ಲಾಕ್ ವಿಸ್ತರಣೆಯಾದ ಜಿಲ್ಲೆಗಳಲ್ಲಿ ಕಂಟ್ರೋಲ್‍ಗೆ ಬಾರದ ಪಾಸಿಟಿವಿಟಿ ರೇಟ್

Public TV
1 Min Read

– 8 ಜಿಲ್ಲೆಗಳಲ್ಲಿ ಶೇ.10ಕ್ಕೂ ಹೆಚ್ಚು ಪಾಸಿಟಿವಿಟಿ ರೇಟ್

ಬೆಂಗಳೂರು: ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಕೊರೊನಾ ಕಂಟ್ರೋಲ್ ಗೆ ಬಂದಿದೆ. ಹೀಗಾಗಿ ಸರ್ಕಾರ ರಾಜ್ಯದ 19 ಜಿಲ್ಲೆಗಳನ್ನು ಅನ್‍ಲಾಕ್ ಮಾಡಿ ಕೆಲವು ಚಟುವಟಿಕೆಗಳಿಗೆ ಅವಕಾಶ ಕೊಟ್ಟಿದೆ. ಉಳಿದ 11 ಜಿಲ್ಲೆಗಳಲ್ಲಿ ಲಾಕ್‍ಡೌನ್ ವಿಸ್ತರಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಇನ್ನೂ ಕಡಿಮೆಯಾಗುತ್ತಿಲ್ಲ. ಹೀಗಾಗಿ ಜನರಲ್ಲಿ ಆತಂಕ ಮನೆ ಮಾಡಿದೆ.

ಲಾಕ್‍ಡೌನ್ ವಿಸ್ತರಣೆ ಮಾಡಿ ಪಾಸಿಟಿವಿಟಿ ರೇಟ್ ಕಂಟ್ರೋಲ್‍ಗೆ ಬರುವ ರೀತಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಡಳಿತಗಳಿಗೆ ಸರ್ಕಾರ ಖಡಕ್ ಆದೇಶ ನೀಡಿತ್ತು. ಆದರೆ 11 ರಲ್ಲಿ 8 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಶೇ.10ಕ್ಕಿಂತ ಹೆಚ್ಚಿದೆ. ನಿಯಂತ್ರಣಕ್ಕೆ ತರಲು ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಂಡ್ಯ, ಮಂಗಳೂರು, ಮೈಸೂರು, ಮಡಿಕೇರಿ, ಬೆಳಗಾವಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ದಾವಣಗೆರೆಯಲ್ಲಿ ಲಾಕ್‍ಡೌನ್ ವಿಸ್ತರಣೆ ಮಾಡಲಾಗಿದೆ. ಕಳೆದ ಒಂದು ವಾರದಿಂದಲೂ ಪಾಸಿಟಿವಿಟಿ ರೇಟ್ ಶೇ.10ರ ಒಳಗಡೆಗೆ ಬರುತ್ತಿಲ್ಲ. ಹೀಗಾಗಿ ಜನ ಆತಂಕಕ್ಕೊಳಗಗಿದ್ದಾರೆ. ಅದರಲ್ಲೂ ಬೆಂಗಳೂರಿಗೆ ಸನಿಹದಲ್ಲಿರುವ ಜಿಲ್ಲೆಗಳಲ್ಲಿ ಕೊರೊನಾ ಕಂಟ್ರೋಲ್‍ಗೆ ಬರುತ್ತಿಲ್ಲ. ಇದನ್ನೂ ಓದಿ: ವಿಷ ಕುಡಿತೀನಿ, ಕೋವಿಡ್ ಕೇರ್ ಸೆಂಟರ್‌ಗೆ ಮಾತ್ರ ಬರಲ್ಲ- ಸೋಂಕಿತನ ರಾದ್ಧಾಂತ

ಪಾಸಿಟಿವಿಟಿ ರೇಟ್ ಶೇ.10ರ ಒಳಗೆ ಬಾರದ ಹಿನ್ನೆಲೆ ಈ ಎಂಟು ಜಿಲ್ಲೆಗಳು ಅನ್‍ಲಾಕ್ ಆಗೋದು ಡೌಟ್ ಅನ್ನಿಸುತ್ತಿದೆ. ಪಾಸಿಟಿವಿಟಿ ರೇಟ್ ಕಂಟ್ರೋಲ್ ಗೆ ಬಾರದ 8 ಜಿಲ್ಲೆಗಳು ಯಾವು? ಎಷ್ಟು ಪಾಸಿಟಿವಿಟಿ ರೇಟ್ ಇದೆ? ಇಲ್ಲಿದೆ ಮಾಹಿತಿ.

ಚಿಕ್ಕಮಗಳೂರು- ಶೇ.15.64

ಮೈಸೂರು- ಶೇ.15.09

ದಕ್ಷಿಣ ಕನ್ನಡ- ಶೇ.13.52

ಹಾಸನ- ಶೇ.12.06

ಚಾಮರಾಜನಗರ- ಶೇ.11.60

ದಾವಣಗೆರೆ- ಶೇ.13.10

ಬೆಂಗಳೂರು ಗ್ರಾಮಾಂತರ- ಶೇ.11.60

ಕೊಡಗು- ಶೇ.10.63

Share This Article
Leave a Comment

Leave a Reply

Your email address will not be published. Required fields are marked *