ರೈತರ ಹೋರಾಟಕ್ಕೆ ಪಾಪ್ ಗಾಯಕಿ ಬೆಂಬಲ- ಅನ್ನದಾತರನ್ನ ಭಯೋತ್ಪಾದಕರೆಂದ ಕಂಗನಾ

Public TV
1 Min Read

– ಮಿಯಾ ಖಲೀಫಾ ಬೆಂಬಲ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಗಡಿ ಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಶ್ವದ ಗಮನ ಸೆಳೆದಿದೆ. ಈಗಾಗಲೇ ಕೆಲ ರಾಷ್ಟ್ರಗಳ ರಾಜಕೀಯ ಮುಖಂಡರು ತಮ್ಮ ಅಭಿಪ್ರಾಯಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಅಮೆರಿಕದ ಪಾಪ್ ಗಾಯಕಿ ರಿಹಾನಾ ಸಹ ರೈತರ ಪ್ರತಿಭಟನೆಗೆ ತಮ್ಮ ಬೆಂಬಲ ನೀಡಿದ್ದಾರೆ. ರಿಹಾನರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಟಿ ಕಂಗನಾ ರಣಾವತ್, ಅವರು ಭಯೋತ್ಪಾದಕರೆಂದು ಎಂದು ಹೇಳಿದ್ದಾರೆ.

ಪರಿಸರ ರಕ್ಷಣಾ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್, ರೈತರ ಆಂದೋಲನಕ್ಕೆ ವಿಶ್ವ ಬೆಂಬಲ ನೀಡಬೇಕು. ಕ್ಲೈಮೇಂಟ್ ಚೇಂಜ್ ಆ್ಯಕ್ಟಿವಿಸ್ಟ್ ಗ್ರೇಟ್ ಥನ್‍ಬರ್ಗ್ ಅವರಿಗೂ ಈ ಬಗ್ಗೆ ಚರ್ಚೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ ನೀಡಿರುವ ಸನ್ಮಾನವನ್ನ ಕಂಗುಜಮ್ ತಿರಸ್ಕರಿಸಿದ್ದರು. ಇನ್ನು ರಿಹಾನಾ ಟ್ವೀಟ್ ಬಳಿಕ ಜಾಗತಿಕ ಮಟ್ಟದಲ್ಲಿ ಅನ್ನದಾತರ ಹೋರಾಟ ಸದ್ದು ಮಾಡುತ್ತಿದೆ.

ರಿಹಾನಾರ ಸಮರ್ಥನೆಯ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಕಂಗನಾ ರಣಾವತ್, ಅಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರು ಅಲ್ಲ ಅವರು ಭಯೋತ್ಪಾದಕರು. ಆದ್ರೆ ಯಾರು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಇವರು ಭಾರತವನ್ನ ವಿಭಜಿಸುವ ಕೃತ್ಯಕ್ಕೆ ಮುಂದಾಗಿದ್ದಾರೆ. ವಿಭಜನೆಯಾದ ಭಾರತವನ್ನ ಚೀನಾ ಅತಿಕ್ರಮಿಸಿಕೊಳ್ಳಲಿ ಎಂಬುವುದು ಇವರ ಉದ್ದೇಶ. ನೀವು ಮೂರ್ಖರಾಗಿಯೇ ಕುಳಿತುಕೊಳ್ಳಿ. ಆದ್ರೆ ನಾವು ರಾಷ್ಟ್ರವನ್ನ ಮಾರಾಟ ಮಾಡಲು ಬಿಡಲ್ಲ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.

ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡಿರುವ ನಟಿ ಮಿಯಾ ಖಲೀಫಾ, ಪ್ರತಿಭಟನಾ ಸ್ಥಳದಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸೋದು ಮಾನವ ಹಕ್ಕುಗಳ ಉಲ್ಲಂಘನೆ. ನಾನು ರೈತರ ಜೊತೆಯಲ್ಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *