ಲೌಕ್‍ಡೌನ್ ವೇಳೆ ಆಂಟಿ ಮನೆಯಲ್ಲಿ ಲಾಕ್- ಹುಡ್ಗಿ ಮೇಲೆ ಅಂಕಲ್ ರೇಪ್

Public TV
1 Min Read

– 2 ತಿಂಗಳು ಅತ್ಯಾಚಾರಗೈದ ಕಾಮುಕ
– ವೀಡಿಯೋ ಮಾಡಿ ಬೆದರಿಕೆ

ಮುಂಬೈ: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶದಲ್ಲಿಯೇ ಲಾಕ್‍ಡೌನ್ ಹೇರಲಾಗಿತ್ತು. ಈ ಸಂದರ್ಭದಲ್ಲಿ ತನ್ನ ಆಂಟಿ ಮನೆಯಲ್ಲಿ ಹೋಗಿ ಸಿಲುಕಿಕೊಂಡ 17 ವರ್ಷದ ಹುಡುಗಿಯ ಮೇಲೆ ಆಕೆಯ ಅಂಕಲ್ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ.

ಲಾಕ್‍ಡೌನ್ ಮುಖ್ತವಾದ ಬಳಿಕ ಅವಳು ತನ್ನ ಮನೆಗೆ ತೆರಳಿದ ವೇಳೆ ಅಂಕಲ್ ಕಥೆ ಬಯಲಾಗಿದೆ. ಆರೋಪಿ ಅಂಕಲ್ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಆತನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಧುಲೆ ನಿವಾಸಿಯಾಗಿರುವ ಹುಡುಗಿ, ಲಾಕ್‍ಡೌನ್ ಸಮಯದಲ್ಲಿ ಪ್ಯಾರೆಲ್‍ನಲ್ಲಿರುವ ತನ್ನ ಚಿಕ್ಕಮ್ಮನ ಸ್ಥಳಕ್ಕೆ ಬಂದಿದ್ದಾಳೆ. ಇದೇ ಸಮಯವನ್ನು ಹುಡುಗಿಯ ಚಿಕ್ಕಪ್ಪನಾಗಿರುವ ಆರೋಪಿ ಸದುಪಯೋಗಪಡಿಸಿಕೊಂಡಿದ್ದಾನೆ. ಕುಟುಂಬದ ಇತರ ಸದಸ್ಯರು ಮನೆಯಿಂದ ಹೊರಗೆ ಹೋದಾಗಲೆಲ್ಲಾ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಹುಡುಗಿ ಹೇಳಿಕೊಂಡಿದ್ದಾಳೆ. ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳ ನಡುವೆ ಆರೋಪಿ ಹುಡುಗಿಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

ಇತ್ತೀಚೆಗೆ ಹುಡುಗಿ ತನ್ನ ಮನೆಗೆ ಮರಳಿದ್ದಳು. ಈ ವೇಳೆ ಅವಳು ಹೊಟ್ಟೆನೋವಿನಿಂದ ಬಳಲಿದ್ದಳು. ಹೀಗಾಗಿ ಪೋಷಕರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆಯ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬಯಲಾಗಿದೆ. ಇತ್ತ ಆಸ್ಪತ್ರೆಯ ಸಿಬ್ಬಂದಿ ಕೂಡಲೇ ಧುಲೇನಲ್ಲಿರುವ ಸ್ಥಳೀಯ ಪೊಲೀಸರನ್ನು ಎಚ್ಚರಿಸಿದ್ದು, ಅಂಕಲ್ ವಿರುದ್ಧ ಶೂನ್ಯ ಎಫ್‍ಐಆರ್ ದಾಖಲಿಸಿ ಭೋವಾಡಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

ಅಂಕಲ್ ತನ್ನ ಮೇಲೆ ಮೊದಲ ಬಾರಿಗೆ ಅತ್ಯಾಚಾರ ನಡೆಸಿದ್ದ ವೇಳೆ ಅದರ ವೀಡಿಯೋ ಮಾಡಿದ್ದಾನೆ. ಅಲ್ಲದೆ ಈ ವಿಚಾರ ಯಾರಿಗಾದರೂ ಹೇಳಿದರೆ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರ ಬಳಿ ಹೇಳಿದ್ದಾಳೆ. ಆಕೆಯ ಹೇಳಿಕೆಯ ಸಂಬಂಧ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *