ರೋಗಿಗಳಿಗೆ ಊಟ ಕೊಟ್ಟು ಸ್ನೇಹಿತರ ದಿನಾಚರಣೆ ಆಚರಿಸಿದ ವೈದ್ಯ

Public TV
1 Min Read

ನೆಲಮಂಗಲ: ವಿಶ್ವ ಸ್ನೇಹಿತರ ದಿನಾಚರಣೆಯ ಅಂಗವಾಗಿ ವೈದ್ಯರಾದ ಡಾಕ್ಟರ್ ದಿವಾಕರ್ ಅವರು, ಬೆಂಗಳೂರು ಹೊರವಲಯದ ನೆಲಮಂಗಲ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಊಟದ ವ್ಯವಸ್ಥೆಯನ್ನು ಆಯೋಜಿಸುವ ಮೂಲಕವಾಗಿ ವಿಭಿನ್ನವಾಗಿ ಆಚರಿಸಿದ್ದಾರೆ.

ದೇಶದಲ್ಲಿ ಸ್ನೇಹಿತರ ದಿನಾಚರಣೆಯನ್ನು ಹಲವಾರು ರೀತಿಗಳಿಂದ ಆಚರಣೆ ಮಾಡುವ ಈ ಸಮಾಜದಲ್ಲಿ, ಡಾಕ್ಟರ್ ದಿವಾಕರ್ ವಿಭಿನ್ನವಾಗಿ ವೈದ್ಯ ಮಿತ್ರರು ಹಾಗೂ ಸಿಬ್ಬಂದಿ ವರ್ಗದವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಜೊತೆಯಲ್ಲಿ ಸ್ನೇಹಿತರ ದಿನಾಚರಣೆಯನ್ನು ನೆರವೇರಿಸಿ ಕೊಂಡಿದ್ದಾರೆ.  

ಈ ಒಂದು ಕಾರ್ಯಕ್ರಮದ ಭೋಜನವನ್ನು ಸ್ವೀಕರಿಸಿದ ವೈದ್ಯರಾದ ಡಾ.ಸೋನಿಯಾ ಮಾತನಾಡಿ ಡಾಕ್ಟರ್ ದಿವಾಕರ್ ಅವರು ತುಂಬಾ ಉತ್ತಮವಾದ ಹಾಗೂ ವಿಭಿನ್ನವಾದ ಸ್ನೇಹಿತರ ದಿನಾಚರಣೆಯನ್ನು ನಮ್ಮ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಅವರ ಜೊತೆಯಲ್ಲಿ ಹಂಚಿಕೊಳ್ಳುತ್ತಿರುವುದು ತುಂಬಾ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿ ಉನ್ನತ ಸ್ಥಾನಕ್ಕೆ ಏರಲಿ ಎಂದು ಹರಸಿದರು. ಇದನ್ನೂ ಓದಿ: ಮೋದಿಗೆ ಸ್ನೇಹಿತರ ದಿನಾಚರಣೆಯ ಶುಭಕೋರಿ ಕಾಲೆಳೆದ ರಾಹುಲ್

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸರ್ಕಾರಿ ಆಸ್ಪತ್ರೆಯ ಸಿಇಓ. ನರಸಿಂಹಯ್ಯ ಅವರು ಊಟದ ವ್ಯವಸ್ಥೆ ಮಾಡಿಕೊಟ್ಟಂತಹ ಡಾಕ್ಟರ್ ದಿವಾಕರ್ ಅವರ ಸ್ನೇಹ ಬಾಂಧವ್ಯ ನಮ್ಮೆಲ್ಲರ ಜೊತೆ ಸದಾಕಾಲ ಇರಲಿ. ಮುಂದಿನ ದಿನಗಳಲ್ಲಿ ಅವರು ಮಾಡುವ ಎಲ್ಲಾ ಒಳ್ಳೆಯ ಕೆಲಸಗಳಲ್ಲಿ ನಾವು ಅವರ ಜೊತೆಯಲ್ಲಿ ಇರುತ್ತೇವೆ ಹಾಗೂ ನಮ್ಮ ಸರ್ಕಾರಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ರೋಗಿಗಳ ಪರವಾಗಿ ನಾನು ದಿವಾಕರ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು. ಸ್ನೇಹಿತ ಸಹಪಾಠಿಗಳ ಜೊತೆಗೆ ತಾವೇ ಊಟ ಬಡಿಸಿ, ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ನೇಹಿತರ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸಿದರು.

Share This Article
Leave a Comment

Leave a Reply

Your email address will not be published. Required fields are marked *