ರಾಬರ್ಟ್ ಸಿನಿಮಾ ನಿರ್ಮಾಪಕನ ಕೊಲೆಗೆ ಸಂಚು ಪ್ರಕರಣ- ಪ್ರಮುಖ ಆರೋಪಿಯ ಬಂಧನ

Public TV
1 Min Read

ಬೆಂಗಳೂರು: ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್ ಹಾಕಿದ್ದ ಪ್ರಕರಣ ಸಂಬಂಧ ಮತ್ತೊಬ್ಬ ಕಿಂಗ್ ಪಿನ್ ರಾಜೇಶ್ ಅಲಿಯಾಸ್ ಕರಿಯನನ್ನ ಬೆಂಗಳೂರಿನ ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ.

ಮೂರು ತಿಂಗಳ ಹಿಂದೆ ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್ ನಡೆದಿತ್ತು. ಕೊನೆ ಕ್ಷಣದಲ್ಲಿ ಎಚ್ಚೆತ್ತ ಪೊಲೀಸರು, ಆ ಕೊಲೆಗೆ ರೆಡಿಯಾಗಿದ್ದ ಆರೋಪಿಗಳನ್ನು ಮಾರಕಾಸ್ತ್ರಗಳ ಸಮೇತ ಬಂಧಿಸಿದ್ದರು. ಈ ವೇಳೆ ಹಲವರು ಎಸ್ಕೇಪ್ ಕೂಡ ಆಗಿದ್ರು. ಅವರಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ರಾಜೇಶ್ ಅಲಿಯಾಸ್ ಕರಿಯ ಬಾಂಬೆ ರವಿ ಟೀಂ ನಲ್ಲಿ ಗುರುತಿಸಿಕೊಂಡಿದ್ದು, ಬಾಂಬೆ ರವಿ ಸೂಚನೆ ಯಂತೆ ಉಮಾಪತಿಯನ್ನು ಕೊಲೆ ಮಾಡಲು ತಂಡದೊಂದಿಗೆ ಪ್ಲ್ಯಾನ್ ಮಾಡಿಕೊಂಡಿದ್ದ ಎನ್ನಲಾಗಿದೆ.

ಪೊಲೀಸರ ಎಂಟ್ರಿಯಾಗುತ್ತಲೇ ಕರಿಯ ತಪ್ಪಿಸಿಕೊಂಡು ನೇಪಾಳದ ಬಾರ್ಡರ್ ನಲ್ಲಿ ತಲೆಮರೆಸಿಕೊಂಡಿದ್ದನು. ಸತತ ಮೂರು ತಿಂಗಳು ಕಾರ್ಯಚರಣೆ ನಡೆಸಿದ ಪೊಲೀಸರು ರಾಜೇಶ್ ಅಲಿಯಾಸ್ ಕರಿಯನ್ನು ನೇಪಾಳದ ಗಡಿಯಲ್ಲಿ ಬಂಧಿಸಿದ್ದಾರೆ. ಲೋಕಲ್ ರೌಡಿಯಾಗಿದ್ದ ಕರಿಯ, ಬಾಂಬೆ ರವಿ ಜೊತೆಗೆ ಸೇರಿ ನ್ಯಾಷನಲ್ ಲೆವೆಲ್ ರೌಡಿ ಆಗಬೇಕು. ಹೆಸರು ಮಾಡಬೇಕು ಅಂತಾ ಆಸೆ ಪಟ್ಟಿದ್ದ. ಅದರಂತೆ ಕೆಲ ಉದ್ಯಮಿಗಳು, ಸಿನಿಮಾ ನಿರ್ಮಾಪಕರು, ನಟರಿಗೆ ಬೆದರಿಕೆ ಹಾಕುವುದು, ಕೊಲೆ, ವಸೂಲಿಯಂತ ದಂಧೆಗಳಲ್ಲಿ ತಲೆ ಹಾಕಿ ಬೆದರಿಸುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಸದ್ಯ ಪೊಲೀಸರ ವಶದಲ್ಲಿರುವ ರಾಜೇಶ್ ಅಲಿಯಾಸ್ ಕರಿಯನ ವಿಚಾರಣೆಯಿಂದ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬರಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *