ರೋಹಿಣಿ ಸಿಂಧೂರಿಯನ್ನ ವೀರಪ್ಪನ್‍ಗೆ ಹೋಲಿಸಿದ ಬಿಜೆಪಿ ಮುಖಂಡ ಮಲ್ಲೇಶ್

Public TV
2 Min Read

– ಹೋದಲ್ಲೆಲ್ಲ ಜಗಳ, ಅಹಂಕಾರ, ದರ್ಪ, ದೌಲತ್ತು

ಚಾಮರಾಜನಗರ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೋದಲ್ಲೆಲ್ಲ ಜಗಳವನ್ನೇ ಮಾಡಿದ್ದಾರೆ. ಅಹಂಕಾರ ದರ್ಪ, ದೌಲತ್ತು ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ರೈತ ಮುಖಂಡ ಮಲ್ಲೇಶ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ, ಮಂಡ್ಯ ಹಾಗೂ ಮೈಸೂರು ಹೀಗೆ ಹೋದಲ್ಲೆಲ್ಲ ಜಗಳ ಮಾಡಿದ್ದಾರೆ. ಅಹಂಕಾರ, ದರ್ಪ, ದೌಲತ್ತು ಪ್ರದರ್ಶಿಸಿದ್ದಾರೆ. ಐಎಎಸ್ ಅಧಿಕಾರಿ ಎಂದರೆ ಮೇಲಿಂದ ಇಳಿದು ಬಂದವರೇ, ಚಾಮರಾಜನಗರಲ್ಲಿ 36 ಜನರ ಸಾವಿಗೆ ಕಾರಣರಾದ ರೋಹಿಣಿ ಸಿಂಧೂರಿಯರವನ್ನು ಅಮಾನತು ಮಾಡಬೇಕು ಎಂದು ಚಾಮರಾಜನಗರ ಜಿಲ್ಲೆಯ ಜನತೆ ಪರವಾಗಿ ಕೇಳಿಕೊಳ್ಳುತ್ತಿದ್ದೇನೆ. ಅವರನ್ನು ಅಮಾನತಿನಲ್ಲಿಟ್ಟು ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ನಡೆಸಿ, ಉಳಿದ ಐಎಎಸ್ ಅಧಿಕಾರಿಗಳಿಗೆ ಇದರಿಂದ ಬುದ್ಧಿ ಬರಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ಆಮ್ಲಜನಕ ದುರಂತಕ್ಕೆ ರೋಹಿಣಿ ಸಿಂಧೂರಿ ಕಾರಣನಾ?

ಕಾಡುಗಳ್ಳ ವೀರಪ್ಪನ್ ಹಂತ ಹಂತವಾಗಿ ಹಲವು ಜನರನ್ನು ಸಾಯಿಸಿದ್ದಾನೆ. ಅವನನ್ನು ಹಿಡಿಯಲು ಬಿಎಸ್‍ಎಫ್, ಸಿಆರ್‍ಪಿಎಫ್ ಸೇನೆ ಬಂದಿತ್ತು. ಆದರೆ 25 ಜನರನ್ನು ಸಾಯಿಸಿದ ರೋಹಿಣಿ ಸಿಂಧೂರಿಯವರನ್ನು ರೆಡ್ ಕಾರ್ಪೆಟ್ ಹಾಕಿ ಸುಲಭವಾಗಿ ಬೆಂಗಳೂರಿಗೆ ಕಳುಹಿಸಿದರು. ಅವರು ಚಾಮರಾಜನಗರದಲ್ಲಿ ಹತ್ಯಾಕಾಂಡ ನಡೆಸಿದ್ದಾರೆ. ಕೇವಲ ಮೈಸೂರು ಮಾತ್ರವಲ್ಲ ಚಾಮರಾಜನಗರ, ಮಂಡ್ಯ ಹಾಗೂ ಕರಾವಳಿ ಭಾಗಕ್ಕೂ ಆಕ್ಸಿಜನ್ ನೀಡುವಂತೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಸಿಎಸ್ ಹಾಗೂ ಸಿಎಂ ಇಬ್ಬರೂ ಹೇಳಿದ್ದರು. ಮದರ್ ರೀತಿ ವರ್ತಿಸಿ ಎಂದು ಸಲಹೆ ನೀಡಿದ್ದರು. ಆದರೆ ಇವರು ಮದರ್ ರೀತಿ ವರ್ತಿಸದೆ ಮಾರಿ ರೀತಿ ವರ್ತಿಸಿ, ಆಕ್ಸಿಜನ್ ಸಿಗದೆ ನಾಳೆ ನಮಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದರು. ನಾವು ಕೊರೊನಾ ವಿರುದ್ಧದ ಹೋರಾಟದಲ್ಲಿದ್ದೆವು. ಈ ವೇಳೆ ಪ್ರತಿ ನಿಮಿಷ ಸಹ ಮುಖ್ಯವಾಗಿತ್ತು. ಅವರು ನಮಗೆ ಆಕ್ಸಿಜನ್ ನೀಡಿದ್ದರೆ, ಬಳಿಕ ಬೆಂಗಳೂರಿನಿಂದ ತರಿಸಿಕೊಳ್ಳಬಹುದಿತ್ತು. ಆದರೆ ಅವರು ಕರೆಯನ್ನೇ ಸ್ವೀಕರಿಸಲಿಲ್ಲ. ಇದರಿಂದ ಸಿಬ್ಬಂದಿ ಭಯಭೀತರಾದರು ಎಂದು ಆರೋಪಿಸಿದರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ಕೆಲಸಗಾತಿ ಅಲ್ಲ, ಪ್ರಚಾರ ಪ್ರಿಯೆ ಅಂತ ಹೇಳೋಕೆ ಬಂದೆ: ಎ. ಮಂಜು

ಈ ಎಲ್ಲ ಕಾರಣಗಳಿಂದಾಗಿ ರೋಹಿಣಿ ಸಿಂಧೂರಿ ಅವರನ್ನು ಸಸ್ಪೆಂಡ್ ಮಾಡಬೇಕು, 302 ಕೇಸ್ ದಾಖಲಿಸಬೇಕು. ರಿಯಲ್ ಎಸ್ಟೇಟ್ ದಂಧೆಯಲ್ಲಿ ಅವರು ಭಾಗಿಯಾಗಿದ್ದಾರೆ. ಅಲ್ಲದೆ ಅವರು ಯಾರನ್ನೂ ನೆಮ್ಮದಿಯಾಗಿರಲು ಬಿಟ್ಟಿಲ್ಲ. ಹಾಸನ, ಮಂಡ್ಯ ಹಾಗೂ ಮೈಸೂರು ಎಲ್ಲ ಕಡೆಯೂ ಜಗಳ ಮಾಡಿದ್ದಾರೆ. ವಿಜಯ್ ಭಾಸ್ಕರ್, ಅಜಯ್ ಸೇಠ್ ಸೇರಿದಂತೆ ಹಲವರು ಮೈಸೂರು ಜಿಲ್ಲಾಧಿಕಾರಿಗಳಾಗಿದ್ದರು. ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಇವರು ಏನು ಕೆಲಸ ಮಾಡಿದ್ದಾರೆ? ಬರೀ ಅಹಂಕಾರ, ದರ್ಪ, ದೌಲತ್ತು ಪ್ರದರ್ಶಿಸಿದ್ದಾರೆ. ಐಎಎಸ್ ಅಧಿಕಾರಿ ಎಂದ ತಕ್ಷಣ ಮೇಲಿಂದ ಇಳಿದು ಬಂದವರಾ? ಚಾಮರಾಜನಗರದಲ್ಲಿ ನರಹತ್ಯೆಯಾಗಿದೆ. ಹೀಗಾಗಿ ಅವರನ್ನು ಅಮಾನತುಗೊಳಿಸಿ, 302 ಕೇಸ್ ದಾಖಲಿಸಿ, ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ವರ್ಗಾವಣೆಗೂ ಎರಡು ದಿನ ಮುಂಚೆ ಒತ್ತುವರಿ ತೆರವು, ಭೂ ಅಕ್ರಮದ ತನಿಖೆಗೆ ಆದೇಶಿಸಿದ್ದ ರೋಹಿಣಿ ಸಿಂಧೂರಿ

Share This Article
Leave a Comment

Leave a Reply

Your email address will not be published. Required fields are marked *