ರಾಯಚೂರಲ್ಲಿ ಗಾಯಕಿ ಮಂಗ್ಲಿ ಪ್ರಚಾರ- ಮುಗಿಬಿದ್ದ ಅಭಿಮಾನಿಗಳು

Public TV
1 Min Read

ರಾಯಚೂರು: ರಾಬರ್ಟ್ ಸಿನಿಮಾದ ಕಣ್ಣೇ ಅದಿರಿಂದಿ ಹಾಡಿನ ಮೂಲಕ ಪ್ರಸಿದ್ಧಿ ಪಡೆದಿರುವ, ಮಂಗ್ಲಿ ಎಂದೇ ಜನಪ್ರಿಯರಾಗಿರುವ ಗಾಯಕಿ ಸತ್ಯವತಿ ರಾಥೋಡ್ ಇಂದು ಬಿಜೆಪಿ ಅಭ್ಯರ್ಥಿ ಪ್ರತಾಪ್‍ಗೌಡ ಪಾಟೀಲ್ ಪರ ಪ್ರಚಾರ ನಡೆಸಿದ್ದಾರೆ.

ಮಸ್ಕಿ ಉಪಚುನಾವಣೆ ಹಿನ್ನೆಲೆ ಪ್ರತಾಪ್‍ಗೌಡ ಪಾಟೀಲ್ ಪರ ಮಂಗ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಅಡವಿಬಾವಿ ತಾಂಡಾ, ಹಡಗಲಿತಾಂಡಾ ಹಾಗೂ ಮಸ್ಕಿ ಭರ್ಜರಿ ಮತಯಾಚನೆ ಮಾಡಿದರು. ಈ ವೇಳೇ ಅಭಿಮಾನಿಗಳು ಮುಗಿಬಿದ್ದಿದ್ದು, ನೂಕುನುಗ್ಗಲಿನ ಮಧ್ಯೆಯೇ ನೆಚ್ಚಿನ ಗಾಯಕಿಯನ್ನು ಕಣ್ತುಂಬಿಕೊಂಡಿದ್ದಾರೆ. ಬಂಜಾರ ಸಮುದಾಯದ ಮತಗಳನ್ನು ಮಂಗ್ಲಿ ಸೆಳೆದಿದ್ದು, ತಾಂಡಾಗಳು ಹಾಗೂ ಮಸ್ಕಿ ಪಟ್ಟಣದಲ್ಲಿ ಭರ್ಜರಿ ಪತ ಬೇಟೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಗಾಯಕಿ, ಪ್ರತಾಪ್ ಗೌಡ ಪಾಟೀಲ್ ರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಬೇಕು. ಇಲ್ಲಿಗೆ ಬಂದಿದ್ದು ನನಗೆ ತುಂಬಾ ಖುಷಿಯಾಗಿದೆ. ಕಣ್ಣೇ ಅದಿರಿಂದಿ ಹಾಡು ನನಗೆ ಇಲ್ಲಿಗೆ ತಂದು ನಿಲ್ಲಿಸಿದೆ. ಎಲ್ಲೋ ಹುಟ್ಟಿದ ನನಗೆ ನೀವೂ ಗೌರವಿಸಿದ್ದು, ಯಾವುದೋ ಜನ್ಮದ ಪುಣ್ಯ. ಹಾಡು ಯಶಸ್ವಿ ಆಗಿದಕ್ಕೆ ಡಿ ಬಾಸ್ (ದರ್ಶನ್) ಹಾಗೂ ಎಲ್ಲರಿಗೂ ನನ್ನ ನಮಸ್ಕಾರ. ನಟ ಯಶ್ ಅವರ ಸಂದರ್ಶನ ಮಾಡಿದ್ದೇನೆ ನೋಡಿದ್ರಾ ಎಂದು ಪ್ರಶ್ನಿಸಿದ್ದಾರೆ.

ನೀವು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ನಾನು ಪ್ರಧಾನಿ ಮೋದಿ ಅಭಿಮಾನಿ, ಯಡಿಯೂರಪ್ಪನವರ ಮಗ ವಿಜಯೇಂದ್ರ ಅಣ್ಣನಿಗೂ ನಮಸ್ಕಾರ. ಯಾರೂ ಮರೆಯದೇ ಬಿಜೆಪಿಗೆ ಮತ ನೀಡಿ ಎಂದು ಮಂಗ್ಲಿ ಮನವಿ ಮಾಡಿದರು. ಮಂಗ್ಲಿ ಅವರು ಭಾಷಣ ಮಾಡುತ್ತಿದ್ದಂತೆ ನೆರೆದಿದ್ದ ಜನ ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

Share This Article
Leave a Comment

Leave a Reply

Your email address will not be published. Required fields are marked *