ವಿವಾಹದಲ್ಲಿ ನಂಬಿಕೆ ಇಲ್ಲ, ಆದ್ರೂ ಮದ್ವೆಯಾದೆ: ರಾಧಿಕಾ ಆಪ್ಟೆ

Public TV
1 Min Read

– ಮದುವೆ ಆಗಿದ್ಯಾಕೆ ರಾಧಿಕಾ ಆಪ್ಟೆ?

ಮುಂಬೈ: ವಿವಾಹ ಮತ್ತು ಸಂಪ್ರದಾಯದಲ್ಲಿ ನನಗೆ ಯಾವುದೇ ರೀತಿಯ ವಿಶ್ವಾಸ ಮತ್ತು ನಂಬಿಕೆಗಳಿಲ್ಲ. ಆದ್ರೆ ವೀಸಾಗಾಗಿ ನಾನು ಮದುವೆ ಆಗಬೇಕಾದ ಪರಿಸ್ಥಿತಿ ಎದುರಾಯ್ತ ಎಂದು ಬಾಲಿವುಡ್ ನಟಿ ರಾಧಿಕಾ ಆಪ್ಟೆ ಹೇಳಿದ್ದಾರೆ.

ರಾಧಿಕಾ ಆಪ್ಟೆ ನಟನೆಯ ಸಿನಿಮಾಗಳು ಓಟಿಟಿ ಪ್ಲಾಟ್‍ಫಾರಂನಲ್ಲಿ ಸಖತ್ ಸದ್ದು ಮಾಡುತ್ತಿವೆ. ಹಿಂದಿ, ಮರಾಠಿ, ತಮಿಳು, ತೆಲಗು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಸಿನಿಮಾಗಳಲ್ಲಿ ದೊಡ್ಡ ಸ್ಟಾರ್ ಗಳ ಜೊತೆಯಲ್ಲಿ ರಾಧಿಕಾ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಲಂಡನ್ ಮೂಲದ ಸಂಗೀತಗಾರ ಬೆನೆಡಿಕ್ಟ್ ಟೇಲರ್ ಅವರನ್ನ ರಾಧಿಕಾ 2012ರಲ್ಲಿ ಮದುವೆಯಾಗಿದ್ದರು.

ಸಂದರ್ಶನದಲ್ಲಿ ವೇಳೆ ರಾಧಿಕಾ ಆಪ್ಟೆಯವರಿಗೆ ವೈಯಕ್ತಿಕ ಜೀವನದ ಕುರಿತು ಕೆಲ ಪ್ರಶ್ನೆಗಳನ್ನ ಕೇಳಲಾಗಿತ್ತು. ಮದುವೆಯಲ್ಲಿ ನಂಬಿಕೆ ಇಲ್ಲ ಅಂತಾ ಹೇಳುವ ನೀವು ಮದುವೆ ಆಗಿದ್ದೀರಾ ಅಲ್ವಾ ಎಂದು ಪ್ರಶ್ನೆಗೆ ರಾಧಿಕ ಹಾಸ್ಯಮಯವಾಗಿ ಉತ್ತರಿಸಿದ್ದಾರೆ. ನನಗೆ ಮದುವೆಯಾದ್ರೆ ವೀಸಾ ಬೇಗ ಸಿಗುತ್ತೆ ಎಂಬ ವಿಷಯ ತಿಳಿಯಿತು. ನಾನು ಮತ್ತು ಬೆನೆಡಿಕ್ಟ್ ಜೊತೆಯಾಗಿ ಇರಬೇಕೆಂದು ನಿರ್ಧರಿಸಿದಾಗ ನನಗೆ ವೀಸಾದ ಸಮಸ್ಯೆಯುಂಟಾಯ್ತು. ಮದುವೆ ಆಗಿದ್ದರಿಂದ ವೀಸಾ ಸುಲಭವಾಗಿ ಸಿಕ್ಕಿತು. ಹಾಗಂತ ಮದುವೆ ಮತ್ತು ಸಂಪ್ರದಾಯಗಳನ್ನ ಒಪ್ಪುತ್ತೇನೆ ಎಂದರ್ಥವಲ್ಲ ಎಂದಿದ್ದಾರೆ.

ರಾಧಿಕಾ ಮತ್ತು ಬೆನೆಡಿಕ್ಟ್ ಬಹುದೀರ್ಘ ಸಮಯದಿಂದ ರಿಲೇಶನ್ ಶಿಪ್ ನಲ್ಲಿದ್ದರು. ಕೆಲಸದ ನಿಮಿತ್ತ ರಾಧಿಕಾ ಹೆಚ್ಚಿನ ದಿನಗಳನ್ನ ಭಾರತದಲ್ಲಿ ಕಳೆಯವಂತಾಗಿತ್ತು. ನಂತರ ಇಬ್ಬರು 2012ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *