ಬೆಂಗಳೂರು: ಸದ್ಯ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ರಾಗಿಣಿ ಕೋವಿಡ್ 19 ಲಾಕ್‌ಡೌನ್ ಸಮಯದಲ್ಲಿ ಅವರ ಕಚೇರಿಗೆ ತೆರಳಿ ಸ್ಯಾನಿಟೈಸರ್, ಮಾಸ್ಕ್ ಕೊಟ್ಟಿದ್ದರು.
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕೊರೊನಾ ವಾರಿಯರ್ಸ್ ಆಗಿ ಸಿಸಿಬಿ ಪೊಲೀಸರು ಕರ್ತವ್ಯ ನಿರ್ವಹಿಸಿದ್ದರು. ಈ ವೇಳೆ ಕಚೇರಿಗೆ ಬಂದಿದ್ದ ರಾಗಿಣಿ ಬಿಸ್ಕೆಟ್, ಜ್ಯೂಸ್, ಅರೆಂಜ್, ಸ್ಯಾನಿಟೈಸರ್, ಮಾಸ್ಕ್ ಕೊಟ್ಟಿದ್ದರು.
ಎಲ್ಲವನ್ನು ನೀಡಿದ ಬಳಿಕ ಕೊನೆಗೆ ಗ್ರೂಪ್ ಫೋಟೋವನ್ನು ತೆಗೆಸಿಕೊಂಡಿದ್ದರು. ಈಗ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪೊಲೀಸರು ದಾಖಲಿಸಿರುವ ಸ್ವಯಂಪ್ರೇರಿತ ಕೇಸಲ್ಲಿ ನಟಿ ರಾಗಿಣಿ ಎ-2 ಆರೋಪಿಯಾಗಿದ್ದಾರೆ. ವಿಚಾರಣೆ ವೇಳೆ ಮಾದಕ ದ್ರವ್ಯ ಸೇವನೆ ಒಪ್ಪಿಕೊಂಡಿದ್ದಾರೆ. ಹಾಗಾಗಿ, ಪೊಲೀಸರು ಸ್ಟ್ರಾಂಗ್ ಕೇಸ್‍ಗಳನ್ನು ಹಾಕಿದ್ದಾರೆ. ಇದನ್ನೂ ಓದಿ: ರಾಗಿಣಿ, ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಸೇರಿದಂತೆ 12 ಮಂದಿ ವಿರುದ್ಧ ಕೇಸ್ – ಯಾವೆಲ್ಲ ಸೆಕ್ಷನ್? ಶಿಕ್ಷೆ ಏನು? ಇಲ್ಲಿದೆ ಪೂರ್ಣ ಮಾಹಿತಿ
ಒಳಸಂಚು, ಮಾದಕ ವಸ್ತು ಸಂಗ್ರಹಣೆ ಸೇರಿದಂತೆ ಹಲವಾರು ಕೇಸ್‍ಗಳಲ್ಲಿ ಕನಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಮಾದಕ ವಸ್ತುಗಳನ್ನು ನೀಡುತ್ತಿದ್ದ ಬಗ್ಗೆ ಆರೋಪಿ ರವಿಶಂಕರ್ ನೀಡಿರುವ ಹೇಳಿಕೆಯನ್ನು ರಾಗಿಣಿ ಒಪ್ಪಿಕೊಂಡಿದ್ದಾರೆ. ರವಿಶಂಕರ್ 2 ಬಾರಿ ಎಂಡಿಎಂಎ ಮಾತ್ರೆಗಳನ್ನು ತಂದು ಕೊಟ್ಟಿದ್ದ. ನನ್ನ ಫ್ಲ್ಯಾಟ್‍ನಲ್ಲಿಯೇ ಅವನ್ನ ಸೇವಿಸಿದ್ದೇನೆ ಅಂತ ಒಪ್ಪಿಕೊಂಡಿದ್ದಾರೆ ಎಂಬ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.