ವಿಧಿಯ ಮುಂದೆ ಎಲ್ಲವೂ ಶೂನ್ಯ – ಸೋಂಕಿತನ ಅಂತ್ಯಕ್ರಿಯೆ ನೆರವೇರಿಸಿ ಭಾವುಕರಾದ ರೇಣುಕಾಚಾರ್ಯ

Public TV
2 Min Read

– ಶಾಸಕರಿಂದ ಮತ್ತೊಮ್ಮೆ ಮಾನವೀಯ ಕಾರ್ಯ

ದಾವಣಗೆರೆ: ಇತ್ತೀಚೆಗೆ ಮಾನವೀಯ ಕಾರ್ಯಗಳ ಮೂಲಕ ಸದಾ ಸುದ್ದಿಯಲ್ಲಿರುವ ಶಾಸಕರ ಎಂಪಿ ರೇಣುಕಾಚಾರ್ಯ ಇದೀಗ ಮತ್ತೊಮ್ಮೆ ತಮ್ಮ ಮಹಾನ್ ಕಾರ್ಯದಿಂದ ಜನ ಮೆಚ್ಚುಗೆ ಗಳಿಸಿದ್ದಾರೆ.

ಹೌದು. ಆಂಧ್ರದ ಯುವಕನೊಬ್ಬನಿಗೆ ಮಹಾಮಾರಿ ಕೊರೊನಾ ಬಂದಿತ್ತು. ಹೀಗಾಗಿ ಆತನಿಗೆ ಹೊನ್ನಾಳಿಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ. ಇತ್ತ ಆತನ ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗಲು ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತ ಸೋಂಕಿತನ ಅಂತ್ಯಕ್ರಿಯೆಯನ್ನು ತಾವೇ ಮುಂದೆ ನಿಂತು ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗೆ ಸ್ಯಾನಿಟೈಸಿಂಗ್ ಮಾಡಿ – ಅಂಬುಲೆನ್ಸ್ ಡ್ರೈವರ್ ಆದ ಶಾಸಕ ರೇಣುಕಾಚಾರ್ಯ

ತಾವೇ ಸ್ವತಃ ಅಂಬುಲೆನ್ಸ್ ಚಲಾಯಿಸಿಕೊಂಡು ಹೋಗಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. ನಂತರ ಈ ಭಾವನಾತ್ಮಕ ಸನ್ನಿವೇಶವನ್ನು ಶಾಸಕರು ಅಕ್ಷರ ರೂಪದಲ್ಲಿ ಇಳಿಸಿದ್ದಾರೆ. ಇದನ್ನೂ ಓದಿ: ಕಸದ ವಾಹನ ಚಲಾಯಿಸಿದ ರೇಣುಕಾಚಾರ್ಯ

ಶಾಸಕರು ಬರೆದುಕೊಂಡಿದ್ದೇನು..?
ನನ್ನ ಜೀವನದಲ್ಲಿ ಸೋಮವಾರ ಸಂಜೆ ನನಗಾದಷ್ಟು ದುಃಖ ಎಂದೂ ಆಗಿರಲಿಲ್ಲ. ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ತಂದೆ-ತಾಯಿಗಳ ದುಃಖ ಮನಕಲಕುವಂತಿತ್ತು. ಶವಸಂಸ್ಕಾರ ಮುಗಿಸಿಬಂದ ಕೆಲವು ಗಂಟೆಗಳು ಆ ತಾಯಿ ಕರುಳ ಆಕ್ರಂದನ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಇದರಿಂದ ನನಗೆ ರಾತ್ರಿ ಪೂರ್ತಿ ಸರಿಯಾಗಿ ನಿದ್ದೆಯೂ ಬರಲಿಲ್ಲ. ರಾಜಕೀಯ, ಅಧಿಕಾರ, ಹಣ, ಅಂತಸ್ತು ಏನೇ ಇರಲಿ ವಿಧಿಯ ಮುಂದೆ ಎಲ್ಲವೂ ಶೂನ್ಯ. ಇದನ್ನೂ ಓದಿ: ರೇಣುಕಾಚಾರ್ಯ ಆಸ್ಪತ್ರೆಗೆ ಭೇಟಿ- ಕೊರೊನಾ ಸ್ಥಿತಿಗತಿ, ಸಿದ್ಧತೆ ಬಗ್ಗೆ ವೈದ್ಯರೊಂದಿಗೆ ಚರ್ಚೆ

ಹುಟ್ಟಿದ ಮೇಲೆ ಎಲ್ಲರೂ ಒಂದು ದಿನ ಸಾಯಲೇ ಬೇಕು. ಆದರೆ ಈ ರೀತಿಯ ಸಾವು-ನೋವುಗಳನ್ನು ತಡೆದುಕೊಳ್ಳುವುದು ಕಷ್ಟ. ರಾಜಕೀಯ ವಿರೋಧಿಗಳು ನನ್ನ ಬಗ್ಗೆ ಏನೇ ಟೀಕೆ ಮಾಡಲಿ, ನಾನು ಮಾತ್ರ ನನ್ನ ಅವಳಿ ತಾಲೂಕಿನ ಬಂಧುಗಳ ಕಷ್ಟದಲ್ಲಿ ಅವರ ಮನೆಮಗನಾಗಿ ಭಾಗಿಯಾಗುತ್ತೇನೆ. ಸರ್ವರಿಗೂ ಆಯುರಾರೋಗ್ಯ ನೀಡಿ ಈ ಸಂಕಷ್ಟದ ಸಮಯದಿಂದ ಪಾರುಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಇದನ್ನೂ ಓದಿ: ಪ್ರೀತಿಸಿ ಮದುವೆ ಆದ್ಮೇಲೆ ಎಲ್ಲಾ ಜಯಿಸಬೇಕು- ನವ ಜೋಡಿಗೆ ರೇಣುಕಾಚಾರ್ಯ ಕಿವಿ ಮಾತು

Share This Article
Leave a Comment

Leave a Reply

Your email address will not be published. Required fields are marked *