸಿಕ್‍ನಲ್ಲಿರುವ ಬವೇರಿಯನ್ ರಾಜ್ಯ ಪ್ರಾಣಿಶಾಸ್ತ್ರ ಸಂಗ್ರಹಾಲಯದ ಸರೀಸೃಪಗಳ ತಜ್ಞ ಫ್ರಾಂಕ್ ಗ್ಲಾವ್, 2012 ರಲ್ಲಿ ಸ್ಥಳೀಯ ಮಾರ್ಗದರ್ಶಿಯೊಬ್ಬ ಪರ್ವತದ ಪಕ್ಕದಲ್ಲಿ ಚಿಕ್ಕದಾದ ಗಂಡು ಮತ್ತು ಸ್ವಲ್ಪ ದೊಡ್ಡದಾದ ಹೆಣ್ಣು ಜಾತಿಯ ಗೋಸುಂಬೆಯನ್ನು ಪತ್ತೆ ಮಾಡಿದ್ದರು. ಇಂಥ ಚಿಕ್ಕದಾದ ಗೋಸುಂಬೆ ಪ್ರಭೇದಗಳನ್ನು ಹುಡುಕಬೇಕೆಂದರೆ, ನಿಮ್ಮ ಮೊಣಕಾಲುಗಳನ್ನು ನೆಲಕ್ಕೆ ಒತ್ತಿ ಕುಳಿತು, ಸಣ್ಣ ಕಣ್ಣುಗಳನ್ನು ಮಾಡಿಕೊಂಡು ಅತ್ಯಂತ ಸೂಕ್ಷ್ಮವಾಗಿ ಹುಡುಕಬೇಕು. ಅವು ಅಷ್ಟು ಸಣ್ಣದಾದ ಪ್ರಭೇದಗಳು ಎಂದು ಫ್ರಾಂಕ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *