ಮಂಗಳೂರು: ವಿಪಕ್ಷ ನಾಯಕ ಸ್ಥಾನ ಹುದ್ದೆಯಿಂದ ಸಿದ್ದರಾಮಯ್ಯ ಬದಲಾವಣೆ ಆಗುತ್ತಾರೆ ಎಂಬ ಮಾಹಿತಿ ನಮಗೂ ದೆಹಲಿಯಿಂದ ಬಂದಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ನಾಳೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಗಳೂರಿಗೆ ಆಗಮಿಸಿದ್ದಾರೆ. ಬಿಎಸ್‍ವೈ ಜೊತೆ ಸಚಿವ ಆರ್ ಅಶೋಕ್, ಈಶ್ವರಪ್ಪ ಮತ್ತು ಡಿಸಿಎಂ ಕಾರಜೋಳ ಸಭೆಗೆ ಬಂದಿದ್ದಾರೆ. ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿದ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು.
ಇದೇ ವೇಳೆ ಉಪಚುನಾವಣೆಯ ನಂತರ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯನವರನ್ನು ಕುಟುಕಿದ ಸಿಎಂ, ಸಿದ್ದರಾಮಯ್ಯನವರ ಹೇಳಿಕೆಗೆ ನಾನು ರಿಯಾಕ್ಷನ್ ನೀಡುತ್ತಿರಲಿಲ್ಲ. ಮಾಧ್ಯಮದವರು ಪ್ರಶ್ನಿಸಿದ್ದಕ್ಕಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ಅವರು ದಿಲ್ಲಿಯಿಂದ ನನಗೆ ಸುದ್ದಿ ಬಂದಿದೆ ಎನ್ನುತ್ತಿದ್ದಾರೆ. ನಾನು ಇದೇ ರೀತಿ ಹೇಳಿಕೆ ನೀಡಲೇ? ನಮಗೂ ದೆಹಲಿಯಿಂದ ಮಾಹಿತಿ ಬಂದಿದೆ. ವಿಪಕ್ಷ ನಾಯಕ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಆಗುತ್ತೆ ಎಂದು, ಈ ರೀತಿಯ ಹಗುರವಾದ ಹೇಳಿಕೆಯನ್ನು ನಾನು ಇಷ್ಟಪಡಲ್ಲ. ಜವಾಬ್ದಾರಿಯುತವಾಗಿ ಮಾತಾಡುವಂತೆ ವಿನಂತಿ ಮಾತಾಡುತ್ತೇನೆ ಎಂದರು. ಇದನ್ನು ಓದಿ: I am very confident ಉಪಚುನಾವಣೆ ನಂತ್ರ ಯಡಿಯೂರಪ್ಪ ಬದಲಾಗ್ತಾರೆ: ಸಿದ್ದರಾಮಯ್ಯ
ಶಿರಾ, ಆರ್.ಆರ್ ನಗರ ಉಪಚುನಾವಣೆಯನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಎದುರಿಸಿದೆ. ನೂರಕ್ಕೆ ನೂರು ದಯಾನೀಯ ಸೋಲನ್ನು ಕಾಂಗ್ರೆಸ್ಸಿನವರು ಅನುಭವಿಸುತ್ತಾರೆ. ಬೈ ಎಲೆಕ್ಷನ್, ಪದವೀಧರ ಚುನಾವಣೆಯಲ್ಲಿ ಸೋಲನುಭವಿಸುತ್ತಾರೆ. ಬಿಜೆಪಿ ಗೆದ್ದ ಮೇಲೆ ಯಾರು ರಾಜೀನಾಮೆ ಕೊಡಬೇಕಾಗುತ್ತೆ? ಆಗ ಕ್ರಮ ಸಿದ್ದರಾಮಯ್ಯ ಮೇಲೋ ಅಥವಾ ಯಾರ ಮೇಲೆ ಎಂದು ಯಡಿಯೂರಪ್ಪ ಪ್ರಶ್ನೆ ಮಾಡಿದ್ದಾರೆ.