ಲಾಕ್‍ಡೌನ್ ಸಮಯವನ್ನು ಸದ್ಭಳಕೆ ಮಾಡ್ಕೊಂಡು ಮಾದರಿಯಾದ ಅಕ್ಕ-ತಮ್ಮ

Public TV
1 Min Read

ತಿರುವನಂತಪುರಂ: ಶಾಲೆಗೆ ರಜೆ ಸಿಕ್ಕರೆ ಸಾಕು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಅದರಲ್ಲೂ ಈ ಬಾರಿಯಂತೂ ಮಹಾಮಾರಿ ಕೊರೊನಾದಿಂದಾಗಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿತ್ತು. ಇದು ಮಕ್ಕಳಲ್ಲಿ ಮತ್ತಷ್ಟು ಖುಷಿ ನೀಡಿತ್ತು. ಆದರೆ ಕೇರಳದ ಸಹೋದರ ಹಾಗೂ ಸಹೋದರಿ ಈ ಸಮಯವನ್ನು ಸದ್ಭಳಕೆ ಮಾಡಿಕೊಂಡು ಮಾದರಿಯಾಗಿದ್ದಾರೆ.

ಹೌದು. ಆಶಿನ್ ಹಾಗೂ ಅಖಿನಾ ಅಚಾನಕ್ ಆಗಿ ಸಿಕ್ಕಿದ್ದ ರಜೆಯನ್ನು ಸ್ವಲ್ಪ ವಿಭಿನ್ನವಾಗಿ ಕಳೆದಿದ್ದಾರೆ. ಅಖಿನಾ ಕಸದಿಂದ ರಸ ಎಂಬ ಗಾದೆ ಮಾತಿನಂತೆ ನಿರುಪಯುಕ್ತ ವಸ್ತುಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸಿದ್ದಾಳೆ. ಇತ್ತ ಅಶಿನ್ ಬಂಜರು ಭೂಮಿಯನ್ನು ಅಗೆದು ತರಕಾರಿ ತೋಟವನ್ನಾಗಿ ಮಾಡಿದ್ದಾನೆ.

ಅಖಿನಾ 9ನೇ ತರಗತಿ ಹಾಗೂ ಅಶಿನ್ 7ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇವರಿಬ್ಬರು ಕುರುಂಬ ಭಗವತಿ ದೇವಸ್ಥಾನದ ಅರ್ಚಕ ತ್ರಿಜಕನಾಥನ್ ಮತ್ತು ಪ್ರೀತಾ ದಂಪತಿಯ ಮಕ್ಕಳು.

ಅಶಿನ್ ತನ್ನ ತರಕಾರಿ ತೋಟದಲ್ಲಿ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುತ್ತಾನೆ. ಈತ ಉದ್ದನೆಯ ಬೀನ್ಸ್, ಕಹಿ ಸೋರೆಕಾಯಿ, ಒಕ್ರಾ, ಬದನೆಕಾಯಿ, ಹಸಿ ಮೆಣಸಿನಕಾಯಿ ಮತ್ತು ಹೂಕೋಸುಗಳನ್ನು ಬೆಳೆಸಿದ್ದಾನೆ. ಅಲ್ಲದೆ ಇದರಿಂದ ಕುಟುಂಬ ಅದ್ಭುತ ಇಳುವರಿಯನ್ನು ಪಡೆದಿದೆ. ಅಶಿನ್ ದಿನಕ್ಕೆ ಎರಡು ಬಾರಿ ತರಕಾರಿ ತೋಟಕ್ಕೆ ನೀರು ಹಾಕುತ್ತಾನೆ. ಕೊಯ್ಲು ಮಾಡಿದ ಉತ್ಪನ್ನಗಳ ಪಾಲನ್ನು ಅವರ ಸಂಬಂಧಿಕರು ಮತ್ತು ನೆರೆಹೊರೆಯವರಿಗೆ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *