ಮುಂಬೈ: ಬಾಲಿವುಡ್ ನಟಿ ತಾಪ್ಸಿ ಪನ್ನು ತಮ್ಮ ಮುಂದಿನ ಚಿತ್ರ ರಶ್ಮಿ ರಾಕೆಟ್‍ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಿತ್ರೀಕರಣದ ವೇಳೆ ಗುಜರಾತ್ ರೌಂಡ್ಸ್ ಹೊಡೆಯುತ್ತಿರುವ ತಾಪ್ಸಿ ಗುಜರಾತ್ ಸುಂದರ ಸ್ಥಳದಲ್ಲಿನ ಒಂದು ವೀಡಿಯೋವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಸಿನಿಮಾ ಕುರಿತಂತೆ ಡಿಟೇಲ್ಸ್ ನೀಡುತ್ತಾ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ರಾನ್ ಆಫ್ ಕಚ್‍ನಂತಹ ಸುಂದರವಾದ ಬಯಲು ಪ್ರದೇಶಕ್ಕೆ ಹೋಗಿದ್ದ ತಾಪ್ಸಿ ಅಭಿಮಾನಿಗಳಿ ಸುಂದರವಾದ ಪ್ರದೇಶಗಳಲ್ಲಿ ಹಂತ ಹಂತವಾಗಿ ಹೇಗೆ ವೀಡಿಯೋ ಶೂಟ್ ಮಾಡಬಹುದು ಎಂದು ಸಲಹೆ ನೀಡುವ ಮೂಲಕ ಮನರಂಜನೆ ನೀಡಿದ್ದಾರೆ. ಈ ಸ್ಥಳದಲ್ಲಿ ತಾಪ್ಸಿ ಬಿಳಿ ಟಿ-ಶರ್ಟ್, ಜಾಕೆಟ್ ಮತ್ತು ಶೂಗಳನ್ನು ಧರಿಸಿದ್ದು, ವೀಡಿಯೋನಲ್ಲಿ ಜಾಕೆಟ್ ಬಿಚ್ಚಿ ನೆಲದ ಮೇಲೆ ಪುಷ್ ಆಪ್ಸ್ ಮಾಡಿದ್ದಾರೆ. ಸದಯ ಈ ವಿಡಯೋ ಇದೀಗ ಫುಲ್ ವೈರಲ್ ಆಗುತ್ತಿದೆ.
View this post on Instagram
ಜೊತೆಗೆ ರಶ್ಮಿ ರಾಕೆಟ್ ಚಿತ್ರೀಕರಣದ ಕೊನೆಯ ದಿನದ ಶೂಟಿಂಗ್ ವೇಳೆ ಗುಜರಾತಿ ಸಾಂಪ್ರದಾಯಿಕ ಉಡುಪನ್ನು ಧರಿಸಿ ಒಂಟೆ ಬಂಡಿಯ ಮೇಲೆ ತಾಪ್ಸಿ ಕುಳಿತಿರುವ ಮತ್ತೊಂದು ಫೋಟೋವನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಇನ್ನೂ ರಶ್ಮಿ ರಾಕೆಟ್ ಚಿತ್ರದಲ್ಲಿ ತಾಪ್ಸಿ ಕ್ರೀಡಾಪಟುವಾಗಿ ಅಭಿನಯಿಸುತ್ತಿದ್ದು, ತಾಪ್ಸಿ ಗಂಡನ ಪಾತ್ರದಲ್ಲಿ ಪ್ರಿಯನ್ಶು ಪೈನ್ಯುಲಿ ಅಭಿನಯಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಆಕರ್ಷ್ ಖುರಾನಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅನಿರುದ್ಧ ಗುಹಾ ಮತ್ತು ಕಾನಿಕಾ ಧಿಲ್ಲಾನ್ ಚಿತ್ರ ಕಥೆ ಬರೆದಿದ್ದು, ರೋನಿ ಸ್ಕ್ರೂವಾಲಾ ಸೇರಿದಂತೆ ನೇಹಾ ಆನಂದ್ ಮತ್ತು ಪ್ರಂಜಲ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.