ರಿಯಾ ಚಕ್ರವರ್ತಿ ಹೊರ ನಡೆದ ಬಳಿಕ ಸುಶಾಂತ್ ಮನೆಯಲ್ಲಿ ನಡೆದಿದ್ದೇನು?

Public TV
3 Min Read

-ಜೂನ್ 8 ರಿಂದ 14 ನಡೆದ ಮಾಹಿತಿ ಬಿಚ್ಚಿಟ್ಟ ಸುಶಾಂತ್ ಅಕ್ಕ

ಮುಂಬೈ: ನಟಿ ರಿಯಾ ಚಕ್ರವರ್ತಿ ಜೂನ್ 8ರಂದು ಸುಶಾಂತ್ ಸಿಂಗ್ ರಜಪೂತ್ ಮನೆಯಿಂದ ಹೊರ ಬಂದಿದ್ದರು. ಇದೀಗ ಸುಶಾಂತ್ ಸೋದರಿ ಮೀತು ಸಿಂಗ್, ಜೂನ್ 8ರಿಂದ ಜೂನ್ 14ರ ನಡುವೆ ಘಟನಾವಳಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂಬೈ ಪೊಲೀಸರ ಮುಂದೆ ಮೀತು ಸಿಂಗ್ ದಾಖಲಿಸಿರುವ ಹೇಳಿಕೆಯನ್ನ ಸಿಬಿಐಗೆ ವರ್ಗಾಯಿಸಲಾಗಿದೆ.

ಜೂನ್ 8ಕ್ಕೆ ಸುಶಾಂತ್ ಫೋನ್: ಜೂನ್ 8, 2020ರ ಬೆಳಗ್ಗೆ ಸುಶಾಂತ್ ನನಗೆ ಫೋನ್ ಮಾಡಿ ಭೇಟಿಯಾಗುವಂತೆ ತಿಳಿಸಿದ. ನಾನು ಸಂಜೆ 5.30ಕ್ಕೆ ಸುಶಾಂತ್ ಮನೆ ತಲುಪಿದಾಗ, ಆತನ ಶಾಂತವಾಗಿ ಕುಳಿತಿದ್ದನು. ಆಗ ಲಾಕ್‍ಡೌನ್ ನಿಂದಾಗಿ ಮನೆಯಲ್ಲಿ ಕುಳಿತು ಬೇಸರವಾಗ್ತಿದೆ. ಲಾಕ್‍ಡೌನ್ ಮುಗಿದ ಬಳಿಕ ದಕ್ಷಿಣ ಭಾರತದ ರಾಜ್ಯಗಳಿಗೆ ಪ್ರವಾಸಕ್ಕೆ ಹೋಗೋಣ ಅಂತ ಹೇಳಿದ. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ

ಅಂದು ತನ್ನ ಜೊತೆಗೆ ಇರುವಂತೆ ಹೇಳಿದ್ದರಿಂದ ಕೆಲ ದಿನ ಸುಶಾಂತ್ ಮನೆಯಲ್ಲಿದ್ದೆ. ಸುಶಾಂತ್ ಮನೆಯಲ್ಲಿದ್ದಾಗ ಆತನಿಗೆ ಇಷ್ಟವಾಗುವ ಅಡುಗೆ ಮಾಡುತ್ತಿದ್ದೆ ಮತ್ತು ಇಬ್ಬರು ಜೊತೆಯಾಗಿ ಕುಳಿತು ಮಾತಾಡುತ್ತಿದ್ದೆ ಎಂದು ಮೀತು ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಹೌದು, ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿದ್ದೆ: ರಿಯಾ ಚಕ್ರವರ್ತಿ

ಜೂನ್ 12ರಿಂದ ಯಾವುದೇ ಉತ್ತರವಿಲ್ಲ: ಜೂನ್ 12ರಂದು ನನ್ನ ಮಗಳು ಗೋರೆಗಾಂವ್ ದಲ್ಲಿರುವ ನಿವಾಸದಲ್ಲಿ ಒಬ್ಬಳೇ ಇದ್ದಿದ್ದರಿಂದ ಅಂದು ಮಧ್ಯಾಹ್ನ 4.30ಕ್ಕೆ ಸುಶಾಂತ್‍ಗೆ ಹೇಳಿ ನನ್ನ ಮನೆಗೆ ಹೋದೆ. ಮನೆ ತಲುಪಿದ ಬಳಿಕ ಸುಶಾಂತ್‍ಗೆ ಮೆಸೇಜ್ ಮಾಡಿದೆ. ಆದ್ರೆ ಅವನಿಂದ ರಿಪ್ಲೈ ಬರಲಿಲ್ಲ. ಜೂನ್ 14ರ ಬೆಳಗ್ಗೆ 10.30ಕ್ಕೆ ಕಾಲ್ ಮಾಡಿದಾಗ ಸುಶಾಂತ್ ಫೋನ್ ರಿಸೀವ್ ಮಾಡಲಿಲ್ಲ. ಹಾಗಾಗಿ ಅವನ ಜೊತೆಯಲ್ಲಿರುತ್ತಿದ್ದ ಸಿದ್ಧಾರ್ಥ್ ಪಿಠಾಣಿಗೆ ಫೋನ್ ಮಾಡಿ, ಮಾತನಾಡಿದೆ. ಇದನ್ನೂ ಓದಿ: ಸರ್ ನಿಧನದ ಬಳಿಕ ಮನೆಯಲ್ಲಿದ್ದ ಡ್ರಗ್ ಸಿಗರೇಟ್  ರೋಲ್ ಮಾಯವಾಯ್ತು: ಸುಶಾಂತ್ ಮನೆಯ ಕುಕ್ 

ಸುಶಾಂತ್ ಎಳನೀರು ಮತ್ತು ದಾಳಿಂಬೆ ಜ್ಯೂಸ್ ಕುಡಿದ ಕೋಣೆಗೆ ಮಲಗಿರುವ ವಿಚಾರವನ್ನ ಸಿದ್ಧಾರ್ಥ್ ತಿಳಿಸಿದ. ಸುಶಾಂತ್ ಒಳಗಿನಿಂದ ಡೋರ್ ಲಾಕ್ ಮಾಡಿಕೊಂಡಿದ್ದು, ಬಾಗಿಲು ತೆರೆಯುತ್ತಿಲ್ಲ ಎಂದು ಸಿದ್ಧಾರ್ಥ್ ಹೇಳಿದ್ರು. ಸುಶಾಂತ್ ಮಲಗುವಾಗ ಬಾಗಿಲು ಹಾಕಲ್ಲವಲ್ಲಾ ಎಂದು ಹೇಳಿ, ನಾನು ಫೋನ್ ಮಾಡಿರುವ ವಿಷಯ ತಿಳಿಸಿ ಎಂದು ಫೋನ್ ಕಟ್ ಮಾಡಿದೆ. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ

ಬೆಡ್ ಮೇಲೆ ಸುಶಾಂತ್ ಶವ: ಕೆಲ ಸಮಯದ ಬಳಿಕ ಫೋನ್ ಮಾಡಿದ ಸಿದ್ಧಾರ್ಥ್, ಎಷ್ಟೇ ಕೂಗಿದ್ರೂ ಸುಶಾಂತ್ ಬಾಗಿಲು ತೆಗೆಯುತ್ತಿಲ್ಲ. ಹಾಗಾಗಿ ಬೀಗ ಮುರಿಯುವ ವ್ಯಕ್ತಿಯನ್ನ ಬರಲು ಹೇಳಿದ್ದೇನೆ ಎಂದ್ರು. ಕೂಡಲೇ ನಾನು ಕ್ಯಾಬ್ ಮಾಡಿಕೊಂಡು ಗೋರೆಗಾಂವ್ ನಿಂದ ಬಾಂದ್ರಾಗೆ ಬಂದೆ. ನಾನು ಬರುತ್ತಿರುವಾಗ ಮತ್ತೆ ಕಾಲ್ ಮಾಡಿದ ಸಿದ್ಧಾರ್ಥ್, ಬಾಗಿಲ ಬೀಗ ಮುರಿಯಲಾಗಿದ್ದು, ಸುಶಾಂತ್ ಶವ ಫ್ಯಾನ್ ನಲ್ಲಿ ನೇತಾಡ್ತಿದೆ ಎಂದು ಹೇಳಿದರು. ನಾನು ಮನೆಗೆ ಬಂದಾಗ ಬೆಡ್ ಮೇಲೆ ಸುಶಾಂತ್ ಹಿಮ್ಮುಖವಾಗಿ ಮಲಗಿಸಲಾಗಿತ್ತು. ಫ್ಯಾನ್ ನಲ್ಲಿ ಹಸಿರು ಬಣ್ಣದ ಶರ್ಟ್ ಬಟ್ಟೆ ನೇತಾಡುತ್ತಿತ್ತು. ಇದನ್ನೂ ಓದಿ: ಪ್ರಕರಣಕ್ಕೆ ಹೊಸ ತಿರುವು ನೀಡಿದ ಸುಶಾಂತ್ ಪಕ್ಕದ್ಮನೆ ಮಹಿಳೆ ಹೇಳಿಕೆ

ಸಿದ್ಧಾರ್ಥ್ ಮತ್ತು ಮನೆಯಲ್ಲಿದ್ದ ಇತರರು ಚಾಕುವಿನಿಂದ ಬಟ್ಟೆ ಕತ್ತರಿಸಿ ಸುಶಾಂತ್ ದೇಹ ಕೆಳಗೆ ಇಳಿಸಿ, ಬಾಂದ್ರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ನಾನು ಸಹ ಸೋದರಿ ನೀತು ಮತ್ತು ಪ್ರಿಯಾಂಕಾಗೆ ಫೋನ್ ನಡೆದ ವಿಷಯ ತಿಳಿಸಿದೆ. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ

Share This Article
Leave a Comment

Leave a Reply

Your email address will not be published. Required fields are marked *