ವಿಎಚ್‍ಪಿ, ಭಜರಂಗದಳದಿಂದ ವನವಾಸಿಗಳ ಹಾಡಿಗಳಲ್ಲಿ ಸೇವೆ- ಅಗತ್ಯ ವಸ್ತುಗಳ ಪೂರೈಕೆ

Public TV
1 Min Read

ಮೈಸೂರು: ಗ್ರಾಮಾಂತರ ಜಿಲ್ಲೆಯ ಎಚ್‍ಡಿ ಕೋಟೆ ತಾಲೂಕಿನ ಹುಸ್ಕೂರ್ ಹಾಡಿ, ದಡದಲ್ಲಿ ಹಾಡಿ, ಕಾಂತನ ಹಾಡಿ ಮತ್ತು ಕೆಬ್ಬೆಪುರ ವನವಾಸಿಗಳ ಹಾಡಿಗಳಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಸೇವಾಕಾರ್ಯ ನಡೆಸಲಾಯಿತು. ಹಾಡಿಯ ಜನರಿಗೆ ಬಟ್ಟೆ, ಗೋಧಿ ಹಿಟ್ಟು, ಬೆಡ್ ಶೀಟ್, ಮಕ್ಕಳ ಆಟದ ವಸ್ತುಗಳು, ಸೀರೆ, ಪಂಚೆ, ಟಿ-ಶರ್ಟ್ ಸೇರಿದಂತೆ ವಿವಿಧ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಅಲ್ಲದೆ ಧರ್ಮದ ಬಗ್ಗೆ ಹಾಡಿಯ ಬಂಧುಗಳಿಗೆ ಜಾಗೃತಿ ಮೂಡಿಸಲಾಹಿತು.

ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದಿಂದ ವನವಾಸಿಗಳ ವಿವಿಧ ಹಾಡಿಗಳಲ್ಲಿ ಸೇವೆಕಾರ್ಯ.

ದಿನಾಂಕ 31 ರಂದು ಮೈಸೂರು ಗ್ರಾಮಾಂತರ ಜಿಲ್ಲೆಯ ಎಚ್…

Posted by Vishwa Hindu Parishad – Karnataka ,ವಿಶ್ವ ಹಿಂದು ಪರಿಷದ್ – ಕರ್ನಾಟಕ on Friday, April 2, 2021

ಜಿಲ್ಲೆಯ ಸರಗೂರು ಎಚ್‍ಡಿ ಕೋಟೆ ತಾಲೂಕುಗಳ ಬಂಡಿಪುರ ಮತ್ತು ನಾಗರಹೋಳೆ ಅಭಾರಣ್ಯಗಳ ಸುತ್ತಲಿರುವ ಬುಡಕಟ್ಟಿಗೆ ಸೇರಿದ ಮುಗ್ದ ಜನರಿಗೆ ಆಮಿಷಗಳನ್ನು ಒಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿರುತ್ತಾರೆ. ಸುಮಾರು 125 ಹಾಡಿಗಳಿದ್ದು, ಇವುಗಳಲ್ಲಿ ಶೇ.50ರಷ್ಟು ಜನಾಂಗವನ್ನು ಮತಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಹೆಚ್‍ಪಿ ಮತ್ತು ಭಜರಂಗದಳದ ವತಿಯಿಂದ ಸಾಕಷ್ಟು ಕಾರ್ಯಕರ್ತರು ಇದರ ವಿರುದ್ಧ ತಿರುಗಿ ಬಿದ್ದಿದ್ದು, ಮರಳಿ ಹಿಂದೂ ಧರ್ಮಕ್ಕೆ ಕರೆತರುವ ಸತತ ಪ್ರಯತ್ನ ನಡೆಯುತ್ತಿದೆ. ಹಾಡಿ ಜನಾಂಗಕ್ಕೆ ಅವಶ್ಯಕತೆ ಇರುವ ಸಾಕಷ್ಟು ಸಾಮಗ್ರಿಗಳನ್ನು ದಾನಿಗಳಿಂದ ಪಡೆದು ಅವರಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಭಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಾಂತ ಸಹ ಖಜಾಂಚಿ ದೀಪಕ್ ರಾಜಗೋಪಾಲ್ ಮತ್ತು ವಿಎಚ್‍ಪಿ ಗ್ರಾಮಾಂತರ ಜಿಲ್ಲಾ ಸ್ಥಳೀಯ ಕಾರ್ಯಕರ್ತರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *