ಲಾಕ್‍ಡೌನ್ ಮೊದಲ ದಿನ – ನಗರದ ಬಹುತೇಕ ರಸ್ತೆಗಳು ಖಾಲಿ ಖಾಲಿ

Public TV
1 Min Read

ಬೆಂಗಳೂರು: ಲಾಕ್‍ಡೌನ್‍ನ ಮೊದಲ ದಿನ ನವಯುಗ ಟೋಲ್, ಮಲ್ಲೇಶ್ವರಂ, ಮೆಜೆಸ್ಟಿಕ್ ಸೇರಿದಂತೆ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‍ನಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಎಂಟ್ರಿ ಮತ್ತು ಎಕ್ಸಿಟ್‍ಗಳನ್ನ ಬ್ಯಾರಿಕೇಡ್‍ಗಳನ್ನ ಹಾಕಿ ಮುಚ್ಚಲಾಗಿದೆ. ಯಾವುದೇ ಬಸ್‍ಗಳ ಓಡಾಟವಿಲ್ಲ. ಇಡೀ ಮೆಜೆಸ್ಟಿಕ್ ಸುತ್ತಮುತ್ತ ಪೊಲೀಸರು ರಸ್ತೆಯನ್ನು ಬಂದ್ ಮಾಡಿದ್ದಾರೆ. ಅಲ್ಲದೇ ಮೆಜೆಸ್ಟಿಕ್ ನಿಲ್ದಾಣದ ಅಂಗಡಿ ಮುಂಗಟ್ಟು ಸಹ ಸಂಪೂರ್ಣ ಬಂದ್ ಆಗಿವೆ. ಹೋಟೆಲ್, ಟೀ ಅಂಗಡಿಗಳು ಓಪನ್ ಇಲ್ಲ.

ಪ್ರತಿ ನಿತ್ಯ ಇಷ್ಟೊತ್ತಿಗಾಗಲೇ ಗಿಜಿಗುಡುತ್ತಿದ್ದ ಮೆಜೆಸ್ಟಿಕ್ ಈಗ ಪ್ರಯಾಣಿಕರಿಲ್ಲದೇ ಖಾಲಿ ಖಾಲಿ ಆಗಿದೆ. ಕೇವಲ ತುರ್ತು ಸೇವೆಗಷ್ಟೇ ಬಿಎಂಟಿಸಿ ಬಸ್ ಲಭ್ಯವಿರುತ್ತದೆ. ಎರ್ಮೆಜೆನ್ಸಿ ಬಸ್‍ಗಳು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಓಡಾಡುತ್ತವೆ. ಕೆಲವರು ಬಸ್ ಇಲ್ಲದ ಕಾರಣ ನಡೆದುಕೊಂಡೇ ಹೋಗುತ್ತಿದ್ದಾರೆ.

ಕಳೆದ ದಿನದವರೆಗೂ ತುಂಬಾ ಟ್ರಾಫಿಕ್ ಇದ್ದ ನೆಲಮಂಗಲ ನವಯುಗ ಟೋಲ್ ಈಗ ಫುಲ್ ಖಾಲಿಯಾಗಿದೆ. ಕೊರೊನಾಗೆ ಹೆದರಿ ಊರು ಬಿಡುತ್ತಿದ್ದವರಿಂದ ಫುಲ್ ಟ್ರಾಫಿಕ್ ಉಂಟಾಗಿತ್ತು. ಆದರೆ ಲಾಕ್‍ಡೌನ್ ಹಿನ್ನೆಲೆ ಪೂರ್ತಿ ಖಾಲಿ ಖಾಲಿಯಾಗಿದೆ. ಸರಕು ಸಾಗಣೆ ವಾಹನಗಳು ಎಂದಿನಂತೆ ಓಡಾಡುತ್ತಿವೆ. ಜೊತೆಗೆ ತೀರ ವಿರಳವಾಗಿ ದ್ವಿಚಕ್ರ ವಾಹನಗಳು ಕಾಣಿಸಿಕೊಳ್ಳುತ್ತಿವೆ.

ನೆಲಮಂಗಲ ಬಳಿಯ ತುಮಕೂರು ಹಾಗೂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್ ವಾಹನಗಳು ಮಾತ್ರ ಸಂಚಾರ ಮಾಡುತ್ತಿದ್ದಾವೆ. ಕೇವಲ ಬೆರಳೆಣಿಕೆಯಷ್ಟು ಜನರರು ಖಾಸಗಿ ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ನೆಲಮಂಗಲ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ನಗರ ಪ್ರವೇಶಕ್ಕೆ ನಿರ್ಬಂಧ ಮಾಡಿದ್ದಾರೆ.

ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ಹಾಲು, ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೂ ರಸ್ತೆಗಳು ಖಾಲಿ ಖಾಲಿಯಾಗಿವೆ. ಅಗತ್ಯ ವಸ್ತುಗಳ ಖರೀದಿಗಷ್ಟೇ ಜನರ ಓಡಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *