ವಾಂಖೆಡೆ ಮೈದಾನದ ಸಿಬ್ಬಂದಿ, ಅಕ್ಷರ್ ಪಟೇಲ್‍ಗೆ ಕೊರೊನಾ ಪಾಸಿಟಿವ್

Public TV
1 Min Read

– ಐಪಿಎಲ್ ಪಂದ್ಯಗಳ ಕುರಿತು ಭಾರೀ ಚರ್ಚೆ

ಮುಂಬೈ: ಇನ್ನೇನೂ ಕೆಲವೇ ದಿನಗಳಲ್ಲಿ ಕ್ರಿಕೆಟ್ ರಸದೌತಣ ನೀಡುವ ಐಪಿಎಲ್ ಪ್ರಾರಂಭವಾಗುತ್ತಿದೆ. ಆದರೆ ಇದೀಗ ಪ್ರಾರಂಭಕ್ಕೂ ಮೊದಲೇ ಪಂದ್ಯಾಟ ನಡೆಯುವ ಮೈದಾನದ ಸಿಬ್ಬಂದಿಗೆ ಮತ್ತು ಡೆಲ್ಲಿ ತಂಡದ ಆಟಗಾರ ಅಕ್ಷರ್ ಪಟೇಲ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಹಾಗಾಗಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯಾಟಗಳು ನಡೆಯುವುದು ಅನುಮಾನವಾಗಿದೆ.

ವಾಂಖೆಡೆ ಮೈದಾನದ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಒಬ್ಬರಲ್ಲಿ ಕೊರೊನಾ ದೃಢಪಟ್ಟಿದೆ. ಇದರಿಂದಾಗಿ ಇದೀಗ ಉಳಿದ ಸಿಬ್ಬಂದಿಗಳಲ್ಲಿ ಭಯದ ವಾತಾವರಣ ಮೂಡಿದೆ. ವಾಂಖೆಡೆ ಮೈದಾನದಲ್ಲಿ ಎಪ್ರಿಲ್ 10 ರಿಂದ ಐಪಿಎಲ್ ಪಂದ್ಯಾಟಗಳು ಆರಂಭಗೊಳ್ಳಲಿದೆ ಆದರೆ ಇದೀಗ ಅಲ್ಲಿನ ಮೈದಾನದ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿರುವುದರಿಂದಾಗಿ ಪಂದ್ಯಾಟಗಳು ನಡೆಸಲು ಆ ಮೈದಾನ ಎಷ್ಟು ಸುರಕ್ಷಿತಾ ಎಂದು ಕ್ರಿಕೆಟ್ ಪ್ರಿಯರು ಪ್ರಶ್ನೆ ಎತ್ತಿದ್ದಾರೆ.

ಡೆಲ್ಲಿ ತಂಡದ ಆಟಗಾರ ಅಕ್ಷರ್ ಪಟೇಲ್ ಅವರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಪಟೇಲ್ ಡೆಲ್ಲಿ ತಂಡದೊಂದಿಗೆ ಮುಂಬೈನ ಹೊಟೇಲ್ ಒಂದರಲ್ಲಿ ತಂಗಿದ್ದರು ಇದೀಗ ಅವರನ್ನು ಹೊಟೇಲ್‍ನಲ್ಲೇ ಐಸೋಲೇಶನ್‍ಗೆ ಒಳಪಡಿಸಲಾಗಿದೆ.

ವಾಂಖೆಡೆಯಲ್ಲಿ 14ನೇ ಆವೃತ್ತಿಯ ಒಟ್ಟು 10 ಪಂದ್ಯಗಳು ಈಗಾಗಲೇ ನಿಗದಿಯಾಗಿದ್ದು ಮೊದಲ ಪಂದ್ಯ ಎಪ್ರಿಲ್ 10 ರಂದು ಚೆನ್ನೈ ಮತ್ತು ಡೆಲ್ಲಿ ನಡುವೆ ನಡೆಯಲಿದೆ. ಆದರೆ ಇದೀಗ ಐಪಿಎಲ್ ಪ್ರಾರಂಭಕ್ಕೂ ಮೊದಲೇ ವಿಘ್ನ ಪ್ರಾರಂಭವಾಗಿದೆ.

ಕಳೆದ ಬಾರಿಯು ಕೊರೊನಾ ಕಾರಣದಿಂದಾಗಿ ಟೂರ್ನಿಯನ್ನು ಯುಎಇ ಯಲ್ಲಿ ನಡೆಸಲಾಗಿತ್ತು. ಆದರೆ ಈ ಬಾರಿ ಭಾರತದಲ್ಲೇ ನಡೆಸಲು ಬಿಸಿಸಿಐ ತೀರ್ಮಾನಿಸಿ ಐಪಿಎಲ್ ಪಂದ್ಯಾಟಗಳಿಗಾಗಿ ಈಗಾಗಲೇ 6 ನಗರಗಳನ್ನು ಗೊತ್ತುಪಡಿಸಿತ್ತು, ಅದರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣ ಕೂಡ ಒಂದಾಗಿತ್ತು.

ಈ ಬಾರಿಯ ಐಪಿಎಲ್ ಎಪ್ರಿಲ್ 9 ರಂದು ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಮುಂಬೈ ಹಾಗೂ ಬೆಂಗಳೂರು ತಂಡಗಳು ಸೆಣಸಾಡಲಿವೆ. 14 ನೇ ಆವೃತ್ತಿಯ ಐಪಿಎಲ್ ಪಂದ್ಯಾಟಗಳು ಏಪ್ರಿಲ್ 9 ರಿಂದ ಮೇ 30ರ ವರೆಗೆ ಬೆಂಗಳೂರು, ಚೆನ್ನೈ, ದೆಹಲಿ, ಅಹಮದಾಬಾದ್ ಸೇರಿದಂತೆ 6 ನಗರಗಳಲ್ಲಿ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *