– ವೈದ್ಯರ ಮುಂದೆ ಕಟ್ಟು ಕಥೆ ಕಟ್ಟಿದ್ರಾ ಗುತ್ತಿಗೆದಾರ..?
ಬೆಂಗಳೂರು: ಸಿಐಡಿ ಡಿವೈಎಸ್‍ಪಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ತಂದೆ ವೆಂಕಟೇಶ್ ಅವರು ಲಕ್ಷ್ಮಿ ಸ್ನೇಹಿತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಈ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮಗಳ ಸಾವಿನ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲಕ್ಷ್ಮಿ ಸ್ನೇಹಿತ ಗುತ್ತಿಗೆದಾರ ಮನೋಹರ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪಾರ್ಟಿ ಮಾಡಿರೋ ವ್ಯಕ್ತಿ ಮನೋಹರ್ ಯಾರು ಗೊತ್ತಿಲ್ಲ. ನನ್ನ ಮಗಳಿಗೆ ಮನೆ, ಹಣ, ಅಧಿಕಾರ ಹೀಗೆ ಎಲ್ಲವೂ ಇದೆ. ಆದರೂ ಖಿನ್ನತೆ ಯಾಕೆ ಆಗುತ್ತೆ..? 2 ದಿನದ ಹಿಂದೆ ಅಳಿಯ ಹೈದರಾಬಾದ್‍ಗೆ ಹೋಗಿದ್ದಾರೆ.
ಲಕ್ಷ್ಮಿ ಅವರ ಸಾವಿಗೆ ಮನೋಹರ್, ಪ್ರಜ್ವಲ್ ಮೇಲೆ ತಂದೆ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಮನೋಹರ್, ಪ್ರಜ್ವಲ್ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರ ಬಳಿ ಕಟ್ಟುಕತೆ ಕಟ್ಟಿದ್ದಾರೆ. ಎಲ್ಲರೂ ಕುಳಿತಿರುವಾಗ ಬಿದ್ದು ಹೋಗಿದ್ದಾಳೆ. ನಾವು ಕುಡಿಯುತ್ತಿದ್ದಾಗ ಇದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ಏನಾಯಿತು ಅಂತ ಗೊತ್ತಿಲ್ಲ. ಪ್ಲೀಸ್ ಚೆಕ್‍ಮಾಡಿ ಎಂದು ನಾಗರಬಾವಿ ಆಸ್ಪತ್ರೆಯಲ್ಲಿ ವೈದ್ಯರ ಬಳಿ ಸುಳ್ಳು ಹೇಳಿದ್ದಾರೆ. ಮನೋಹರ್ ಹಾಗೂ ಪ್ರಜ್ವಲ್ ಜಿಎಂ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಇಸಿಜಿ ಚೆಕ್ ಮಾಡಿದ ವೈದ್ಯರು ಅವರ ಪ್ರಾಣ ಹೋಗಿದೆ ಎಂದು ಹೇಳಿದ್ದಾರೆ.
ಸಿಐಡಿ ಡಿವೈಎಸ್‍ಪಿ ಲಕ್ಷ್ಮಿ ಅವರ ಮೃತ ದೇಹವನ್ನು ಸಾಗಿಸಿದ ಕಾರನ್ನು ಅನ್ನಪೂರ್ಣೆಶ್ವರಿ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರಿನಲ್ಲಿ ಆಕ್ಸಿಜನ್ ಕಿಟ್ ಕೂಡ ಇರುವುದು ನೋಡಿದರೆ ಅವರನ್ನು ಬದುಕಿಸುವ ಪ್ರಯತ್ನ ಮಾಡಿದ್ದಾರೆ ಎನ್ನುವುದು ತಿಳಿದು ಬಂದಿದೆ. ಪಾರ್ಟಿ ಮಾಡುವ ವೇಳೆ ಏನಾಯಿತ್ತು, ಅವರ ಸಾವಿಗೆ ಕಾರಣವೇನು ಎನ್ನುವ ಖಚಿತ ಮಾಹಿತಿ ಹುಡುಕಾಟದಲ್ಲಿ ಪೊಲೀಸರಿದ್ದಾರೆ.