ವಿಜಯ್ ಮಲ್ಯ ಒಡೆತನದ ಕಿಂಗ್‍ಫಿಷರ್ ಕಟ್ಟಡ 52 ಕೋಟಿಗೆ ಮಾರಾಟ

Public TV
2 Min Read

ಮುಂಬೈ: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯನನ್ನು ದಿವಾಳಿ ಲಂಡನ್ ಹೈಕೋರ್ಟ್ ಎಂದು ಘೋಷಿಸಿದ ದಿವಾಳಿ ಎಂದು ಘೋಷಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತವಾಗಿದೆ. ವಿಜಯ್ ಮಲ್ಯ ಒಡೆತನದ ಕಿಂಗ್‍ಫಿಷರ್ ಹೌಸ್ 52 ಕೋಟಿ ರೂ.ಗೆ ಮಾರಾಟವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೈದರಾಬಾದ್ ಮೂಲದ ಖಾಸಗಿ ಡೆವಲಪರ್ ಸತುರ್ನ್ ರಿಯಲ್ಟರ್ಸ್ 52 ಕೋಟಿ ರೂ.ಗೆ ಕೊಂಡಿದ್ದಾರೆ. ಈ ಕಟ್ಟಡ ವಿಜಯ್ ಮಲ್ಯ ಸ್ಥಾಪಿಸಿದ ಏರ್‍ಲೈನ್‍ನ ಪ್ರಧಾನ ಕಚೇರಿಯಾಗಿದೆ. ಹಲವು ವರ್ಷಗಳಿಂದ ಹರಾಜು ಪ್ರಕ್ರಿಯೆ ನಡೆದಿದ್ದರೂ ಸಾಲದಾತರು ಖರೀದಿದಾರರನ್ನು ಹುಡುಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಮೂಲ ಬೆಲೆಗೆ ಕಟ್ಟಡ ಮಾರಾಟವಾಗಿದೆ.

ರಿಯಲ್ ಎಸ್ಟೇಟ್ ಉದ್ಯಮದ ತಜ್ಞರ ಪ್ರಕಾರ, ಬ್ಯಾಂಕ್‍ಗಳು ಮೂಲತಃ ಮೀಸಲು ಬೆಲೆಯನ್ನು ಅವಾಸ್ತವಿಕವಾಗಿ ನಿಗದಿಪಡಿಸಿದ್ದರು. ಹೀಗಾಗಿ ಆಸ್ತಿಯು ಹಲವು ಮಿತಿಗಳನ್ನು ಹೊಂದಿತ್ತು. ಮುಂಬೈ ವಿಮಾನ ನಿಲ್ದಾಣದ ಹೊರವಲಯದಲ್ಲಿರುವುದರಿಂದ ಆಸ್ತಿಯನ್ನು ಹೆಚ್ಚು ಅಭಿವೃದ್ಧಿಪಡಿಸಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಕಟ್ಟಡವು ನೆಲಮಾಳಿಗೆ ಹಾಗೂ ಮೂರು ಅಂತಸ್ತಿನದ್ದಾಗಿದೆ. ಒಟ್ಟು 1,586 ಚ.ಮೀ. ಅಳತೆ ಹೊಂದಿದ್ದು, ಇದರಲ್ಲಿ 2,402 ಚ.ಮೀ. ಪ್ಲಾಟ್ ಮನೆ ಇದೆ. ಹಲವು ಬಾರಿ ಹರಾಜು ಪ್ರಕ್ರಿಯೆ ರದ್ದಾದರೂ ಇದೀಗ ಅಂತಿಮವಾಗಿ ಆಸ್ತಿ ಮಾರಾಟವಾಗಿದೆ.

ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯನನ್ನು ಇತ್ತೀಚೆಗಷ್ಟೇ ಲಂಡನ್ ಹೈಕೋರ್ಟ್ ದಿವಾಳಿ ಎಂದು ಘೋಷಿಸಿತ್ತು. ಈ ಮೂಲಕ ಭಾರತೀಯ ಬ್ಯಾಂಕ್‍ಗಳಿಗೆ ಜಯ ಸಿಕ್ಕಂತಾಗಿದೆ. ಎಸ್‍ಬಿಐ ನೇತೃತ್ವದ ಭಾರತೀಯ ಬ್ಯಾಂಕ್‍ಗಳ ಒಕ್ಕಟವು ಇದೀಗ ಸ್ಥಗಿತಗೊಂಡಿರುವ ವಿಜಯ್ ಮಲ್ಯ ಅವರ ಕಿಂಗ್‍ಫಿಶರ್ ಏರ್ ಲೈನ್ಸ್ ಗೆ ನೀಡಿದ ಸಾಲವನ್ನು ವಸೂಲಿ ಮಾಡಲು ಈ ತೀರ್ಪು ಸಹಾಯವಾಗಿದೆ. ಮಲ್ಯ ಅವರು ಹೈ ಕೋರ್ಟ್ ತೀರ್ಪಿನ ಮೇಲ್ಮನವಿ ಸಲ್ಲಿಸಲು ಪ್ರಯತ್ನಿಸಿದ್ದರು ಆದರೆ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿತ್ತು.

ಮೇ ತಿಂಗಳಲ್ಲಿ ಯುಕೆ ಕೋರ್ಟ್ ಎಸ್‍ಬಿಐ ನೇತೃತ್ವದ ಸಾಲದಾತ ಒಕ್ಕೂಟದ ದಿವಾಳಿತನದ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದಿತ್ತು. ಭಾರತದಲ್ಲಿ ಮಲ್ಯ ಅವರ ಆಸ್ತಿಗಳ ಮೇಲಿನ ಭದ್ರತೆಯನ್ನು ಮನ್ನಾ ಮಾಡುವ ಪರವಾಗಿ ಅರ್ಜಿಯನ್ನು ಎತ್ತಿಹಿಡಿದಿತ್ತು.

ಭದ್ರತಾ ಹಕ್ಕುಗಳನ್ನು ಮನ್ನಾ ಮಾಡುವುದನ್ನು ತಡೆಯುವಂತೆ ಮಲ್ಯ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಈ ಮನವಿಯಲ್ಲಿ ಯಾವುದೇ ಸಾರ್ವಜನಿಕ ನೀತಿ ಇಲ್ಲ ಎಂದು ಘೋಷಿಸಿ ಬ್ಯಾಂಕ್‍ಗಳ ಪರವಾಗಿ ಚೀಫ್ ಇನ್ಸೋಲ್ವೆನ್ಸೀಸ್ ಆ್ಯಂಡ್ ಕಂಪನೀಸ್ ಕೋರ್ಟ್ (ಐಸಿಸಿ) ಜಡ್ಜ್ ಮೈಕೆಲ್ ಬ್ರಿಗ್ಸ್ ಆದೇಶ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *