ಲಾಕ್‍ಡೌನ್ ಮುಗಿಯಲು ಮೂರೇ ದಿನ ಬಾಕಿ- ಜೂನ್ 1ರಿಂದ ಏನಿರಬಹುದು? ಏನಿರಲ್ಲ?

Public TV
2 Min Read

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮಾಡಲಾಗಿದ್ದ ಲಾಕ್‍ಡೌನ್ 4.0 ಮುಗಿಯಲು ಇನ್ನೂ ಮೂರು ದಿನ ಮಾತ್ರ ಬಾಕಿ ಇದೆ. ಹೀಗಾಗಿ ಜೂನ್ 1 ರಿಂದ ಹೊಸ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆಯಾಗುವ ಸಾಧ್ಯತೆ ಇದೆ.

ಈಗಾಗಲೇ ಎಲ್ಲ ರಾಜ್ಯಗಳ ಸಿಎಂಗಳ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆ ನಡೆಸುತ್ತಿದ್ದು, ಲಾಕ್‍ಡೌನ್ ಸ್ವರೂಪದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಲಾಕ್‍ಡೌನ್ ರಿಲೀಫ್ ಬಗ್ಗೆ ರಾಜ್ಯಗಳ ಅಭಿಪ್ರಾಯ ಪಡೆದಿದ್ದಾರೆ. ಹೀಗಾಗಿ ಜನರಿಗೆ ಜೂನ್ 1ರಿಂದ ಕರ್ನಾಟಕದಲ್ಲಿ ಹೇಗಿರಲಿದೆ ಎಂಬ ಕುತೂಹಲ ಉಂಟಾಗಿದೆ. ಕರ್ನಾಟಕದಲ್ಲಿ ಜೂನ್ 1 ರಿಂದ ಏನಿರಬಹುದು? ಏನಿರಲ್ಲ ಎಂಬುದನ್ನು ನೋಡುವುದಾದರೆ..

ಜೂನ್ 1ರಿಂದ ಏನಿರಬಹುದು?
ಹೋಟೆಲ್:
– ಹೊಟೇಲ್, ರೆಸ್ಟೋರೆಂಟ್‍ಗಳಿಗೆ ತೆರೆಯಲು ಅನುಮತಿ
– ತಳ್ಳುಗಾಡಿಯಲ್ಲಿರುವ ಫುಟ್‍ಪಾತ್ ಕ್ಯಾಂಟೀನ್ ತೆರೆಯಲು ಅವಕಾಶ
– ಪಾರ್ಸೆಲ್ ಜೊತೆಗೆ ಕೂತು ತಿನ್ನುವುದಕ್ಕೂ ಅವಕಾಶ
– ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ

ಶಾಪಿಂಗ್ ಮಾಲ್:
– ಸೋಮವಾರಿಂದ ಶಾಪಿಂಗ್ ಮಾಲ್‍ಗಳು ಓಪನ್
– ಒಂದು ಪಾಳಿಯಲ್ಲಿ ಶೇ.50ರಷ್ಟು ಸಿಬ್ಬಂದಿಗಷ್ಟೇ ಕೆಲಸಕ್ಕೆ ಅವಕಾಶ
– ಶಾಪಿಂಗ್ ಮಾಲ್‍ಗಳಲ್ಲಿರುವ ಸೂಪರ್ ಮಾರ್ಕೆಟ್, ಎಲೆಕ್ಟ್ರಾನಿಕ್ ಉತ್ಪನ್ನಗಳು, ಉಡುಪುಗಳು, ಫೂಟ್‍ವೇರ್, ಜ್ಯುವೆಲ್ಲರಿ, ಕನ್ನಡಕ ಮಾರಾಟಕ್ಕೆ ಅವಕಾಶ
– ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಕಡ್ಡಾಯ

ಮೆಟ್ರೋ ರೈಲು:
– ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ ಅನುಮತಿ
– ಹಗಲು ಹೊತ್ತಲ್ಲಿ ಮಾತ್ರ ಮೆಟ್ರೋ ರೈಲುಗಳ ಸಂಚಾರ
– ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಕಡ್ಡಾಯ

ಟೆಂಪಲ್:
– ಜೂನ್ 1ರಿಂದ ದೇವಸ್ಥಾನ, ಮಸೀದಿ, ಚರ್ಚ್ ಗಳು ತೆರೆಯಲು ಅನುಮತಿ
– ಭಕ್ತರ ಸಂಖ್ಯೆಯ ಮೇಲೆ ಮಿತಿ ಹೇರುವುದು
– ನಿರ್ದಿಷ್ಟ ಸಮಯದಲ್ಲಷ್ಟೇ ಪೂಜೆ, ಪ್ರಾರ್ಥನೆ, ನಮಾಜ್‍ಗೆ ಅವಕಾಶ
– ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಕಡ್ಡಾಯ

ಶೂಟಿಂಗ್:
– ಸಿನಿಮಾ ಚಿತ್ರೀಕರಣಕ್ಕೆ ಷರತ್ತುಬದ್ಧ ಅನುಮತಿ
– ಸಿನಿಮಾ, ಧಾರಾವಾಹಿಗಳ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ

ಜಿಮ್:
– ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳಿಗೆ ಷರತ್ತುಬದ್ಧ ಅನುಮತಿ
– ನಿರ್ದಿಷ್ಟ ಸಮಯದಲ್ಲಷ್ಟೇ ಜಿಮ್ ತರಬೇತಿಗೆ ಅವಕಾಶ
– ಜಿಮ್, ಫಿಟ್ನೆಸ್ ಸೆಂಟರ್ ದಿನಬಿಟ್ಟು ದಿನ ಬರುವ ನಿಯಮ ಸಾಧ್ಯತೆ
– ವಯೋವೃದ್ಧರು, ಮಕ್ಕಳಿಗೆ ಪ್ರವೇಶ ನಿರ್ಬಂಧ ವಿಧಿಸಬಹುದು

ನೈಟ್ ಕರ್ಫ್ಯೂ:
– ನೈಟ್‍ ಕರ್ಫ್ಯೂ ಅವಧಿಯಲ್ಲಿ ಕಡಿತ ಸಾಧ್ಯತೆ
– ಸದ್ಯ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ 12 ಗಂಟೆಗಳ ಕರ್ಫ್ಯೂ
– 12 ಗಂಟೆಗಳ ಕರ್ಫ್ಯೂವನ್ನ 8 ಗಂಟೆಗೆ ಇಳಿಸುವ ನಿರೀಕ್ಷೆ
– ಬಿಎಂಟಿಸ್ ಬಸ್‍ಗಳ ಸಂಚಾರ ರಾತ್ರಿ 9 ಅಥವಾ 10 ಗಂಟೆವರೆಗೆ ವಿಸ್ತರಣೆ

ಜೂನ್ 1ರಿಂದ ಏನಿರಲ್ಲ?
* ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ ಗಳು ತೆರೆಯುವುದು ಅನುಮಾನ
* ಶಾಲೆ-ಕಾಲೇಜುಗಳು ಶುರುವಾಗುವ ಸಾಧ್ಯತೆ ಇಲ್ಲ
* ಕೋಚಿಂಗ್ ಸೆಂಟರ್‌ಗಳು, ಟ್ರೈನಿಂಗ್ ಸೆಂಟರ್‌ಗಳು ಬಂದ್ ಸಾಧ್ಯತೆ
* ಲಾಡ್ಜ್ ಗಳು ಓಪನ್ ಆಗುವ ನಿರೀಕ್ಷೆ ಇಲ್ಲ
* ಮಾಲ್‍ಗಳಲ್ಲಿರುವ ಫುಡ್‍ಕೋರ್ಟ್, ಮನರಂಜನಾ ಕೇಂದ್ರಗಳೂ ಬಂದ್ ನಿರೀಕ್ಷೆ
* ನೈಟ್‍ಕ್ಲಬ್, ಪಬ್ ಬಂದ್ ಮುಂದುವರಿಕೆ ನಿರೀಕ್ಷೆ
* ಪ್ರವಾಸಿ ತಾಣಗಳ ಬಂದ್ ಮುಂದುವರೆಯಲಿದೆ
* ಸ್ವಿಮ್ಮಿಂಗ್ ಪೂಲ್‍ಗಳು, ಕ್ರೀಡಾಕೂಟಕ್ಕೆ ಅನುಮತಿ ಇಲ್ಲ
* ಸಾರ್ವಜನಿಕ ಸಭೆ, ಸಮಾರಂಭ, ದೇವರ ಉತ್ಸವ, ರಥೋತ್ಸವ ಬಂದ್
* ಮದುವೆಗಳ ಮೇಲೆ ಈಗಿರುವ ಷರತ್ತು ಯಥಾವತ್ತು ಮುಂದುವರಿಯುವ ನಿರೀಕ್ಷೆ

Share This Article
Leave a Comment

Leave a Reply

Your email address will not be published. Required fields are marked *