ಮಂಡ್ಯ: ರಾಧಿಕಾ ಯಾರೋ ಗೊತ್ತಿಲ್ಲ. ಯಾರಪ್ಪ ಅವರೆಲ್ಲ ಎಂದು ಕುಮಾರಸ್ವಾಮಿ ಮಂಡ್ಯದಲ್ಲಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮದಲ್ಲಿ ನಡೆದ ಕುಡಿಯುವ ನೀರಿನ ಯೋಜನೆ ಉಧ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಕುಮಾರಸ್ವಾಮಿಯವರು ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಸಿಸಿಬಿಯಿಂದ ರಾಧಿಕಾ ಕುಮಾರಸ್ವಾಮಿ ವಿಚಾರಣೆ ಹಿನ್ನೆಲೆ ಮಾತನಾಡಿದ ಅವರು ರಾಧಿಕಾ ಯಾರು ಎಂದು ನನಗೆ ಗೊತ್ತಿಲ್ಲ. ಯಾರಪ್ಪ ಅವರೆಲ್ಲ ಎಂದು ಕುಮಾರಸ್ವಾಮಿ ರಾಧಿಕಾ ಕುಮಾರಸ್ವಾಮಿ ವಿಚಾರವಾಗಿ ಪ್ರತಿಕ್ರಿಯೆ ನೀಡದೇ ತೆರಳಿದರು.
ನಮ್ಮ ಪಕ್ಷಕ್ಕೆ ಬಹುಮತ ಬರದೆ ಇದ್ದರು ನಿಮ್ಮ ಆಶಿರ್ವಾದದ ಮೂಲಕ ಮುಖ್ಯಮಂತ್ರಿ ಆಗಿದ್ದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದೆ. ಬಿಜೆಪಿ ಅದನ್ನ ಬೇರೆಡೆಗೆ ವರ್ಗಾಯಿಸಿದರು. ಕಳೆದು ಹೋದ ಸಂದರ್ಭಗಳ ಬಗ್ಗೆ ಯೋಚನೆ ಮಾಡುತ್ತಾ ನಾನು ಕೂರಲ್ಲ. ಮುಂದಿನ ದಿನಗಳಲ್ಲಿ ನಾವು ಸ್ವತಂತ್ರವಾಗಿ ಸರ್ಕಾರದ ಅಧಿಕಾರಕ್ಕೆ ಬರುತ್ತೇವೆ. ಮುಂದಿನ 2023 ಕರ್ನಾಟಕ ರಾಜ್ಯ ಜನತಾದಳದ ರಾಜ್ಯವಾಗಲಿ. ಆ ನಿಟ್ಟಿಲ್ಲಿ ಏನೆಲ್ಲಾ ಪ್ರಯತ್ನಗಳನ್ನು ಮಾಡಬೇಕೋ ಆ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತೇನೆ ಎಂದಿದ್ದಾರೆ.
ಇನ್ನೊಂದು ವರ್ಷ ನಾನು ಮುಖ್ಯಮಂತ್ರಿಯಾಗಿ ಮುಂದುವರೆದಿದ್ದರೆ ಹೊಸ ಶುಗರ್ ಫ್ಯಾಕ್ಟರಿ ಮಾಡ್ತಿದ್ದೆ. ನಾನು ಕೊಟ್ಟ ಕಾರ್ಯಕ್ರಮಕ್ಕೆ ನಿನ್ನೆ ಮುಖ್ಯಮಂತ್ರಿ ಕೊಪ್ಪಳದಲ್ಲಿ ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿಗಳಿಗೆ ಕನಿಷ್ಠ ಕೃತಜ್ಞತೆ ಸಲ್ಲಿಸುವ ಮನಸ್ಸಿಲ್ಲ. ನನ್ನ ದುರಾದೃಷ್ಟ ನನ್ನ ಸರ್ಕಾರವನ್ನ ತೆಗೆಯಬೇಕು ಅಂತ ಹಲವು ಷಡ್ಯಂತ್ರ ನಡೆಯಿತು. ಸಕ್ಕರೆ ಕಾರ್ಖಾನೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಅದನ್ನ ಉಳಿಸಿಕೊಡೋದು ನನ್ನ ಜವಾಬ್ದಾರಿ ಎಂದಿದ್ದಾರೆ.