‘ವಧು ಬೇಕಾಗಿದ್ದಾಳೆ’ ಎಂದು ಫ್ಲೆಕ್ಸ್ ಹಾಕಿದ..!

Public TV
2 Min Read

– ಕೇರಳ ಯುವಕನಿಂದ ಮದುವೆಗಾಗಿ ಪ್ಲ್ಯಾನ್

ಕೊಟ್ಟಾಯಂ: ಎಷ್ಟೇ ಪ್ರಯತ್ನ ಮಾಡಿದರೂ ಮದುವೆಯಾಗಿಲ್ಲ ಎಂದು ಬೇಸತ್ತ ಯುವಕನೊಬ್ಬ ಈಗ ಮದುವೆಯಾಗಲು ವಿಶೇಷ ಪ್ಲ್ಯಾನ್ ರೂಪಿಸಿದ್ದಾನೆ. ಇಂದು ಅಂತಿಂಥಾ ಪ್ಲ್ಯಾನ್ ಅಲ್ಲ, ಸೂಪರ್ ಪ್ಲ್ಯಾನ್. ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ವಧು ಬೇಕಾಗಿದ್ದಾಳೆ, ವರ ಬೇಕಾಗಿದ್ದಾನೆ ಎಂಬ ಜಾಹೀರಾತು ನೋಡಿರುತ್ತೀರಿ. ಆದರೆ ತಂತ್ರಜ್ಞಾನ ಬದಲಾದಂತೆ ಪ್ಲ್ಯಾನ್ ಬದಲಾಯಿತು. ಆಮೇಲೆ ಮ್ಯಾಟ್ರಿಮೊನಿ ಯುಗ ಆರಂಭವಾಯಿತು. ಹಲವರಿಗೆ ಇದರಲ್ಲಿ ಕಂಕಣ ಕೂಡಿ ಬಂದರೆ ಇನ್ನು ಕೆಲವರಿಗೆ ಮೋಸವೂ ಆಯಿತು. ಆದರೆ ಈಗ ಆಗಿರೋದು ಅದ್ಯಾವುದೂ ಅಲ್ಲ.

ಏನೆಲ್ಲಾ ಸರ್ಕಸ್ ಮಾಡಿದರೂ ತನಗೆ ಮದುವೆಯಾಗಿಲ್ಲ ಎಂದ ಯುವಕ ವಧು ಬೇಕಾಗಿದ್ದಾಳೆ ಎಂಬ ಫ್ಲೆಕ್ಸ್ ಹಾಕಿ ಅಚ್ಚರಿ ಮೂಡಿಸಿದ್ದಾನೆ. ಈ ಘಟನೆ ನಡೆದಿರೋದು ಕೇರಳದ ಕೊಟ್ಟಾಯಂ ಜಿಲ್ಲೆಯ ಕಾಣಕಾರಿ ಎಂಬಲ್ಲಿ. ಈತನ ಹೆಸರು ಅನೀಶ್ ಸೆಬಾಸ್ಟಿಯನ್. ತನ್ನದೇ ಮಾಲೀಕತ್ವದ ಮರದ ಮಿಲ್‍ನ ಹೊರಗಡೆ ಫ್ಲೆಕ್ಸ್ ಹಾಕಿ ವಧು ಬೇಕಾಗಿದ್ದಾಳೆ ಎಂದು ಹಾಕಿದ್ದಾನೆ.

ಫ್ಲೆಕ್ಸ್ ನಲ್ಲೇನಿದೆ?: ವಧು ಹುಡುಕುತ್ತಿದ್ದೇನೆ. ಯಾವುದೇ ಬೇಡಿಕೆಗಳಿಲ್ಲದ, ನಮ್ಮ ಸಂಸ್ಕೃತಿಯ ಜೊತೆಗೂಡಿ ಸಾಗುವಂತಹ, ಪ್ರೀತಿಯೇ ಮುಖ್ಯ ಎಂಬ ಯೋಚನೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ವಧು ಬೇಕಾಗಿದ್ದಾಳೆ. ಮದುವೆಯಾಗಲು ನಡೆಸಿದ ಎಲ್ಲ ಪ್ರಯತ್ನಗಳೂ ಕೈಕೊಟ್ಟ ಮೇಲೆ ಅನೀಶ್ ಈ ಪ್ಲ್ಯಾನ್ ಮಾಡಿರೋದು. ಅಂದ ಹಾಗೆ ಮನೀಶ್‍ಗೀಗ 35 ವಯಸ್ಸು.

 

ಹಲವಾರು ಕಾರಣಗಳಿಂದಾಗಿ ನನಗೆ ಮದುವೆಯಾಗಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಮದುವೆಯಾಗೋಣ ಎಂದು ಸಿದ್ಧವಾದಾಗ ಹುಡುಗಿ ಸಿಗುತ್ತಿಲ್ಲ. ಹಲವು ವಿಧದಲ್ಲಿ ಹುಡುಕಿದರೂ ಯಾವುದೇ ಹುಡುಗಿ ಸೆಟ್ ಆಗಲಿಲ್ಲ. ಹೀಗೆ ಯೋಚನೆ ಮಾಡ್ತಿರುವಾಗ ಹೊಳೆದಿದ್ದೇ ಈ ಫ್ಲೆಕ್ಸ್ ಪ್ಲ್ಯಾನ್ ಎನ್ನುತ್ತಿದ್ದಾನೆ ಅನೀಶ್. ಆಮೇಲೆ ಇದಕ್ಕಾಗಿಯೇ ಫೋಟೋ ತೆಗೆಸಿ, ಡಿಸೈನ್ ಮಾಡಿಸಿ, ಅದರಲ್ಲೇ ವಾಟ್ಸಪ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಫ್ಲೆಕ್ಸ್ ಹಾಕಿಸಿದೆ. ಯಾವಾಗ ಈ ಫ್ಲೆಕ್ಸ್ ಬಂತೋ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಯಿತು. ಇದರ ಫಲವಾಗಿ ಕೆಲವರು ಮದುವೆಯಾಗಲು ಮುಂದೆ ಬಂದರು. ವಿದೇಶದಿಂದ ಸಂಪರ್ಕಕ್ಕೆ ಕೆಲವರು ಬಂದರೂ ಅದ್ಯಾವುದೂ ನನಗೆ ನೈಜ ಅನ್ನಿಸಲಿಲ್ಲ. ಜೀವನಪೂರ್ತಿ ಬಾಳಿ ಬದುಕಬೇಕಾದವರನ್ನು ಹುಡುಕುತ್ತಿರೋದಲ್ವಾ. ಈಗ ಕೋವಿಡ್ ಸಮಸ್ಯೆ ಬೇರೆ ಇದೆ. ಏನೇ ಆದ್ರೂ ಎಲ್ಲಾ ಶೀಘ್ರದಲ್ಲೇ ಸರಿಹೋಗಿ ಮದುವೆಯಾಗಬಹುದು ಎಂದು ಕಾಯುತ್ತಿದ್ದಾನೆ ಅನೀಶ್ ಸೆಬಾಸ್ಟಿಯನ್.

Share This Article
Leave a Comment

Leave a Reply

Your email address will not be published. Required fields are marked *