ರಿಯಾಗೆ ಜೈಲಾ? ಬೇಲಾ?-ತೀರ್ಪು ಕಾಯ್ದಿರಿಸಿದ ಕೋರ್ಟ್

Public TV
3 Min Read

-ಇಂದು ನ್ಯಾಯಾಲಯದಲ್ಲಿ ನಡೆದಿದ್ದೇನು?
-ವಾದ ಮಂಡನೆ ವೇಳೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಎನ್‍ಸಿಬಿ

ಮುಂಬೈ: ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಜಾಮೀನು ಸಿಗುತ್ತಾ ಅನ್ನೋದು ನಾಳೆ ತಿಳಿಯಲಿದೆ. ಇಂದು ನ್ಯಾಯಾಲಯ ವಾದ-ಪ್ರತಿವಾದ ಆಲಿಸಿದ್ದು, ಶುಕ್ರವಾರ ತೀರ್ಪನ್ನ ನ್ಯಾಯಾಲಯ ಕಾಯ್ದಿರಿಸಿದೆ. ಹಾಗಾಗಿ ಇಂದು ಸಹ ರಿಯಾ ಬೈಖಲಾ ಜೈಲೂಟ ಸವಿಯಬೇಕಿದೆ.

ಎನ್‍ಸಿಬಿ ಪರ ವಕೀಲರ ವಾದ: ಜಾಮೀನು ನೀಡದಂತೆ ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಪರ ವಕೀಲರೂ ಕೊನೆಯವರೆಗೂ ವಾದ ಮಂಡಿಸಿದ್ದರು. ಪ್ರಕರಣ ತನಿಖಾ ಹಂತದಲ್ಲಿದ್ದು, ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನದಲ್ಲಿರೋದು ಒಳ್ಳೆಯದು. ಕಳೆದ ನಾಲ್ಕೈದು ದಿನಗಳಿಂದ ತನಿಖಾಧಿಕಾರಿಗಳು ಮನೆಗೂ ಸಹ ಹೋಗಿಲ್ಲ. ಅಧಿಕಾರಿಗಳು ಬಿಡುವಿಲ್ಲದೇ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆರೋಪಿ ರಿಯಾ ಚಕ್ರವರ್ತಿ ತಮ್ಮ ಸ್ವಂತ ಉಪಯೋಗಕ್ಕಾಗಿ ಡ್ರಗ್ಸ್ ಖರೀದಿಸಿಲ್ಲ. ಬದಲಾಗಿ ಬೇರೆಯವರಿಗಾಗಿ ಡ್ರಗ್ಸ್ ಖರೀದಿ ಮಾಡಲಾಗಿದೆ. ಈ ಹಿನ್ನೆಲೆ ಎನ್‍ಡಿಪಿಎಸ್ ಆ್ಯಕ್ಟ್ 27ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೆ ಇಂದು ಜೈಲೂಟ

ಪ್ರಕರಣದಲ್ಲಿ ಬಂಧಿತನಾಗಿರುವ ಮತ್ತೋರ್ವ ಆರೋಪಿ ಶೌವಿಕ್ ಚಕ್ರವರ್ತಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಮಾರ್ಚ್ 16ರಂದು ಸೋದರನಿಗೆ ಮೆಸೇಜ್ ಮಾಡಿದ್ದ ರಿಯಾ ಗೆಳೆಯ ಸುಶಾಂತ್ ಗಾಗಿ ಮಾರಿಜುನಾ ಮತ್ತು ಹ್ಯಾಶ್ ಕೇಳಿದ್ದಳು. ಮೃತ ಸುಶಾಂತ್ ದಿನಕ್ಕೆ ನಾಲ್ಕರಿಂದ ಐದು ಬಾರಿ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಅಕ್ಕನ ಮೆಸೇಜ್ ಗೆ ರಿಪ್ಲೈ ಮಾಡಿದ್ದ ಶೌವಿಕ್, 5 ಗ್ರಾಂ ತೂಕದ ಕ್ಯೂರೆಟೆಡ್ ಮಾರಿಜುವನಾ ನೀಡುವ ವ್ಯವಸ್ಥೆ ಮಾಡುತ್ತೇನೆ. ಒಮ್ಮೆ ಇದನ್ನ ತೆಗೆದುಕೊಂಡ್ರೆ 20 ಬಾರಿಯ ಸ್ಮೋಕ್ ಗೆ ಸಮನಾಗಿರುತ್ತೆ ಅಂತ ಶೌವಿಕ್ ಹೇಳಿದ್ದಾನೆ. ಅಕ್ಕನ ಸಮ್ಮತಿ ಪಡೆದ ಶೌವಿಕ್ ಡ್ರಗ್ಸ್ ಖರೀದಿಗಾಗಿ ಗೆಳೆಯ, ಸಂಬಂಧಿ ಅಬ್ದುಲ್ ಬಸೀತ್ ನನ್ನ ಸಂಪರ್ಕಿಸಿದ್ದಾನೆ.ಇದನ್ನೂ ಓದಿ: ಡ್ರಗ್ಸ್ ಅಡಿಕ್ಟ್ ಸುಶಾಂತ್‍ನನ್ನು ಪ್ರೀತಿಸಿದ್ದಕ್ಕೆ ಈ ಶಿಕ್ಷೆ: ರಿಯಾ ಪರ ವಕೀಲ

ಕೊನೆಗೆ ರಿಯಾ ಮತ್ತು ಸ್ಯಾಮುಯೆಲ್ ಮಿರಂಡಾ ಇಬ್ಬರು ನೇರವಾಗಿ ಬಸಿತ್ ನನ್ನು ಸಂಪರ್ಕಿಸಿ ಚೌಕಾಸಿ ಮಾಡಿದ್ದಾರೆ. ವ್ಯವಹಾರದ ಬಳಿಕ ಜೈದ್ ಮೂಲಕ ಬಸೀತ್ ಮಾರ್ಚ್ 17ರಂದು ಡ್ರಗ್ಸ್ ತಲುಪಿಸಿದ್ದನು. ಈ ಎಲ್ಲ ಅಂಶಗಳನ್ನು ಶೌವಿಕ್ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ವಾದ ಮಂಡಿಸಿದ್ದರು. ಇದನ್ನೂ ಓದಿ: ವಿಚಾರಣೆ ವೇಳೆ ತಮ್ಮನನ್ನ ನೋಡಿ ಕಣ್ಣೀರಿಟ್ಟ ರಿಯಾ ಚಕ್ರವರ್ತಿ-25 ಬಿಟೌನ್ ಸ್ಟಾರ್ ಗಳಿಗೆ ಢವಢವ ಶುರು

ರಿಯಾ ಅರ್ಜಿಯಲ್ಲಿ ಮನವಿ: ನ್ಯಾಯಾಂಗ ಬಂಧನದಲ್ಲಿದ್ದರೂ ಕೊಲೆ, ರೇಪ್ ಬೆದರಿಕೆಗಳು ಬರುತ್ತಿದ್ದು, ನನ್ನ ಜೀವ ಅಪಾಯದಲ್ಲಿದೆ. ಮೂರು ತನಿಖಾ ಏಜೆನ್ಸಿಗಳಾದ ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ ಮತ್ತು ಎನ್‍ಸಿಬಿ ಮಾನಸಿಕವಾಗಿ ನನ್ನನ್ನು ಕುಗ್ಗಿಸುತ್ತಿವೆ. ಇದರಿಂದ ನನ್ನ ಆರೋಗ್ಯವೂ ಹದಗೆಡುತ್ತಿದೆ. ಇದನ್ನೂ ಓದಿ: ಡ್ರಗ್ಸ್ ಸೇವನೆ, ಮಾರಾಟ ಆರೋಪ- ರಿಯಾ ಚಕ್ರವರ್ತಿ ವಕೀಲ ಸ್ಪಷ್ಟನೆ

ಬಂಧನದಲ್ಲಿರುವ ನನ್ನ ಮೇಲೆ ತಪ್ಪೊಪ್ಪಿಕೊಳ್ಳುವಂತೆ ಮಾನಸಿಕವಾಗಿ ಒತ್ತಡ ಹಾಕಲಾಗುತ್ತಿದೆ. ತನಿಖಾ ಏಜೆನ್ಸಿಗಳ ವಿಚಾರಣೆಗೆ ಆರಂಭದ ದಿನಗಳಿಂದಲೂ ಸಂಪೂರ್ಣವಾಗಿ ಸಹಕಾರ ನೀಡುತ್ತಾ ಬಂದಿದ್ದೇನೆ. ನನ್ನ ಮೇಲೆ ಕೇಳಿ ಬಂದಿರುವ ಆರೋಪಗಳು ಸುಳ್ಳು. ತನಿಖಾಧಿಕಾರಿಗಳು ನನ್ನ ವಿರುದ್ಧ ಸಲ್ಲಿಸಿದ ದೋಷಾರೋಪ ಪಟ್ಟಿ ಸಹ ಸತ್ಯಕ್ಕೆ ದೂರವಾಗಿದೆ. ನಾನು ಯಾವುದೇ ತಪ್ಪು ಮತ್ತು ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಂಡಿಲ್ಲ ಎಂದು ರಿಯಾ ಸೆಪ್ಟೆಂಬರ್ 8ರಂದು ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ

ಸುಶಾಂತ್ ಡ್ರಗ್ಸ್ ಅಡಿಕ್ಟ್: ಮಂಗಳವಾರ ರಿಯಾ ಬಂಧನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ನಟಿ ಪರ ವಕೀಲ, ಸತೀಶ್ ಮನೋಶಿಂಧೆ, ಓರ್ವ ಡ್ರಗ್ಸ್ ಅಡಿಕ್ಟ್ ಸುಶಾಂತ್ ಸಿಂಗ್ ರಜಪೂತ್ ನನ್ನು ಪ್ರೀತಿ ಮಾಡಿದ ತಪ್ಪಿಗೆ ರಿಯಾ ಈ ಶಿಕ್ಷೆ ಅನುಭವಿಸುತ್ತಿದ್ದಾರೆ. ವಿಚಾರಣೆಗೆ ಸಹಕಾರ ನೀಡಿದ್ರೂ ಕಕ್ಷಿದಾರರ ಬಂಧನವಾಗಿದೆ. ಭಾನುವಾರ, ಸೋಮವಾರ ಸಹ ರಿಯಾ ಅವರನ್ನ ವಿಚಾರಣೆ ನಡೆಸಲಾಗಿದೆ. ಒಬ್ಬ ಮಹಿಳೆ ಹಿಂದೆ ಮೂರು ತನಿಖಾ ಏಜೆನ್ಸಿಗಳು ಬೆನ್ನು ಬಿದ್ದಿವೆ. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ

Share This Article
Leave a Comment

Leave a Reply

Your email address will not be published. Required fields are marked *